WPL 2024: ಬೆಂಗಳೂರಿನಲ್ಲಿ ಆರ್‌ಸಿಬಿ ಪಂದ್ಯಗಳ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಹೇಗೆ? ಟಿಕೆಟ್ ದರ ಎಷ್ಟು?
2024ರ ಮಹಿಳಾ ಪ್ರೀಮಿಯರ್ ಲೀಗ್ (WPL) ಎರಡನೇ ಆವೃತ್ತಿಯು ಇದೇ ಶುಕ್ರವಾರ, ಫೆಬ್ರವರಿ 23ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅದ್ಧೂರಿಯಾಗಿ ಪ್ರಾರಂಭವಾಗಲಿದೆ.
2023ರಲ್ಲಿ ನಡೆದ ಉದ್ಘಾಟನಾ ಋತುವಿನ ಯಶಸ್ಸಿನ ನಂತರ, ಮಹಿಳಾ ಟಿ20 ಪಂದ್ಯಾವಳಿಗಾಗಿ ಅಭಿಮಾನಿಗಳಲ್ಲಿಯೂ ಕ್ರಿಕೆಟ್ ಜ್ವರ ಜಾಸ್ತಿಯಾಗತೊಡಗಿದೆ.

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಹಿಳಾ ತಂಡವು ಮೊದಲ ಋತುವಿನಲ್ಲಿ ಅತ್ಯುತ್ತಮ ನೀಡದಿರಬಹುದು. ಆದರೆ ಸ್ಮೃತಿ ಮಂಧಾನ ನಾಯಕತ್ವದ ತಂಡವು ಮುಂಬರುವ ಋತುವಿನಲ್ಲಿ ಪುಟಿದೇಳುವ ನಿರೀಕ್ಷೆಯಿದೆ.
ಬೆಂಗಳೂರು ಮೂಲದ ತಂಡವು ಶನಿವಾರ, ಫೆಬ್ರವರಿ 24ರಂದು ತನ್ನ ಮೊದಲ ಪಂದ್ಯದಲ್ಲಿ ಯುಪಿ ವಾರಿಯರ್ಜ್ ತಂಡವನ್ನು ಎದುರಿಸುವ ಮೂಲಕ 2024ರ ಮಹಿಳಾ ಪ್ರೀಮಿಯರ್ ಲೀಗ್ ಅಭಿಯಾನ ಆರಂಭಿಸಲಿದೆ.
ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ತವರು ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ಅವರಿಗೆ ಹೆಚ್ಚಿನ ಅನುಕೂಲವಾಗಿದೆ. ಉಭಯ ತಂಡಗಳು ಅಭಿಯಾನವನ್ನು ಉತ್ತಮವಾಗಿ ಪ್ರಾರಂಭಿಸಲು ಎದುರು ನೋಡುತ್ತಿದ್ದಾರೆ.

ಹಿಂದಿನ ಋತುವಿನಲ್ಲಿ ತಂಡದ ಪ್ರದರ್ಶನದ ಬಗ್ಗೆ ಮಾತನಾಡುವುದಾದರೆ, ಸ್ಮೃತಿ ಮಂಧಾನ ನಾಯಕತ್ವದ ಆರ್‌ಸಿಬಿ ಮಹಿಳಾ ತಂಡದ ಆಡಿದ ಎಂಟು ಪಂದ್ಯಗಳಲ್ಲಿ 4 ಅಂಕಗಳೊಂದಿಗೆ ಪಂದ್ಯಾವಳಿಯ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿತು.
ಆರು ಪಂದ್ಯಗಳಲ್ಲಿ ಸೋಲು ಅನುಭವಿಸಿತು ಮತ್ತು ಇಡೀ ಪಂದ್ಯಾವಳಿಯಲ್ಲಿ ಆರ್‌ಸಿಬಿ ಕೇವಲ ಎರಡು ಪಂದ್ಯಗಳನ್ನು ಗೆದ್ದಿತ್ತು. ಟೂರ್ನಿಯುದ್ದಕ್ಕೂ ತಂಡದ ಅಸ್ಥಿರ ಪ್ರದರ್ಶನ ಎದ್ದು ಕಾಣುತ್ತಿತ್ತು. ಕುತೂಹಲಕಾರಿಯಾಗಿ, ಆರ್‌ಸಿಬಿ ಕಳೆದ ಆವೃತ್ತಿಯಲ್ಲಿ ಗೆದ್ದ ಪಂದ್ಯಗಳಲ್ಲಿ ಒಂದು ಯುಪಿ ವಾರಿಯರ್ಜ್ ವಿರುದ್ಧವಾಗಿತ್ತು.
WPL 2024: ಆರ್‌ಸಿಬಿ ತಂಡದ ಟಿಕೆಟ್‌ಗಳನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಬುಕ್ ಮಾಡುವುದು ಹೇಗೆ, ಪಂದ್ಯದ ದಿನಾಂಕಗಳು, ಬೆಲೆ ಪಟ್ಟಿ ವಿವರ ಇಲ್ಲಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಹಿಳಾ ಪಂದ್ಯಗಳಿಗೆ ಟಿಕೆಟ್ ಬುಕ್ ಮಾಡಲು ಮತ್ತು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನ ಪ್ರತಿ ಪಂದ್ಯಕ್ಕೆ ಟಿಕೆಟ್ ಕಾಯ್ದಿರಸಲು BookMyShow ಗೆ ಲಾಗ್ ಇನ್ ಮಾಡಬೇಕು.
ಉದ್ಘಾಟನಾ ಋತುವಿನ ಪಂದ್ಯಗಳಿಗೆ ಮಹಿಳಾ ಅಭಿಮಾನಿಗಳಿಗೆ ಟಿಕೆಟ್‌ಗಳು ಉಚಿತವಾಗಿತ್ತು ಎಂಬುದನ್ನು ಗಮನಿಸುವುದು ಆಸಕ್ತಿದಾಯಕವಾಗಿದ. ಈ ಋತುವಿನಲ್ಲಿಯೂ ಅದೇ ರೀತಿ ಇರಲಿದೆಯೇ ಎಂಬುದನ್ನು ಬಿಸಿಸಿಐ ಇನ್ನೂ ಖಚಿತಪಡಿಸಿಲ್ಲ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವನಿತೆಯರು ಟೂರ್ನಿಯಲ್ಲಿ ಯುಪಿ ವಾರಿಯರ್ಜ್ ವಿರುದ್ಧ ಗೆಲ್ಲುವ ಮೂಲಕ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದ್ದಾರೆ.
2024ರ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಆರ್‌ಸಿಬಿ ತಂಡದ ಟಿಕೆಟ್ ದರವು ಎಲ್ಲಾ ಸ್ಟ್ಯಾಂಡ್‌ಗಳಿಗೆ ಆನ್‌ಲೈನ್‌ನಲ್ಲಿ 100 ರೂಪಾಯಿ ನಿಗದಿಪಡಿಸಲಾಗಿದೆ.
WPL 2024: ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ತಂಡದ ವೇಳಾಪಟ್ಟಿ
ಫೆಬ್ರವರಿ 24, ಶನಿವಾರ - ಆರ್‌ಸಿಬಿ vs ಯುಪಿ ವಾರಿಯರ್ಜ್ - ಸಾಯಂಕಾಲ 7:30
ಫೆಬ್ರವರಿ 27, ಮಂಗಳವಾರ - ಆರ್‌ಸಿಬಿ vs ಗುಜರಾತ್ ಜೈಂಟ್ಸ್ - ಸಾಯಂಕಾಲ 7:30
ಫೆಬ್ರವರಿ 29, ಗುರುವಾರ - ಆರ್‌ಸಿಬಿ vs ಡೆಲ್ಲಿ ಕ್ಯಾಪಿಟಲ್ಸ್ - ಸಾಯಂಕಾಲ 7:30
ಮಾರ್ಚ್ 2, ಶನಿವಾರ - ಆರ್‌ಸಿಬಿ vs ಮುಂಬೈ ಇಂಡಿಯನ್ಸ್ - ಸಾಯಂಕಾಲ 7:30
ಮಾರ್ಚ್ 4, ಸೋಮವಾರ - ಆರ್‌ಸಿಬಿ vs ಯುಪಿ ವಾರಿಯರ್ಜ್ - ಸಾಯಂಕಾಲ 7:30
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications