Maharaja Trophy T20: ಮಂಗಳೂರು ಮಣಿಸಿದ ಹುಬ್ಬಳ್ಳಿಗೆ ಅಗ್ರ ಸ್ಥಾನ
ಮಹಾರಾಜ್ ಟ್ರೋಪಿ ಕ್ರಿಕೆಟ್ ಟಿ20 ಟೂರ್ನಿಯ 23ನೇ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ 42 ರನ್‌ಗಳಿಂದ ಮಂಗಳೂರು ಡ್ರಾಗನ್ಸ್ ವಿರುದ್ಧ ಜಯ ಸಾಧಿಸಿ, ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿ ತಂಡದ ಆರಂಭ ಕಳಪೆ ಆಗಿತ್ತು. ಕೆ.ಪಿ ಕಾರ್ತಿಕೇಯ (9) ಹಾಗೂ ಮೊಹಮ್ಮದ್ ತಹಾ (0) ರನ್ ಕಲೆ ಹಾಕುವಲ್ಲಿ ವಿಫಲರಾದರು. ಮೂರನೇ ವಿಕೆಟ್‌ಗೆ ಕೃಷ್ಣನ್ ಶ್ರೀಜಿತ್ ಹಾಗೂ ಅನ್ವೀಶ್ವರ್ ಗೌತಮ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು.

ಮೂರನೇ ವಿಕೆಟ್‌ಗೆ ಭರ್ಜರಿ ಜೊತೆಯಾಟ
ಕೃಷ್ಣನ್ ಶ್ರೀಜಿತ್ ಹಾಗೂ ಅನ್ವೀಶ್ವರ್ ಗೌತಮ್ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಇವರನ್ನು ಕಟ್ಟಿ ಹಾಕಲು ಮಂಗಳೂರು ತಂಡದ ಬೌಲರ್‌ಗಳು ಹೈರಾಣಾದರು. ಇವರು ಸುಮಾರು 13 ಓವರ್ ವಿಕೆಟ್ ಬೀಳದಂತೆ ಕಾಯ್ದುಕೊಂಡು, ರನ್ ವೇಗಕ್ಕೆ ಚುರುಕು ಮುಟ್ಟಿಸಿತು. ಈ ಜೋಡಿಯನ್ನು ಕಟ್ಟಿ ಹಾಕಲು ಡ್ರ್ಯಾಗನ್ಸ್ ವಿಫಲವಾಯಿತು. ಈ ಜೋಡಿ ಮೂರನೇ ವಿಕೆಟ್‌ಗೆ 148 ರನ್ ಸೇರಿಸಿತು.
ಕೃಷ್ಣನ್ ಶ್ರೀಜಿತ್ ಮನಮೋಹಕ ಬ್ಯಾಟಿಂಗ್ ನಡೆಸಿದರು. ಇವರು 44 ಎಸೆತಗಳಲ್ಲಿ 7 ಬೌಂಡರಿ, 6 ಸಿಕ್ಸರ್ ಸಹಾಯದಿಂದ 77 ರನ್ ಸಿಡಿಸಿದರು.
ಅನೀಶ್ವರ್ ಅಜೇಯ 95 ರನ್
ಅನ್ವೀಶ್ವರ್ ಗೌತಮ್ ಕ್ಲಾಸಿಕ್ ಬ್ಯಾಟಿಂಗ್ ನಡೆಸಿದರು. ಇವರು 58 ಎಸೆತಗಳಲ್ಲಿ 8 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಅಜೇಯ 95 ರನ್ ಬಾರಿಸಿ ಅಬ್ಬರಿಸಿದರು. ನಾಯಕ ಮನೀಷ್ ಪಾಂಡೆ ಅಜೇಯ 24 ರನ್ ಬಾರಿಸಿ ತಂಡಕ್ಕೆ ನೆರವಾದರು. ಅಂತಿಮವಾಗಿ ಹುಬ್ಬಳ್ಳಿ ಟೈಗರ್ಸ್ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 209 ರನ್ ಸೇರಿಸಿದೆ.
ಮಂಗಳೂರು ಪರ ಅದ್ವಿತ್ ಶೆಟ್ಟಿ, ಅಭಿಲಾಶ್ ಶೆಟ್ಟಿ, ಶ್ರೇಯಸ್ ಗೋಪಾಲ್ ತಲಾ ಒಂದು ವಿಕೆಟ್ ಕಬಳಿಸಿದರು.
ಬ್ಯಾಟರ್‌ಗಳ ಪರದಾಟ
ಗುರಿಯನ್ನು ಹಿಂಬಾಲಿಸಿದ ಮಂಗಳೂರು ತಂಡದ ಪರ ನಾಯಕ ಶ್ರೇಯಸ್ ಅಯ್ಯರ್ (38), ಲೋಚನ್ ಗೌಡ್ (35), ಕೃಷ್ಣಮೂರ್ತಿ ಸಿದ್ಧಾರ್ಥ (30), ರೋಹನ್ ಪಾಟೀಲ್ (25) ತಂಡಕ್ಕೆ ನೆರವಾದರು. ಉಳಿದ ಬ್ಯಾಟ್ಸ್‌ಮನ್‌ಗಳು ರನ್ ಕಲೆ ಹಾಕುವಲ್ಲಿ ವಿಫಲಾರದರು. ಅಂತಿಮವಾಗಿ ಮಂಗಳೂರು 19.2 ಓವರ್‌ಗಳಲ್ಲಿ 167 ರನ್‌ಗಳಿಗೆ ಆಲೌಟ್ ಆಯಿತು.
ಹುಬ್ಬಳ್ಳಿ ತಂಡ ನಿಶ್ಚಿತ್ ಪೈ ಹಾಗೂ ರಿಷಿ ಬೋಪಣ್ಣ ತಲಾ ಮೂರು ವಿಕೆಟ್ ಕಬಳಿಸಿದರು.
ಬೆಂಗಳೂರಿಗೆ ಜಯ
ಸೋಮವಾರ ನಡೆದ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 153 ರನ್‌ಗಳನ್ನು ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಗುಲ್ಬರ್ಗ್ ಮಿಸ್ಟಿಕ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 151 ರನ್ ಸೇರಿಸಿ ಸೋಲು ಕಂಡಿತು. ಬೆಂಗಳೂರು ತಂಡದ ಕುಶಾಲ್ ಅಮೋಘವಾಗಿ ಡೆತ್ ಓವರ್‌ನಲ್ಲಿ ಬೌಲಿಂಗ್ ನಡೆಸಿ ಅಬ್ಬರಿಸಿದರು. ಇವರು 19ನೇ ಓವರ್‌ನಲ್ಲಿ ಕೇವಲ ಎರಡು ರನ್ ನೀಡಿ ಜಯದಲ್ಲಿ ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications