ಪ್ರಭ್‌ಸಿಮ್ರಾನ್ ಸಿಂಗ್ ತಾಯಿಯ ಕೈರುಚಿಗೆ ಪ್ರೀತಿ ಜಿಂಟಾ ಫಿದಾ
ಪಂಜಾಬ್ ಕಿಂಗ್ಸ್ ಈ ಆವೃತ್ತಿಯ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದೆ. ಈ ವೇಳೆ ತಂಡದ ಪ್ರತಿಯೊಬ್ಬ ಆಟಗಾರ ತನ್ನ ಜವಾಬ್ದಾರಿಯನ್ನು ಅರಿತು ಬ್ಯಾಟ್ ಮಾಡುತ್ತಿದ್ದಾರೆ. ತಂಡದಲ್ಲಿರುವ ಯುವ ಹಾಗೂ ಅನುಭವಿ ಆಟಗಾರರು ತಮ್ಮ ಕ್ಷಮತೆಗೆ ತಕ್ಕ ಪ್ರದರ್ಶನ ನೀಡುತ್ತಿದ್ದಾರೆ. ಈ ವೇಳೆ ತಂಡದ ಮಾಲೀಕೆ ಪ್ರೀತಿ ಜಿಂಟಾ ಆ ಒಬ್ಬ ಪ್ಲೇಯರ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಆ ಪ್ಲೇಯರ್ ಯಾರು ಎಂಬ ಬಗ್ಗೆ ವರದಿ ಇಲ್ಲಿದೆ.
ಪಂಜಾಬ್ ಕಿಂಗ್ಸ್ ತಂಡದಲ್ಲಿರುವ ಯುವ ಆಟಗಾರ ಪ್ರಭ್‌ಸಿಮ್ರನ್ ಸಿಂಗ್ ತಮ್ಮ ಸ್ಥಿರ ಪ್ರದರ್ಶನದಿಂದ ತಂಡದ ಜಯದಲ್ಲಿ ಮಿಂಚಿದ್ದಾರೆ. ವಿಕೆಟ್ ಕೀಪರ್ ಬ್ಯಾಟರ್ ಆಗಿ ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಇವರ ಕಠಿಣ ಪರಿಶ್ರಮ ಮತ್ತು ಐಪಿಎಲ್ ಪ್ರಯಾಣದ ಬಗ್ಗೆ ಸಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಈಗ ಸಖತ್ ವೈರಲ್ ಆಗಿದೆ. ಇದೇ ಪೋಸ್ಟ್‌ಗೆ ಪ್ರೀತಿ ಜಿಂಟಾ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಪ್ರೀತಿ ಪೋಸ್ಟ್‌ನಲ್ಲಿ ಏನಿದೆ?
ಪ್ರೀತಿ ಜಿಂಟಾ, ಪ್ರಭ್‌ಸಿಮ್ರನ್ ಸಿಂಗ್ ಅವರ ಬಗ್ಗೆ ಪೋಸ್ಟ್ ಒಂದನ್ನು ಮಾಡಿದ್ದಾರೆ. ಪ್ರಭ್‌ಸಿಮ್ರನ್ ಅತ್ಯಂತ ಮೃದು ಸ್ವಭಾವದವರು, ಸುಸಂಸ್ಕೃತರು ಎಂದು ಪ್ರೀತಿ ಬಣ್ಣಿಸಿದ್ದಾರೆ. ಅಲ್ಲದೆ ಪ್ರತಿ ಐಪಿಎಲ್ ಸೀಸನ್‌ನಲ್ಲಿ ಪ್ರಭ್‌ಸಿಮ್ರನ್ ಅವರ ತಾಯಿ ಸ್ವತಃ ಅಡುಗೆ ಮಾಡಿ ಇಡೀ ಪಂಜಾಬ್ ಕಿಂಗ್ಸ್ ತಂಡಕ್ಕೆ ಹೋಟೆಲ್‌ಗೆ ತರುತ್ತಾರೆ. ವಿಶೇಷವಾಗಿ ಪ್ರಭ್‌ಸಿಮ್ರನ್ ಅವರ ತಾಯಿ ಮಾಡುವ 'ಕಡಿ ಚಾವಲ್' ಮತ್ತು 'ಭರ್ತಾ' ತಂಡದ ಎಲ್ಲರಿಗೂ ತುಂಬಾ ಇಷ್ಟ ಎಂದು ಬಹಿರಂಗ ಪಡಿಸಿದ್ದಾರೆ.
ಪ್ರಭ್‌ಸಿಮ್ರನ್ ಸಿಂಗ್ 2019 ರಿಂದ ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದಾರೆ. ಇವರನ್ನು ಆರಂಭದಲ್ಲಿ ಪಂಜಾಬ್ 4.80 ಕೋಟಿ ನೀಡಿ ಖರೀದಿಸಿತ್ತು. ಆರಂಭದಲ್ಲಿ ಇವರಿಗೆ ಆಡುವ ಅವಕಾಶ ಲಭಿಸದೇ ಇದ್ದಾಗ ಇವರು ಬೆಂಚ್ ಕಾಯಬೇಕಾಯಿತು. ಬಳಿಕ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡ ಪ್ರಭ್‌ಸಿಮ್ರನ್ ಸಿಂಗ್ ಅಬ್ಬರಿಸಿದ್ದಾರೆ.
ಫ್ರಭ್ ಸಿಮ್ರನ್ ಸಾಧನೆ
ಈ ಆವೃತ್ತಿಯ ಐಪಿಎಲ್‌ನಲ್ಲಿ 25 ವರ್ಷದ ಪ್ರಭ್‌ಸಿಮ್ರನ್ ಸಿಂಗ್ ಆಡಿದ 5 ಪಂದ್ಯಗಳಲ್ಲಿ 70ರ ಸರಾಸರಿಯಲ್ಲಿ 211 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 2 ಅರ್ಧಶತಕಗಳು ಸೇರಿವೆ. ಅಲ್ಲದೆ 22 ಬೌಂಡರಿ, 11 ಸಿಕ್ಸರ್ ಸಿಡಿಸಿದ್ದಾರೆ. ಒಟ್ಟಾರೆ ಐಪಿಎಲ್‌ನಲ್ಲಿ ಪ್ರಭ್‌ಸಿಮ್ರನ್ ಆಡಿದ 56 ಪಂದ್ಯಗಳಲ್ಲಿ 1516 ರನ್ ಬಾರಿಸಿದ್ದಾರೆ. ಈ ವೇಳೆ 1 ಶತಕ, 9 ಅರ್ಧಶತಕಗಳು ಚಚ್ಚಿದ್ದಾರೆ.
ಅಂಕ ಪಟ್ಟಿ
ಕಳೆದ ಬಾರಿಯ ರನ್ನರ್ ಅಪ್ ಪಂಜಾಬ್ ಕಿಂಗ್ಸ್ ಈ ಬಾರಿಯ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದೆ. ಈ ವೇಳೆ ಪಂಜಾಬ್ ಒಂದೇ ಒಂದು ಸೋಲನ್ನು ಕಾಣದ ಹಿರಿಮೆಯನ್ನು ತನ್ನದಾಗಿಸಿಕೊಂಡಿದೆ. ಪಂಜಾಬ್ ಆಡಿದ 5 ಪಂದ್ಯಗಳಲ್ಲಿ 4 ಜಯ, 1 ಪಂದ್ಯ ರದ್ದಾಗಿದ್ದು 9 ಅಂಕ ಕಲೆ ಹಾಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications