For Quick Alerts
ALLOW NOTIFICATIONS  
For Daily Alerts
 

ODI World Cup: ವಿಶ್ವಕಪ್ ಕಳೆದುಕೊಂಡರೂ ಭಾರತಕ್ಕೆ ಬಂಪರ್ ಲಾಭ

ಕಳೆದ ವರ್ಷ ನಡೆದ 2023ರ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸಿತ್ತು. ಟೂರ್ನಿಯಲ್ಲಿ ಟೀಮ್ ಇಂಡಿಯಾ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಅದರಂತೆ ವಿಶ್ವಕಪ್‌ ಫೈನಲ್ ತಲುಪಿದ್ದ
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಸೋಲು ಅನುಭವಿಸಬೇಕಾಯಿತು.

ಟೂರ್ನಿಯುದ್ದಕ್ಕೂ ಭಾರತ ತಂಡ ಅಮೋಘ ಪ್ರದರ್ಶನ ನೀಡಿದರೂ, ವಿಶ್ವಕಪ್ ಅನ್ನು ಕಳೆದುಕೊಂಡಿತ್ತು. ಇದಾದ ನಂತರ ಕೋಟ್ಯಾಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಆಘಾತ ಎದುರಿಸಿದ್ದರು. ಆದರೆ ಈ ಟೂರ್ನಿ ದೇಶದ ಆರ್ಥಿಕತೆಗೆ ಕೋಟ್ಯಾಂತರ ರೂಪಾಯಿಗಳ ಆದಾಯವನ್ನು ತಂದು ಕೊಟ್ಟಿದೆ.

How much will 2023 ODI World Cup tournament benefit Indian economy

ಎಷ್ಟು ಕೋಟಿ ಆದಾಯ?

ಇತ್ತೀಚೆಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ವರದಿ ಪ್ರಕಾರ, 2023ರ ಅಕ್ಟೋಬರ್-ನವೆಂಬರ್‌ನಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಿಂದ ಭಾರತ ಆರ್ಥಿಕತೆಗೆ 1.39 ಬಿಲಿಯನ್ ಡಾಲರ್ ಅಂದರೆ ಬರೋಬ್ಬರಿ 11,637 ಕೋಟಿ ರೂ.ಗಿಂತ ಹೆಚ್ಚು ಲಾಭವಾಗಿದೆ.

ಸುಮಾರು 45 ದಿನಗಳ ಕಾಲ ನಡೆದ ಈ ಟೂರ್ನಿಯನ್ನು 10 ಪ್ರಮುಖ ನಗರಗಳಲ್ಲಿ ಆಯೋಜಿಸಲಾಗಿತ್ತು. ಈಗ 10 ಪ್ರಮುಖ ನಗರಗಳಾದ ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಧರ್ಮಶಾಲಾ, ಹೈದರಾಬಾದ್, ಕೋಲ್ಕತ್ತಾ, ಲಕ್ನೋ, ಮುಂಬೈ ಮತ್ತು ಪುಣೆ ನಗರಗಳು ಪ್ರವಾಸೋದ್ಯಮದಿಂದ 861 ಮಿಲಿಯನ್ ಡಾಲರ್ ಆದಾಯವನ್ನು ಪಡೆದಿವೆ.

ವಿಶ್ವಕಪ್ ಟೂರ್ನಿಯ ಪಂದ್ಯಗಳನ್ನು ನೋಡಲು ದೇಶ-ವಿದೇಶಗಳಿಂದ ಅಪಾರ ಸಂಖ್ಯೆಯಲ್ಲಿ ಕ್ರಿಕೆಟ್ ಆಗಮಿಸಿದ್ದರು. ಅವರು ಪಂದ್ಯವನ್ನು ವೀಕ್ಷಿಸುವುದು ಮಾತ್ರವಲ್ಲದೆ ಇತರ ಚಟುವಟಿಕೆಗಳಲ್ಲಿಯೂ ಭಾಗವಹಿಸಿದ್ದರು. ಹೀಗಾಗಿ ಆಯಾ ನಗರಗಳು ಅವರೆಲ್ಲರಿಗೂ ವಸತಿ, ಪ್ರಯಾಣ, ಸಾರಿಗೆ, ಆಹಾರ ಮತ್ತು ಪಾನೀಯಗಳ ಮೂಲಕ ಭಾರೀ ಮೊತ್ತದ ವ್ಯವಹಾರಗಳನ್ನು ನಡೆಸಿವೆ. ಒಟ್ಟು 12.5 ಲಕ್ಷ ಮಂದಿ ವಿಶ್ವಕಪ್ ವೀಕ್ಷಿಸಿರುವುದು ಐಸಿಸಿ ವರದಿ ಸ್ಪಷ್ಟಪಡಿಸಿದೆ.

ವಿಶ್ವಕಪ್ ಚಾಂಪಿಯನ್

2023ರ ಅಕ್ಟೋಬರ್ 5 ರಂದು ಅಹಮದಾಬಾದ್‌ನಲ್ಲಿ ನಡೆದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದೊಂದಿಗೆ ಏಕದಿನ ವಿಶ್ವಕಪ್ ಟೂರ್ನಿ ಪ್ರಾರಂಭವಾದರೆ, ನವೆಂಬರ್ 19 ರಂದು ಅಹಮದಾಬಾದ್‌ ಫೈನಲ್‌ ನಡೆಯಿತು. ಆಸ್ಟ್ರೇಲಿಯಾ 6 ವಿಕೆಟ್‌ಗಳಿಂದ ಭಾರತವನ್ನು ಸೋಲಿಸುವ ಮೂಲಕ 6ನೇ ಬಾರಿ ಪ್ರಶಸ್ತಿಯನ್ನು ಗೆದ್ದು ಇತಿಹಾಸ ಸೃಷ್ಟಸಿತ್ತು. ಭಾರತ ತಂಡವು ಫೈನಲ್‌ಗೆ ತಲುಪಲು ಸತತ 10 ಪಂದ್ಯಗಳನ್ನು ಗೆದ್ದಿತ್ತು.

Story first published: Thursday, September 12, 2024, 12:34 [IST]
Other articles published on Sep 12, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+