For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ನಲ್ಲಿ ಹೇಗಿದೆ RCB ಆಟಗಾರರ ಸಾಧನೆ?

ಭಾರತ ಹಾಗೂ ಶ್ರೀಲಂಕಾ ಜಂಟಿಯಾಗಿ ಈ ಬಾರಿಯ ಟಿ20 ವಿಶ್ವಕಪ್ ಆಯೋಜಿಸಿತ್ತು. ಈ ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಭಾರತ ತನ್ನ ಮುಡಿಗೇರಿಸಿಕೊಂಡಿತು. ಸೂರ್ಯಕುಮಾರ್ ಪಡೆ ಅಹಮದಾಬಾದ್‌ನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ 96 ರನ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿ ತವರಿನಲ್ಲಿ ಟಿ20 ವಿಶ್ವಕಪ್‌ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲದೆ ಮೂರು ಟಿ20 ವಿಶ್ವಕಪ್‌ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆ ಸಹ ಟೀಮ್ ಇಂಡಿಯಾದ್ದಾಗಿದೆ. ಈಗ ಎಲ್ಲರ ಚಿತ್ತ ಭಾರತದಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಮೇಲೆ ನೆಟ್ಟಿರಲಿದೆ.

ಐಪಿಎಲ್‌ನಲ್ಲಿ ಆಡಲು ದೇಶ ಹಾಗೂ ವಿದೇಶಿ ಆಟಗಾರರು ತಯಾರಿ ನಡೆಸಿದ್ದಾರೆ. ಈ ಬಾರಿಯ ಟಿ20 ವಿಶ್ವಕಪ್‌ನಲ್ಲೂ ಆರ್‌ಸಿಬಿಯನ್ನು ಪ್ರತಿನಿಧಿಸುವ ಆಟಗಾರರು ತಮ್ಮ ತಮ್ಮ ತಂಡದ ಪರ ಮಿಂಚಿನ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಿದ್ದಾರೆ. ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಮಿಂಚಿದ ಆರ್‌ಸಿಬಿ ಆಟಗಾರರ ಬಗ್ಗೆ ಮಾಹಿತಿ ಇಲ್ಲಿದೆ.

How RCB Stars Performed

ಇಂಗ್ಲೆಂಡ್ ತಂಡದಲ್ಲಿ ಇಬ್ಬರು ಆರ್‌ಸಿಬಿ ಆಟಗಾರರು ಇದ್ದಾರೆ. ಇದರಲ್ಲಿ ಕಳೆದ ಬಾರಿಯ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಫಿಲ್ ಸಾಲ್ಟ್‌ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ರನ್‌ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದಾರೆ. ಇವರು ಆಡಿದ 8 ಪಂದ್ಯಗಳಲ್ಲಿ 16ರ ಸರಾಸರಿಯಲ್ಲಿ 130 ರನ್‌ ಕಲೆ ಹಾಕಿದ್ದಾರೆ. ಟೂರ್ನಿಯಲ್ಲಿ ಇವರು ಒಂದೇ ಒಂದು ಅರ್ಧಶತಕ ಬಾರಿಸಿದ್ದಾರೆ.

IPL 2026: ಮಾರ್ಚ್‌ 28 ರಿಂದ ಐಪಿಎಲ್‌ ಆರಂಭ: ಬೆಂಗಳೂರಿನಲ್ಲಿ ಫೈನಲ್ ಸಾಧ್ಯತೆIPL 2026: ಮಾರ್ಚ್‌ 28 ರಿಂದ ಐಪಿಎಲ್‌ ಆರಂಭ: ಬೆಂಗಳೂರಿನಲ್ಲಿ ಫೈನಲ್ ಸಾಧ್ಯತೆ

ಜಾಕಬ್ ಬೆಥೆಲ್‌ ಆಕರ್ಷಣೆ

ಇದೇ ತಂಡವನ್ನು ಪ್ರತಿನಿಧಿಸುವ ಯುವ ಆಟಗಾರ ಜಾಕಬ್ ಬೆಥೆಲ್‌ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ ಪ್ರತಿಭೆ. ಪ್ರಸಕ್ತ ಟೂರ್ನಿಯಲ್ಲಿ ಇಂಗ್ಲೆಂಡ್ ಪರ ಗರಿಷ್ಠ ರನ್‌ ಕಲೆ ಹಾಕಿದ ಆಟಗಾರರ ಪಟ್ಟಿಯಲ್ಲಿ ಇವರಿಗೆ ಮೊದಲ ಸ್ಥಾನ. ಅಲ್ಲದೆ ಮುಂಬೈನಲ್ಲಿ ನಡೆದಿದ್ದ ಸೆಮಿಫೈನಲ್‌ ಪಂದ್ಯದಲ್ಲಿ ಇವರು ಭಾರತದ ವಿರುದ್ಧ ಏಕಾಂಗಿ ಹೋರಾಟ ನಡೆಸಿದರು. ಅಲ್ಲದೆ ಶತಕ ಬಾರಿಸಿ ಸೋಲಿನಲ್ಲೂ ಮಿಂಚಿದರು. ಇವರು ಆಡಿದ 8 ಪಂದ್ಯಗಳಲ್ಲಿ 35ರ ಸರಾಸರಿಯಲ್ಲಿ 280 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 1 ಶತಕ ಹಾಗೂ 1 ಅರ್ಧಶತಕ ಸೇರಿದೆ.

ಆಸ್ಟ್ರೇಲಿಯಾ ತಂಡದ ಭರವಸೆಯ ಆಲ್‌ರೌಂಡರ್ ಟೀಮ್ ಡೇವಿಡ್ ಸಹ ಆರ್‌ಸಿಬಿ ತಂಡದಲ್ಲಿರುವ ಆಟಗಾರ. ಆಸ್ಟ್ರೇಲಿಯಾ ಈ ಬಾರಿ ಸೂಪರ್ 8 ಹಂತಕ್ಕೆ ಅರ್ಹತೆ ಪಡೆಯದೆ ಟೂರ್ನಿಯಿಂದ ಹೊರನಡೆಯಿತು. ಡೇವಿಡ್ ಸಹ ಈ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿದ್ದಾರೆ. ಇವರು ಮೂರು ಪಂದ್ಯಗಳನ್ನು ಆಡಿದ್ದು ಕೇವಲ 6 ರನ್ ಕಲೆ ಹಾಕಿದ್ದಾರೆ. ವಿಕೆಟ್‌ ಪಡೆಯುವಲ್ಲೂ ಇವರು ವಿಫಲರಾಗಿದ್ದಾರೆ. ಇದೇ ತಂಡದ ಪರ ಆಡುವ ಜೋಶ್‌ ಹ್ಯಾಜಲ್‌ವುಡ್ ಗಾಯದ ಕಾರಣದಿಂದ ಈ ಟೂರ್ನಿಯಲ್ಲಿ ಆಡಿರಲಿಲ್ಲ. ಇವರು ಸಹ ಆರ್‌ಸಿಬಿ ತಂಡದ ಆಟಗಾರ.

Double Champions: ವಿಶೇಷ ಕ್ಲಬ್‌ ಸೇರಿದ ಟೀಮ್ ಇಂಡಿಯಾದ 8 ಆಟಗಾರರುDouble Champions: ವಿಶೇಷ ಕ್ಲಬ್‌ ಸೇರಿದ ಟೀಮ್ ಇಂಡಿಯಾದ 8 ಆಟಗಾರರು

ನ್ಯೂಜಿಲೆಂಡ್ ತಂಡದ ಭರವಸೆಯ ವೇಗದ ಬೌಲರ್ ಜಾಕಬ್ ಡಫಿ ಸಹ ಆರ್‌ಸಿಬಿ ಪರ ಆಡುವ ಆಟಗಾರ. ಇವರು ಟೂರ್ನಿಯಲ್ಲಿ ಐದು ಪಂದ್ಯ ಆಡಿದ್ದು ಕೇವಲ 3 ವಿಕೆಟ್‌ ಪಡೆದಿದ್ದಾರೆ.

ರೊಮಾರಿಯೊ ಶೆಫರ್ಡ್ ಹ್ಯಾಟ್ರಿಕ್‌

ವೆಸ್ಟ್‌ ಇಂಡೀಸ್ ತಂಡದ ರೊಮಾರಿಯೊ ಶೆಫರ್ಡ್ ಸಹ ಆರ್‌ಸಿಬಿ ತಂಡದ ಪರ ಆಡುವ ಪ್ರತಿಭೆ. ಇವರು ಆಡಿದ 5 ಪಂದ್ಯಗಳಲ್ಲಿ 6 ವಿಕೆಟ್‌ ಪಡೆದಿದ್ದಾರೆ. ಇದರಲ್ಲಿ ಹ್ಯಾಟ್ರಿಕ್‌ ಸಹ ಸೇರಿದೆ. ಅಲ್ಲದೆ ಇವರು 80 ರನ್‌ ಸಹ ಬಾರಿಸಿದ್ದಾರೆ. ಶ್ರೀಲಂಕಾ ತಂಡದ ನುವಾನ್ ತುಷಾರ ಸಹ ಆರ್‌ಸಿಬಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಇವರು ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ.

Story first published: Tuesday, March 10, 2026, 8:14 [IST]
Other articles published on Mar 10, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+