Bengaluru Test: ಭಾರತದಿಂದ ಸಾಧ್ಯವಾಗದನ್ನು ನ್ಯೂಜಿಲೆಂಡ್ ಗಳಿಸಿದ್ದೇಗೆ?
ಬೆಂಗಳೂರು ಟೆಸ್ಟ್ ಪಂದ್ಯದ ಗೆಲುವಿನ ಮೇಲೆ ಭಾರತ ಮತ್ತು ನ್ಯೂಜಿಲೆಂಡ್ ಕಣ್ಣಿಟ್ಟಿವೆ. ಆದರೆ ಭಾರತ ಮೊದಲ ಇನಿಂಗ್ಸ್‌ನಲ್ಲಿ ಭಾರೀ ಹಿನ್ನಡೆ ಅನುಭವಿಸಿದೆ. ಮೊದಲ ಬಾರಿಗೆ ತವರು ನೆಲದಲ್ಲಿ ಭಾರತ 46 ರನ್‌ಗಳಗೆ ಆಲೌಟ್ ಆಗಿದ್ದು, ಹಲವು ಟೀಕೆಗಳನ್ನು ಎದುರಿಸುವಂತಾಗಿದೆ. ಇತ್ತ ನ್ಯೂಜಿಲೆಂಡ್ ಅದ್ಭುತ ಪ್ರದರ್ಶನ ನೀಡುವ ಮೂಲಕ ಪಂದ್ಯದ ಮೇಲೆ ಪ್ರಾಬಲ್ಯ ಸಾಧಿಸಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೊಲದ ಟೆಸ್ಟ್ ಪಂದ್ಯವನ್ನು ಭಾರತ ಗೆಲ್ಲುವ ನಿರೀಕ್ಷೆಯಲ್ಲಿದೆ. ಆದರೆ ನ್ಯೂಜಿಲೆಂಡ್ ಆಟಗಾರರು ಇದಕ್ಕೆ ಅವಕಾಶ ನೀಡದ ರೀತಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಪಂದ್ಯದ ಫಲಿತಾಂಶ ಇನ್ನೂ ಕುತೂಹಲಕಾರಿಯಾಗಿದೆ.

ಮೊದಲ ದಿನದಾಟ ಮಳೆಯಿಂದ ರದ್ದಾಗಿತ್ತು. ಇದಾದ ಬಳಿಕ ಶುರುವಾದ ಎರಡನೇ ದಿನದಾಟದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ಕೆ ಮಾಡಿದರು. ಈ ವೇಳೆ ಎಲ್ಲರಿಗೂ ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡಲು ತೆಗೆದುಕೊಂಡ ನಿರ್ಧಾರ ಅಚ್ಚರಿ ಎನಿಸಿತ್ತು. ಬ್ಯಾಟಿಂಗ್ ಆರಂಭಿಸಿದ ರೋಹಿತ್ ಶರ್ಮಾ ಪಡೆಯನ್ನು ಮೊದಲ ಇನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ವೇಗದ ಬೌಲರಗಳು ಕಟ್ಟಿ ಹಾಕಿದರು. ಮತ್ತೊಂದೆಡೆ ಭಾರತ ಕಡಿಮೆ ಸ್ಕೋರ್ ಗಳಿಸಲು ಬ್ಯಾಟಿಂಗ್ ವೈಫಲಯೂ ಒಂದು ಕಾರಣ.
ನ್ಯೂಜಿಲೆಂಡ್ ಗಳಿಸಿದ್ದೇಗೆ?
ತವರಿನ ಚಿನ್ನಸ್ವಾಮಿ ಅಂಗಳದಲ್ಲಿ ಭಾರತ ಸಾಧಿಸಲು ಸಾಧ್ಯವಾಗದನ್ನು ನ್ಯೂಜಿಲೆಂಡ್ ಸಾಧಿಸಿದೆ. ಟಾಸ್ ಗೆದ್ದು ರೋಹಿತ್ ಶರ್ಮಾ ವಾತಾವರಣವನ್ನು ಲೆಕ್ಕಚಾರ ಹಾಕಿ ತೆಗೆದುಕೊಂಡಿದ್ದ ನಿರ್ಧಾರ ಸರಿಯಾಗಿತ್ತು. ಆದರೆ ಬ್ಯಾಟಿಂಗ್ ಆಯ್ದುಕೊಂಡಿದ ರೋಹಿತ್ ಯೋಜನೆ ಸಂಪೂರ್ಣ ಉಲ್ಟಾ ಹೊಡೆದಿತ್ತು.
ಬೆಂಗಳೂರು ಟೆಸ್ಟ್ ಪಂದ್ಯದ ಮೊದಲ ದಿನದಾಟಕ್ಕೆ ಮಳೆ ಅಡ್ಡಿ ಪಡಿಸಿತ್ತು. ಎರಡನೇ ದಿನ ಮಳೆ ನಿಂತ ಕಾರಣ ಆಟ ಪ್ರಾರಂಭವಾಗಿತ್ತು. ಇದರಿಂದ ಪಿಚ್ ಒದ್ದೆಯಾಗಿತ್ತು. ಇದರ ಆಧಾರದ ಮೇಲೆ ಈ ಪಿಚ್ ಮೇಲೆ ಒಂದು ಗಂಟೆ ಕಾಲ ಸಮಯವನ್ನು ಕಳೆದರೆ ಬ್ಯಾಟಿಂಗ್ ಮಾಡುವುದಕ್ಕೆ ಸುಲಭವಾಗಬಹುದು ಎಂದು ರೋಹಿತ್ ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದರು.
ಆದರೆ ಇದಕ್ಕೆ ಸೂರ್ಯ ಅವಕಾಶವನ್ನೇ ನೀಡಲಿಲ್ಲ. ಪಂದ್ಯ ಆರಂಭವಾದ ಕೆಲವು ನಿಮಿಷಗಳಲ್ಲಿ ಪುನಃ ವರುಣನ ಆಗಮನವಾಗಿತ್ತು. ಇಲ್ಲಿಂದ ಭಾರತದ ನಿರ್ಧಾರ ತಪ್ಪಾಗಿ ಕಾಣಿಸಿಕೊಂಡಿತು. ರೋಹಿತ್ ಅವರ ಈ ಒಂದು ನಿರ್ಧಾರ 46 ರನ್‌ಗಳಿಗೆ ಭಾರತ ಆಲೌಟ್ ಆಗಿ ಟೀಕೆಗೆ ಒಳಗಾಗುವಂತೆ ಮಾಡಿತು. ಆದರೆ ಇದೇ ಪಿಚ್‌ನಲ್ಲಿ ನ್ಯೂಜಿಲೆಂಡ್ ಬ್ಯಾಟರ್‌ಗಳು ಅದ್ಭುತವಾಗಿ ರನ್ ಗಳಿಸಿದರು.
ಕೀವಿಸ್ ಪಡೆಗೆ ಸೂರ್ಯನ ರಕ್ಷೆ
ಭಾರತವನ್ನು ಆಲೌಟ್ ಮಾಡಿ ನ್ಯೂಜಿಲೆಂಡ್ ಮೊದಲ ಇನಿಂಗ್ಸ್ ಆಡುವಾಗ ಬಿಸಿಲು ಬಂದಿತ್ತು. ಸೂರ್ಯ ಕಿರಣಗಳ ಶಾಖದಿಂದ ನ್ಯೂಜಿಲೆಂಡ್ ಪಂದ್ಯದ ಮೇಲೆ ಹಿಡಿತ ಸಾಧಿಸಲು ನೆರವಾಯಿತು. ಬಿಸಿಲು ಬಂದ ನಂತರ ಒದ್ದೆಯಾಗಿದ್ದ ಪಿಚ್ ಒಣಗಿತ್ತು. ಹೀಗಾಗಿ ಭಾರತದ ಬೌಲರ್‌ಗಳು ಹಾಕುತ್ತಿದ್ದ ಚೆಂಡುಗಳು ನ್ಯೂಜಿಲೆಂಡ್ ಬ್ಯಾಟರ್‌ಗಳಿಗೆ ಯಾವುದೇ ವ್ಯತ್ಯಾಸ ಉಂಟು ಮಾಡಲಿಲ್ಲ.
ಪರಿಣಾಮ ನ್ಯೂಜಿಲೆಂಡ್ ತಂಡವನ್ನು ಕಡಿಮೆ ಅಂತರದಲ್ಲಿ ಭಾರತದ ಬೌಲರ್‌ಗಳು ಅಂದುಕೊಂಡಂತೆ ಆಲೌಟ್ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಭಾರತದ ಬೌಲಿಂಗ್ ದಾಳಿಯನ್ನು ಕಿವೀಸ್ ಪಡೆ ಸುಲಭವಾಗಿ ಎದುರಿಸಿ 352 ರನ್‌ಗಳ ಭಾರೀ ಮುನ್ನಡೆಯನ್ನು ಸಾಧಿಸಿತು. ಇದೀಗ ಎರಡನೇ ಇನಿಂಗ್ಸ್‌ನಲ್ಲಿ ಭಾರತ ತಂಡದ ಟಾಪ್ ಆರ್ಡರ್ ಬ್ಯಾಟಿಂಗ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಏಕೆಂದರೆ ಪಿಚ್ ಬ್ಯಾಟಿಂಗ್ ಮಾಡಲು ಉಪಯುಕ್ತವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications