IPL 2025 Auction: ಐಪಿಎಲ್ ಮಾಜಿ ನಾಯಕನಿಗೆ ಇಷ್ಟೇನಾ ಬೆಲೆ?
ಐಪಿಎಲ್ 2025ರ ಮೆಗಾ ಹರಾಜು ಪ್ರಕ್ರಿಯ ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆಗೂ ಮೀರಿ ನಡೆದಿದೆ. ಕೆಲವು ಆಟಗಾರರು ಜಾಕಪಾಟ್ ಹೊಡೆದರೆ, ಇನ್ನು ಕೆಲವು ಸ್ಟಾರ್ ಆಟಗಾರರು ಅನ್‌ಸೋಲ್ಡ್ ಆಗಿರುವುದು ಅಚ್ಚರಿ ಮೂಡಿಸಿದೆ. ಈ ಹಿಂದೆ ಐಪಿಎಲ್‌ನಲ್ಲಿ ತಂಡಗಳನ್ನು ಮುನ್ನಡೆಸಿದ ಮಾಜಿ ನಾಯಕರು ಕೂಡ ಅನ್‌ಸೋಲ್ಡ್ ಆಗಿದ್ದಾರೆ. ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್, ಸ್ವೀವ್ ಸ್ಮಿತ್ ಮತ್ತು ಕನ್ನಡಿಗ ಮಾಯಾಂಕ್ ಅರ್ಗವಾಲ್ ಅನ್‌ಸೋಲ್ಡ್ ಆದ ಮಾಜಿ ನಾಯಕರಾಗಿದ್ದಾರೆ. ಆದರೆ ಅನ್‌ಸೋಲ್ಡ್ ಆಟಗಾರ ಪಟ್ಟಿಯಿಂದ ಮಾಜಿ ನಾಯಕರೊಬ್ಬರು ಹೊರಗುಳಿದಿದ್ದಾರೆ.
ಐಪಿಎಲ್ 2025 ಮೆಗಾ ಹರಾಜಿನಲ್ಲಿ ಈ ಆಟಗಾರ ಬಿಡ್ ಆಗುವ ಮೂಲಕ ತಮ್ಮ ಗೌರವವನ್ನು ಉಳಿಸಿಕೊಂಡಿದ್ದಾರೆ. ಈಗ ಈ ಆಟಗಾರ ಐಪಿಎಲ್ 2025ರ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪರ ಆಡಲಿದ್ದಾರೆ. ಬಹುದಿನಗಳಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಮಧ್ಯಮ ಕ್ರಮಾಂಕದ ಬ್ಯಾಟರ್ ಅಜಿಂಕ್ಯ ರಹಾನೆ ಅವರನ್ನು ಕೆಕೆಆರ್ ಮೂಲ ಬೆಲೆ 1.5 ಕೋಟಿ ರೂ.ಗೆ ಖರೀದಿಸಿದೆ. ಅಜಿಂಕ್ಯ ರಹಾನೆ ಈಗ ಐಪಿಎಲ್ 2025ರಲ್ಲಿ ಕೆಕೆಆರ್ ಪರ ಕಣಕ್ಕೀಳಿಯಲಿದ್ದಾರೆ. ಇದಕ್ಕೂ ಮೊದಲು, ಅಜಿಂಕ್ಯ ರಹಾನೆ ಅವರು ಕಳೆದ ಎರಡು ಐಪಿಎಲ್ ಆವತ್ತಿಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಭಾಗವಾಗಿದ್ದರು.

ಅಜಿಂಕ್ಯ ರಹಾನೆ ಸಿಎಸ್‌ಕೆ ಪರ ಐಪಿಎಲ್ 2024 ರಲ್ಲಿ ಆಡಿದ 13 ಪಂದ್ಯಗಳಲ್ಲಿ 242 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಈ ಕಳಪೆ ಪ್ರದರ್ಶನದ ದೃಷ್ಟಿಯಿಂದ ಸಿಎಸ್‌ಕೆ ತಂಡವು ಅವರನ್ನು ಬಿಡುಗಡೆ ಮಾಡಿತ್ತು. ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ರಹಾನೆ ಅವರನ್ನು ಬಿಡ್ ಮಾಡಲು ಯಾವುದೇ ತಂಡ ಮುಂದಾಗಿರಲಿಲ್ಲ. ಈ ವೇಳೆ ಕೆಕೆಆರ್ ಫ್ರಾಂಚೈಸಿ ಅಜಿಂಕ್ಯ ರಹಾನೆ ಅವರನ್ನು 1.5 ಕೋಟಿ ರೂ.ಗೆ ಖರೀದಿಸಿತು.
ಅಜಿಂಕ್ಯ ರಹಾನೆ ಅವರು ಈ ಹಿಂದೆ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸಿದ್ದಾರೆ. ಆದರೆ ಕಳೆದ ಮೂರು ಐಪಿಎಲ್ ಆವೃತ್ತಿಗಳಿಂದ ಅಜಿಂಕ್ಯ ರಹಾನೆ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ. ಹೀಗಾಗಿ ಅವರನ್ನು ಬಿಡ್ ಮಾಡಲು ಫ್ರಾಂಚೈಸಿಗಳು ಮುಂದಾಗಿರಲಿಲ್ಲ. ಕೊನೆಗೆ ಕೆಕೆಆರ್ ಫ್ರಾಂಚೈಸಿ ರಹಾನೆ ಮರ್ಯಾದೆ ಉಳಿಸಿದೆ.
ಅಜಿಂಕ್ಯ ರಹಾನೆ 16 ತಿಂಗಳ ಹಿಂದೆ ಭಾರತದ ಪರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದು, ಅಂದಿನಿಂದಲ್ಲೂ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾರೆ. ಅಜಿಂಕ್ಯ ರಹಾನೆ ಇದುವರೆಗೆ 185 ಐಪಿಎಲ್ ಪಂದ್ಯಗಳಲ್ಲಿ 30.14 ಸರಾಸರಿಯಲ್ಲಿ 4642 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕಗಳು ಮತ್ತು 30 ಅರ್ಧ ಶತಕಗಳು ಸೇರಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications