Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025: ರಿಷಬ್ ಪಂತ್‌ಗೆ ಸಿಕ್ತು ಬರೋಬ್ಬರಿ 27 ಕೋಟಿ; ಕೈ ಸೇರೋದ್ ಮಾತ್ರ ಇಷ್ಟೇ!

ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ರಿಷಬ್ ಪಂತ್ ದುಬಾರಿ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಫ್ರಾಂಚೈಸಿ ರಿಷಬ್ ಪಂತ್ ಅವರನ್ನು 27 ಕೋಟಿ ರೂ.ಗೆ ಬಿಡ್ ಮಾಡಿದೆ. ಈ ಮೂಲಕ ರಿಷಬ್ ಪಂತ್ ಐಪಿಎಲ್ ಹರಾಜು ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಖರೀದಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

ಐಪಿಎಲ್‌ ಮೆಗಾ ಹರಾಜಿನಲ್ಲಿ 27 ಕೋಟಿ ರೂ. ಪಂತ್ ಅವರಿಗೆ ಎಷ್ಟು ಹಣ ಸೇರುತ್ತದೆ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿಯೂ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಇದೀಗ ಈ ಕುರಿತು ಕೆಲವು ವರದಿಗಳು ಹೊರಬಂದಿವೆ. ಎಲ್‌ಎಸ್‌ಜಿ ಫ್ರಾಂಚೈಸಿ ರಿಷಬ್ ಪಂತ್‌ ಅವರನ್ನು 27 ಕೋಟಿ ರೂ.ಗೆ ಬಿಡ್ ಮಾಡಿದ್ದರೂ, ಸಂಪೂರ್ಣ ಮೊತ್ತ ಅವರಿಗೆ ತಲುಪುವುದಿಲ್ಲ ಎಂದು ವರದಿಗಳು ಹೇಳಿವೆ. ಹಾಗಾದರೆ 27 ಕೋಟಿ ರೂ.ನಲ್ಲಿ ಪಂತ್ ಕೈ ಸೇರುವುದು ಎಷ್ಟು ಎಂಬುದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ ಇಲ್ಲಿದೆ.

How Much Money Will Rishabh Pant Receive After Being Auctioned for 27 Crore in IPL 2025 Mega Auction

ಮೆಗಾ ಹರಾಜಿನಲ್ಲಿ ರಿಷಬ್ ಪಂತ್ ಪಡೆದಿರುವ 27 ಕೋಟಿ ರೂ. ಮೊತ್ತವನ್ನು ಕಡಿತಗೊಳಿಸಲಾಗುತ್ತದೆ. ಭಾರತ ಸರ್ಕಾರದ ಆದಾಯ ತೆರಿಗೆ ಕಾಯ್ದೆ ಪ್ರಕಾರ ರಿಷಬ್ ಪಂತ್ ಅವರು ಸರ್ಕಾರಕ್ಕೆ 8.1 ಕೋಟಿ ರೂ.ಗಳನ್ನು ತೆರಿಗೆಯಾಗಿ ಪಾವತಿಸಬೇಕಾಗುತ್ತದೆ. ಆದ್ದರಿಂದ, ಒಟ್ಟು ಒಪ್ಪಂದದ ಮೊತ್ತ 27 ಕೋಟಿಯಲ್ಲಿ 8.1 ಕೋಟಿ ರೂ.ಗಳನ್ನು ಕಡಿತಗೊಳಿಸಿದರೆ, ರಿಷಬ್ ಪಂತ್ ಅವರಿಗೆ 18.9 ಕೋಟಿ ರೂ. ಸಿಗಲಿದೆ.

ಎಲ್ಲ ಆಟಗಾರರಿಗೆ ಕಾಯ್ದೆ ಅನ್ವಯ

ಐಪಿಎಲ್ ಮೆಗಾ ಹರಾಜಿನಲ್ಲಿ ಬಿಡ್ ಆದ ವಿದೇಶಿ ಆಟಗಾರರು ಕೂಡ ಭಾರತ ಸರ್ಕಾರಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ . ತೆರಿಗೆ ಪಾವತಿಸಿದ ನಂತರವೇ ಅವರಿಗೆ ಸಂಭಾವನೆ ನೀಡಲಾಗುವುದು ಎಂದು ವರದಿಗಳು ಹೇಳಿವೆ. ಐಪಿಎಲ್ ಮೆಗಾ ಹರಾಜಿನಲ್ಲಿ ಡೆಲ್ಲಿ ತಂಡ ರಿಷಬ್ ಪಂತ್ ಅವರನ್ನು 20.75 ಕೋಟಿ ರೂ.ಗೆ ಆರ್‌ಟಿಎಂ ಮೂಲಕ ಉಳಿಸಿಕೊಳ್ಳಲು ಯತ್ನಿಸಿತ್ತು. ಲಕ್ನೋ ತಂಡ ಮಧ್ಯಪ್ರವೇಶಿಸಿ ರಿಷಬ್ ಪಂತ್ ಅವರನ್ನು ತಕ್ಷಣವೇ 27 ಕೋಟಿ ರೂ.ಗೆ ಬಿಡ್ ಮಾಡಿತ್ತು. ಇದೀಗ 18ನೇ ಐಪಿಎಲ್ ಆವೃತ್ತಿಯಲ್ಲಿ ರಿಷಬ್ ಪಂತ್ ಲಕ್ನೋ ನಾಯಕತ್ವ ವಹಿಸುವ ನಿರೀಕ್ಷೆಯಿದೆ. ಐಪಿಎಲ್ 18ನೇ ಆವೃತ್ತಿ ಮುಂದಿನ ವರ್ಷ ಮಾರ್ಚ್ 14ರಿಂದ ಆರಂಭವಾಗಲಿದೆ.

Story first published: Wednesday, November 27, 2024, 23:42 [IST]
Other articles published on Nov 27, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+