Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Maharaja Trophy T20: ಹುಬ್ಬಳ್ಳಿ, ಮಂಗಳೂರು ತಂಡಕ್ಕೆ ಜಯ

ಭರವಸೆಯ ಬ್ಯಾಟರ್‌ ಮೊಹಮ್ಮದ್ ತಹಾ (101 ರನ್) ಬಾರಿಸಿದ ಶತಕ ಹಾಗೂ ಯಶ್ ರಾಜ್ ಅವರ ಬಿಗುವಿನ ದಾಳಿಯ ನೆರವಿನಿಂದ ಹುಬ್ಬಳ್ಳಿ ಟೈಗರ್ಸ್‌ 2 ವಿಕೆಟ್‌ ಗಳಿಂದ ಮಹಾರಾಜ್‌ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ತಂಡವನ್ನು ಮಣಿಸಿ ಅಬ್ಬರಿಸಿದೆ. ಈ ಮೂಲಕ ಟೂರ್ನಿಯಲ್ಲಿ ಬ್ಯಾಕ್ ಟು ಬ್ಯಾಕ್‌ ಜಯ ಸಾಧಿಸಿದೆ.

ಮೈಸೂರಿನಲ್ಲಿ ನಡೆದ ಪಂದ್ಯದಲ್ಲಿ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಮೈದಾನದಲ್ಲಿ, ಟಾಸ್‌ ಹುಬ್ಬಳ್ಳಿ ಟೈಗರ್ಸ್‌ ಪಾಲಾಯಿತು. ಮೊದಲು ಬ್ಯಾಟ್ ಮಾಡಿದ ಬೆಂಗಳೂರು ತಂಡದ ಬ್ಯಾಟರ್‌ಗಳು ಉತ್ತಮ ಪ್ರದರ್ಶನ ನೀಡಿದರು. ಬೆಂಗಳೂರು ಪರ ರೋಹನ್ ಪಟೇಲ್ (80) ಮನಮೋಹಕ ಬ್ಯಾಟಿಂಗ್ ನಡೆಸಿ ಅರ್ಧಶತಕ ಬಾರಿಸಿದರು. ಉಳಿದಂತೆ ಎಲ್‌ಆರ್ ಚೇತನ್ 23, ಸುರಜ್‌ ಅಹುಜಾ 27, ರೋಹನ್ 24, ನವೀನ್ ಎಂಜಿ 27 ರನ್‌ ಬಾರಿಸಿದರೂ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಸಫಲರಾದರು. ಪರಿಣಾಮ ಬೆಂಗಳೂರು 20 ಓವರ್‌ಗಳಲ್ಲಿ 6 ವಿಕೆಟ್‌ಗೆ 225 ರನ್ ಸೇರಿಸಿತು.

Hubli Tigers Beat Bengaluru Blasters as Mohammed Taha Blasts a Century

ಗುರಿಯನ್ನು ಬೆನ್ನಟ್ಟಿದ ಹುಬ್ಬಳ್ಳಿ ತಂಡದ ಆರಂಭಿಕರಾದ ಪ್ರಖರ್ ಚತುರ್ವೇದಿ (18) ಹಾಗೂ ಮೊಹಮ್ಮದ್ ತಹಾ ಜೋಡಿ ತಂಡಕ್ಕೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಪವರ್‌ ಪ್ಲೇನಲ್ಲಿ ಪವರ್‌ ಫುಲ್ ಆಟವನ್ನು ಆಡಿತು. ಈ ಜೋಡಿ 5.2 ಓವರ್‌ಗಳಲ್ಲಿ 54 ರನ್‌ ಸೇರಿಸಿತು. ಸ್ಟಾರ್ ಆಟಗಾರ ದೇವದತ್ ಪಡಿಕ್ಕಲ್‌ (4), ಕಾರ್ತಿಕೇಯ (7) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ.

ಮೊಹಮ್ಮದ್ ತಹಾ ಶತಕ

ನಾಲ್ಕನೇ ವಿಕೆಟ್‌ಗೆ ಮೊಹಮ್ಮದ್ ತಹಾ ಅವರನ್ನು ಸೇರಿಕೊಂಡ ಐಪಿಎಲ್‌ನಲ್ಲಿ ಆಡಿದ ಅನುಭವ ಹೊಂದಿರುವ ಅಭಿನವ್ ಮನೋಹರ್‌ ಜೋಡಿ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 83 ರನ್‌ ಸೇರಿಸಿ ಅಬ್ಬರಿಸಿತು. ಈ ವೇಳೆ ಅಭಿನವ್ ಮನೋಹರ್ 2 ಬೌಂಡರಿ, 2 ಸಿಕ್ಸರ್ ಸಹಾಯದಿಂದ 33 ರನ್ ಬಾರಿಸಿ ಔಟ್ ಆದರು.

Hubli Tigers Beat Bengaluru Blasters as Mohammed Taha Blasts a Century

ಆರಂಭಿಕ ಆಟಗಾರ ಮೊಹಮ್ಮದ್ ತಹಾ ತಮ್ಮ ಭರ್ಜರಿ ಫಾರ್ಮ್‌ ಮುಂದುವರೆಸಿದರು. ಇವರು ಬೆಂಗಳೂರು ವಿರುದ್ಧ 54 ಎಸೆತಗಳಲ್ಲಿ 9 ಬೌಂಡರಿ, 7 ಸಿಕ್ಸರ್‌ ನೆರವಿನಿಂದ 101 ರನ್‌ ಬಾರಿಸಿ ಔಟ್ ಆದರು. ಅಂತಿಮವಾಗಿ ಹುಬ್ಬಳ್ಳಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 228 ರನ್‌ ಸೇರಿಸಿ ಜಯ ಸಾಧಿಸಿತು.

ಡ್ರ್ಯಾಗನ್ಸ್‌ಗೆ ಜಯ

ಎರಡನೇ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್‌ ವಿರುದ್ಧ ಟಾಸ್ ಸೋತರೂ ಮೊದಲ ಬ್ಯಾಟ್ ಮಾಡಿದ ಮಂಗಳೂರು ಡ್ರ್ಯಾಗನ್ಸ್‌ ತಂಡದ ಪರ ಎಲ್‌ ಗೌಡ 14, ಅನೀಶ್‌ ಕೆವಿ 32, ಆದರ್ಶ್ ಪ್ರಜ್ವಲ್‌ 20, ಎಸ್‌ ಶಿವರಾಜ್‌ 19 ರನ್‌ ಬಾರಿಸಿದರು. ಆರಂಭಿ ಶರತ್ ಬಿಆರ್‌ 7 ಬೌಂಡರಿ 5 ಸಿಕ್ಸರ್‌ ಸಹಾಯದಿಂದ 70 ರನ್‌ ಸಿಡಿಸಿದರು. ಅಂತಿಮವಾಗಿ ಮಂಗಳೂರು 20 ಓವರ್‌ಗಳಲ್ಲಿ 8 ವಿಕೆಟ್‌ಗೆ 179 ರನ್‌ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಶಿವಮೊಗ್ಗ ಲಯನ್ಸ್‌ ತಂಡದ ರೋಹಿತ್‌ ಕುಮಾರ್ (62) ಅರ್ಧಶತಕ ಬಾರಿಸಿದರು. ನಿಖಿಲ್ ಉಲ್ಲಾಳ 11, ಅವಿನಾಶ್ ಡಿ, ತುಷಾರ್‌ ಸಿಂಗ್ 23 ರನ್ ಸಿಡಿಸಿ ಸೋಲಿನಲ್ಲಿ ಮಿಂಚಿದರು. ಅಂತಿಮವಾಗಿ ಶಿವಮೊಗ್ಗ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 150 ರನ್ ಸಿಡಿಸಿತು. ಈ ಗೆಲುವನ ಮೂಲಕ ಮಂಗಳೂರು ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆಯಿತು. ಇನ್ನು ಶಿವಮೊಗ್ಗ ಆಡಿದ ಎರಡೂ ಪಂದ್ಯಗಳನ್ನು ಸೋತಿದೆ.

Story first published: Thursday, August 14, 2025, 0:31 [IST]
Other articles published on Aug 14, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+