Asia Cup Cricket 2023: ಬ್ಯಾಲೆನ್ಸ್ ಆಗಿ ಕಾಣುತ್ತಿದ್ದ ಟೀಂನಲ್ಲಿ ಮತ್ತೊಮ್ಮೆ ಹಲವು ನ್ಯೂನತೆ
ಏಷ್ಯಾ ಕಪ್ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಕ್ಕೆ ಪೆಟ್ಟು ಬಿದ್ದಿದೆ. ಬ್ಯಾಲೆನ್ಸ್ ಆಗಿ ಕಾಣುತ್ತಿದ್ದ ಟೀಮ್ ನಲ್ಲಿ ಮತ್ತೊಮ್ಮೆ ಹಲವು ನ್ಯೂನತೆಗಳನ್ನು ಎದ್ದು ಕಾಣುತ್ತಿವೆ. ಆ ಒಬ್ಬ ಪ್ಲೇಯರ್ ಫಿಟ್ ಆಗದೇ ಇರುವುದು ನಿಜಕ್ಕೂ ಟೀಮ್ ಇಂಡಿಯಾಕ್ಕೆ ನುಂಗಲಾರದ ತುತ್ತಿನಂತೆ ಪರಿಣಮಿಸಿದೆ.
ಏಷ್ಯಾ ಕಪ್ ಆರಂಭಿಕ ಪಂದ್ಯಗಳಲ್ಲಿ ಈ ಸ್ಟಾರ್ ಪ್ಲೇಯರ್ ಅನುಪಸ್ಥಿತಿ ತಂಡದ ಚಿಂತೆಯನ್ನು ಹೆಚ್ಚು ಮಾಡಿದೆ. ಬಹು ವರ್ಷಗಳಿಂದ ಟೀಮ್ ಇಂಡಿಯಾದಲ್ಲಿ ನಾಲ್ಕನೇ ಕ್ರಮಾಂಕದ ಚಿಂತೆಯು ಇತ್ತು. ಈಗ ಈ ಪ್ರಶ್ನೆಗೆ ಶ್ರೇಯಸ್ ಅಯ್ಯರ್ ಫಿಟ್ ಆಗುವ ಮೂಲಕ ಉತ್ತರ ನೀಡಿದ್ದಾರೆ. ಆದರೆ, ಇದರ ಮುಂದಿನ ಸ್ಥಾನದ್ದೇ ಚಿಂತೆ ನಿಜಕ್ಕೂ ಟೀಮ್ ಇಂಡಿಯಾದ ತಲೆ ನೋವು ಹೆಚ್ಚಿಸಿದೆ.

ಇದಕ್ಕೆ ಕಾರಣ ತಂಡದ ಸ್ಟಾರ್ ಆಟಗಾರ ಕೆ.ಎಲ್ ರಾಹುಲ್ ಫುಲ್ ಫಿಟ್ ಆಗದೇ ಇರುವುದು. ಇದರಿಂದ ಟೀಮ್ ಇಂಡಿಯಾದ ಸಂಕಷ್ಟ ದ್ವಿಗುಣವಾಗಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಟೀಮ್ ಇಂಡಿಯಾ ಗೆಲ್ಲುವ ನೆಚ್ಚಿನ ತಂಡ ಎಂದೇ ಬಿಂಬಿತವಾಗಿತ್ತು. ಆದರೆ ಈ ಪ್ಲೇಯರ್ ಅನುಪಸ್ಥಿತಿ ಎದುರಾಳಿಗಳಿಗೆ ಬೂಸ್ಟ್ ನೀಡಿದ್ದಂತಾಗಿದೆ.
ಬ್ಯಾಟರ್ ಅಥವಾ ಬೌಲರ್ ಗೆ ಮಣೆ
ಕೆ.ಎಲ್ ರಾಹುಲ್ ಫಿಟ್ ಆಗಿ ತಂಡದಲ್ಲಿ ಸ್ಥಾನ ಪಡೆದಿದ್ದೇ ಆದಲ್ಲಿ ಇವರು ವಿಕೆಟ್ ಕೀಪಿಂಗ್ ಕಾರ್ಯವನ್ನು ಮಾಡುತ್ತಿದ್ದರು. ಆಗ ಇನ್ನೊಬ್ಬ ಪ್ಲೇಯರ್ ಗೆ ಅವಕಾಶದ ಬಾಗಿಲು ತೆರೆಯುತ್ತಿತ್ತು. ಈ ಪ್ಲೇಸ್ ನಲ್ಲಿ ಟೀಮ್ ಮ್ಯಾನೇಜ್ಮೆಂಟ್ ಹೆಚ್ಚುವರಿಯಾಗಿ ಬ್ಯಾಟರ್ ಅಥವಾ ಬೌಲರ್ ಗೆ ಮಣೆ ಹಾಕಬಹುದಿತ್ತು. ಆದರೆ ಈಗ ಈ ಲೆಕ್ಕಾಚಾರ ಕೈ ಕೊಟ್ಟಿದೆ.
