ಮೈಸೂರು ಮೃಗಾಲಯದ ಹುಲಿಯನ್ನು ದತ್ತು ಪಡೆದ ಹುಬ್ಬಳ್ಳಿ ಟೈಗರ್ಸ್
ಮೈಸೂರು, ಸೆಪ್ಟೆಂಬರ್ 21 : ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿಯನ್ನು ಆಡಲು ಮೈಸೂರಿಗೆ ಆಗಮಿಸಿರುವ ಹುಬ್ಬಳ್ಳಿ ಟೈಗರ್ಸ್ ತಂಡ ಗುರುವಾರ ನಗರದಲ್ಲಿರುವ ಮೃಗಾಲಯಕ್ಕೆ ಭೇಟಿ ನೀಡಿತು.
ಬುಧವಾರ ನಡೆದ ಬೆಂಗಳೂರು ಬ್ಲಾಸ್ಟರ್ ತಂಡದ ವಿರುದ್ಧದ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ಗೆಲುವು ಸಾಧಿಸಿದ ಖುಷಿಯಲ್ಲಿ ಗುರುವಾರ ಬೆಳಿಗ್ಗೆ ಹುಬ್ಬಳ್ಳಿ ಟೈಗರ್ಸ್ ತಂಡದ ಆಟಗಾರರು ಮೃಗಾಲಯಕ್ಕೆ ಭೇಟಿ ನೀಡಿ ಪ್ರಾಣಿಗಳನ್ನು ಕಂಡು ಸಂಭ್ರಮಿಸಿದರು.

ಹುಬ್ಬಳ್ಳಿ ಟೈಗರ್ಸ್ ತಂಡ ಕಳೆದ ಮೂರು ವರ್ಷದಿಂದ ಮೈಸೂರು ಮೃಗಾಲಯದಲ್ಲಿ ಒಂದು ಹುಲಿಯನ್ನು ದತ್ತು ಪಡೆಯುತ್ತಿದೆ. ಇದರ ವೆಚ್ಚಕ್ಕಾಗಿ ವರ್ಷಕ್ಕೆ ಒಂದು ಲಕ್ಷ ಹಣ ನೀಡುತ್ತಿದೆ.
ಈ ಬಾರಿಯೂ ಹುಬ್ಬಳ್ಳಿ ತಂಡ 1 ಲಕ್ಷ ರು. ಚೆಕ್ ನೀಡಿ ಒಂದು ಹುಲಿಯನ್ನು ದತ್ತು ಪಡೆದುಕೊಂಡಿತು. ಅಷ್ಟೇ ಅಲ್ಲದೇ ತಂಡದಲ್ಲಿರುವ ಇನ್ನೂ ಕೆಲವು ಆಟಗಾರರು ಪ್ರಾಣಿಗಳನ್ನು ದತ್ತು ಸ್ವೀಕರಿಸುವುದಾಗಿ ಹೇಳಿದರು.
ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ವೇಗದ ಬೌಲರ್ ವಿನಯ್ ಕುಮಾರ್, "ತಂಡದಿಂದ ಹುಲಿ ದತ್ತು ಪಡೆದಿರೋದು ಸಂತಸ ತಂದಿದೆ.
ವನ್ಯ ಜೀವಿಗಳ ಉಳಿವಿಗೆ ಎಲ್ಲರೂ ಕೈ ಜೋಡಿಸಬೇಕು. ತಂಡ ಹೊರತು ಪಡಿಸಿ ನಾನು ಮುಂದೆ ಕೆಲ ಪ್ರಾಣಿಗಳನ್ನ ದತ್ತು ಪಡೆಯುತ್ತೇನೆ" ಎಂದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications