ಭರವಸೆಯ ಆಟಗಾರ ಕೃಷ್ಣಾ ಶ್ರೀಜೇತ್ ಹಾಗೂ ಸ್ಟಾರ್ ಆಟಗಾರ ಅಭಿನವ್ ಮನೋಹಾರ್ ಬಾರಿಸಿದ ಅರ್ಧಶತಕದ ನೆರವಿನಿಂದ ಹುಬ್ಬಳ್ಳಿ ಟೈಗರ್ಸ್ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಶಿವಮೊಗ್ಗ ಲಯನ್ಸ್ ತಂಡವನ್ನು ಮಣಿಸಿ ಎರಡನೇ ಸ್ಥಾನವನ್ನು ಭಧ್ರ ಪಡಿಸಿಕೊಂಡಿದೆ.
ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಮೈದಾನದಲ್ಲಿ ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿ ಟೈಗರ್ಸ್ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕ ದೇವದತ್ ಪಡಿಕ್ಕಲ್ ಹಾಗೂ ನಾಯಕ ಮೊಹಮ್ಮದ್ ತಹಾ (8) ಜೋಡಿ ಮೊದಲ ವಿಕೆಟ್‌ಗೆ 4.5 ಓವರ್‌ಗಳಲ್ಲಿ 47 ರನ್ ಸೇರಿಸಿತು. ಸ್ಫೋಟಕ ಬ್ಯಾಟಿಂಗ್ ನಡೆಸಿದ ದೇವದತ್ ಪಡಿಕ್ಕಲ್ ಕೇವಲ 15 ಎಸೆತದಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ 33 ರನ್ ಸಿಡಿಸಿ ಔಟ್ ಆದರು. ಮಧ್ಯಮಕ್ರಾಂಕದಲ್ಲಿ ಕಾರ್ತಿಕೇಯ್ ರನ್ ಕಲೆ ಹಾಕುವಲ್ಲಿ ವಿಫಲರಾದರು.

ಕೃಷ್ಣ ಶ್ರೀಜೇತ್ ಹಾಗೂ ಅಭಿನವ್ ಮನೋಹರ್ ನಾಲ್ಕನೇ ವಿಕೆಟ್‌ಗೆ ಸೊಗಸಾದ ಬ್ಯಾಟಿಂಗ್ ನಡೆಸಿತು. ಈ ಜೋಡಿ 61 ಎಸೆತಗಳಲ್ಲಿ 124 ರನ್ ಸೇರಿಸಿತು. ಇದಕ್ಕುತ್ತರವಾಗಿ ಶ್ರೀಜೇತ್ 2 ಬೌಂಡರಿ, 6 ಸಿಕ್ಸರ್, 66 ರನ್ ಸಿಡಿಸಿದರು. ಸ್ಪೋಟಕ ಬ್ಯಾಟರ್ ಅಭಿನವ್ ಮನೋಹರ್ 35 ಎಸೆತಗಳಲ್ಲಿ 63 ಬಾರಿಸಿದರು. ಅಂತಿಮವಾಗಿ 20 ಓವರ್‌ಗಳಲ್ಲಿ 3 ವಿಕೆಟ್ 195 ರನ್ ಕಲೆ ಹಾಕಿತು.
ಗುರಿಯನ್ನು ಬೆನ್ನಟ್ಟಿದ ಶಿವಮೊಗ್ಗ ಲಯನ್ಸ್ ತಂಡದ ಆರಂಭ ಕಳಪೆಯಾಗಿತ್ತು. ತುಷಾರ್ ಸಿಂಗ್, ನಿಹಾಲ್ ಉಲ್ಲಾಳ್, ಅನೀಶ್ವರ್ ಗೌತಮ್ (14), ರೋಹಿತ್ ಕುಮಾರ್, ಅನಿರುದ್ಧ ಜೋಶಿ, ರನ್ ಕಲೆ ಹಾಕುವಲ್ಲಿ ವಿಫಲರಾದರು. ಧ್ರುವ್ ಪ್ರಭಾಕರ್ (29), ಹಾರ್ದಿಕ್ ರಾಜ್ (10) ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಶಿವಮೊಗ್ಗ ಲಯನ್ಸ್ 15.5 ಓವರ್‌ಗಳಲ್ಲಿ 99 ರನ್ ಸೇರಿಸಿ ಸೋಲು ಕಂಡಿತು. ಹುಬ್ಬಳ್ಳಿ ಟೈಗರ್ಸ್ ತಂಡದ ಪರ ಯಶ್ ರಾಜ್ 3, ಹಾಗೂ ಶ್ರೀಶ್ ಆಚಾರ್, ಕೆಸಿ ಕಾರ್ಯಪ್ಪ ತಲಾ 2 ವಿಕೆಟ್ ಕಬಳಿಸಿದರು.

ಇದಾದ ಬಳಿಕ ಎರಡನೇ ಪಂದ್ಯದಲ್ಲಿ ಗುಲ್ಬರ್ಗ ಮಿಸ್ಟೇಕ್ಸ್ ವಿರುದ್ಧ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಮಂಗಳೂರು ಡ್ರ್ಯಾಗನ್ಸ್ ಆರಂಭಿಕರು ರನ್ ಕಲೆ ಹಾಕುವಲ್ಲಿ ವಿಫಲರಾದರು. ಲೋಚನ್ ಗೌಡ್ (0), ಶರತ್ ಬಿಆರ್ (19), ಅನೀಶ್ ಕೆವಿ (12), ನಾಯಕ ಶ್ರೇಯಸ್ ಗೋಪಾಲ್ (17) ರನ್ ಕಲೆ ಹಾಕುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ತಿಪ್ಪಾ ರೆಡ್ಡಿ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ 45 ರನ್ ಸಿಡಿಸಿದರು. ಆದರ್ಶ್ ಪ್ರಜ್ವಲ್ 3 ಸಿಕ್ಸರ್ ಸಹಾಯದಿಂದ ಅಜೇಯ 27 ರನ್ ಕಲೆ ಹಾಕಿದರು. ಎಸ್ ಶಿವರಾಜ್ 5 ಬೌಂಡರಿ, 2 ಸಿಕ್ಸರ್ ನೆರವಿನಿಂದ ಅಜೇಯ 46 ರನ್ ಬಾರಿಸಿದರು. ಅಂತಿಮವಾಗಿ ಮಂಗಳೂರು 20 ಓವರ್‌ಗಳಲ್ಲಿ 6 ವಿಕೆಟ್‌ಗೆ 180 ರನ್ ಸೇರಿಸಿತು.
ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಗುಲ್ಬರ್ಗ್ ಮಿಸ್ಟೇಕ್ಸ್ ತಂಡದ ಪರ ಲುವನೀತ್ ಸಿಸೋಡಿಯಾ (29), ಹರ್ಷವರ್ಧನ್ (12), ಕೃಷ್ಣಮೂರ್ತಿ ಸಿದ್ಧಾರ್ಥ್ (19), ಬೆಂಗಳೂರು ಮೋಹಿತ್ (16), ಪ್ರವೀಣ್ ದುಬೆ (18), ಪೃಥ್ವಿರಾಜ್ (13), ಶಶಿ ಕುಮಾರ್ (22) ರನ್ ಕಲೆ ಹಾಕುವಲ್ಲಿ ವಿಫಲರಾದರು. ಅಂತಿಮವಾಗಿ ಗುಲ್ಬರ್ಗ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 141 ರನ್ ಸೇರಿಸಿ ಸೋಲು ಕಂಡಿತು. ಈ ಮೂಲಕ ಗುಲ್ಬರ್ಗ್ ಆಡಿದ 10 ಪಂದ್ಯಗಳಲ್ಲಿ 4ನೇ ಸೋಲು ಕಂಡಿತು.