ವಿಶ್ವಕಪ್ ಮುನ್ನ ನಡೆಯಲಿರುವ ಏಷ್ಯಾಕಪ್ ಗಾಯಾಳು ಆಟಗಾರರಿಗೆ ತಮ್ಮ ಕ್ಷಮತೆಯನ್ನು ಸಾಬೀತು ಪಡೆಸಲು ಉತ್ತಮ ವೇದಿಕೆ ಆಗಿತ್ತು. ಆದರೆ ಗಾಯ ರಾಹುಲ್ ಅವರನ್ನು ಬಹುವಾಗಿ ಕಾಡುತ್ತಿದ್ದು ಆರಂಭಿಕ ಪಂದ್ಯಗಳಲ್ಲಿ ಆಡದಂತೆ ಮಾಡಿದೆ. ಕೆ.ಎಲ್ ರಾಹುಲ್ ಅನುಪಸ್ಥಿತಿ ಟೀಮ್ ಇಂಡಿಯಾವನ್ನು ಬಹುವಾಗಿ ಕಾಡಲಿದೆಯಾ ಎಂಬ ಪ್ರಶ್ನೆ ನಿಮ್ಮ ತಲೆಯಲ್ಲಿ ಏಳುವುದು ಸಹಜ.
ರಾಹುಲ್ ಏಷ್ಯಾ ಕಪ್ ಆರಂಭಿಕ ಪಂದ್ಯಗಳಲ್ಲಿ ಕಣಕ್ಕೆ ಇಳಿಯುತ್ತಿಲ್ಲ
ಹೌದು.. ವಿಕೆಟ್ ಕೀಪಿಂಗ್ ಕಾರ್ಯಮಾಡಿಕೊಂಡು, ಐದನೇ ಸ್ಥಾನಕ್ಕೆ ನ್ಯಾಯ ತುಂಬಿ, ಉತ್ತಮ ಸರಾಸರಿಯಲ್ಲಿ ರನ್ ಕಲೆ ಹಾಕುವ ಪ್ಲೇಯರ್ ಒಬ್ಬ ತಂಡದಿಂದ ಹೊರ ನಡೆದರೆ ನಿಜಕ್ಕೂ ತಂಡಕ್ಕೆ ತುಂಬಲಾಗದ ನಷ್ಟವೇ ಸರಿ. ಕೆ.ಎಲ್.ರಾಹುಲ್ ಏಷ್ಯಾ ಕಪ್ ಆರಂಭಿಕ ಪಂದ್ಯಗಳಲ್ಲಿ ಕಣಕ್ಕೆ ಇಳಿಯುತ್ತಿಲ್ಲ. ಈ ಸ್ಥಾನವನ್ನು ತುಂಬಲು ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ ರೆಡಿ ಆಗಿ ನಿಂತಿದ್ದಾರೆ.
ಆದರೆ, ಅಂಕಿ ಅಂಶಗಳು ಇವರಿಗೆ ಸ್ಥಾನ ನೀಡುವುದನ್ನು ಪದೇ ಪದೇ ಪ್ರಶ್ನೆ ಮಾಡುವಂತೆ ಮಾಡಿವೆ. ಅಂದಹಾಗೆ ಈ ಇಬ್ಬರೂ ಸ್ಟಾರ್ ಪ್ಲೇಯರ್ ಗಳಲ್ಲಿ ಇಶಾನ್ ಕಿಶನ್ ಬೆಸ್ಟ್ ಆಯ್ಕೆ ಎಂದು ಮೇಲ್ನೋಟಕ್ಕೆ ಅನಿಸುತ್ತದೆ. ಇವರು ಏಕದಿನ ಕ್ರಿಕೆಟ್ ನಲ್ಲಿ ತಮ್ಮದೇ ಛಾಪು ಮೂಡಿಸಿದ ಆಟಗಾರ. ಅಲ್ಲದೆ ಸಿಕ್ಕ ಅವಕಾಶದಲ್ಲಿ ಸೊಗಸಾದ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾಗಿದ್ದ ಪ್ಲೇಯರ್.
ಟೀಮ್ ಇಂಡಿಯಾ ಕೊಂಚ ಬ್ಯಾಲೆನ್ಸ್ ಆಗಿ ಕಾಣುತ್ತದೆ
ಇಶಾನ್ ತಂಡಕ್ಕೆ ಎಂಟ್ರಿ ನೀಡುವುದರಿಂದ ಟೀಮ್ ಇಂಡಿಯಾ ಕೊಂಚ ಬ್ಯಾಲೆನ್ಸ್ ಆಗಿ ಕಾಣುತ್ತದೆ. ಇವರು ಐದನೇ ಸ್ಥಾನಕ್ಕೆ ನ್ಯಾಯ ತುಂಬುತ್ತಾರಾ ಎಂಬ ಪ್ರಶ್ನೆಗಳು ಸಹ ಮೂಡಿದ್ದು ಸುಳ್ಳಲ್ಲ.
ಇನ್ನು ಇಶಾನ್ ಕಿಶನ್ ಹೊರತು ಪಡಿಸಿದರೆ, ವಿಕೆಟ್ ಕೀಪರ್ ಬ್ಯಾಟರ್ ಆಗಿ ಕಣಕ್ಕೆ ಇಳಿಯಲು ಉತ್ಸುಕರಾಗಿರುವ ಇನ್ನೋರ್ವ ಆಟಗಾರ ಎಂದರೆ ಸಂಜು ಸ್ಯಾಮ್ಸನ್.. ಸಂಜು, ಏಕದಿನ ಕ್ರಿಕೆಟ್ ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದು, ಇವರಿಗೆ ಅವಕಾಶ ನೀಡುವುದು ಕೊಂಚ ಡೌಟ್..
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications