For Quick Alerts
ALLOW NOTIFICATIONS  
For Daily Alerts
 

World Cup 2023: ನ್ಯೂಜಿಲೆಂಡ್ ತಂಡಕ್ಕೆ ಹಿನ್ನಡೆ; ವಿಶ್ವಕಪ್‌ನಿಂದ ಸ್ಟಾರ್ ಆಲ್‌ರೌಂಡರ್ ಹೊರಬೀಳುವ ಸಾಧ್ಯತೆ!

ಇದೇ ಅಕ್ಟೋಬರ್ 5ರಿಂದ ನವೆಂಬರ್ 19ರ ವರೆಗೆ ಭಾರತದಲ್ಲಿ ನಡೆಯುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಈಗಾಗಲೇ ಸಿದ್ಧತೆಗಳು ಆರಂಭವಾಗಿದ್ದು, ಅಂತಿಮ ವೇಳಾಪಟ್ಟಿ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ.

ಇದೇ ವೇಳೆ ನ್ಯೂಜಿಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಮೈಕೆಲ್ ಬ್ರೇಸ್‌ವೆಲ್ ಇತ್ತೀಚೆಗೆ ಅವರ ಬಲಗಾಲಿನ ಹಿಮ್ಮಡಿ (ದುರ್ಬಲ್ ಸ್ನಾಯು)ಗೆ ಗಾಯವಾಗಿದ್ದು, ಆರರಿಂದ ಎಂಟು ತಿಂಗಳ ಕಾಲ ಅವರನ್ನು ಕ್ರಿಕೆಟ್‌ನಿಂದ ಹೊರಗಿಡುವ ನಿರೀಕ್ಷೆಯಿದೆ.

Huge Setback For New Zealand; Michael Bracewell Likely To Be Ruled Out Of World Cup 2023

ಜೂನ್ 9ರಂದು ಲೀಡ್ಸ್‌ನಲ್ಲಿ ಯಾರ್ಕ್‌ಷೈರ್ ವಿರುದ್ಧ ಇಂಗ್ಲಿಷ್ ಟಿ20 ಬ್ಲಾಸ್ಟ್‌ನಲ್ಲಿ ವೋರ್ಸೆಸ್ಟರ್‌ಶೈರ್ ರಾಪಿಡ್ಸ್ ಪರ ಬ್ಯಾಟಿಂಗ್ ಮಾಡುವಾಗ ಮೈಕೆಲ್ ಬ್ರೇಸ್‌ವೆಲ್ ಗಾಯಗೊಂಡಿದ್ದರು.

32 ವರ್ಷದ ಆಲ್‌ರೌಂಡರ್ ಮೈಕೆಲ್ ಬ್ರೇಸ್‌ವೆಲ್ ಗುರುವಾರ, ಜೂನ್ 15ರಂದು ಇಂಗ್ಲೆಂಡ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಕೆಲವು ತಿಂಗಳುಗಳವರೆಗೆ ತರಬೇತಿಗೆ ಹೋಗುವ ಮೊದಲು, ಬ್ರೇಸ್‌ವೆಲ್ ಮುಂಬರುವ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯನ್ನು ಬಹುತೇಕ ಕಳೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

Huge Setback For New Zealand; Michael Bracewell Likely To Be Ruled Out Of World Cup 2023

ಇನ್ನು ಮೈಕೆಲ್ ಬ್ರೇಸ್‌ವೆಲ್ ಅವರು ಇತ್ತೀಚೆಗೆ ಮುಕ್ತಾಯಗೊಂಡ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಆಡಿದಾಗಿನಿಂದ ತವರಿನಿಂದ ದೂರವಾಗಿದ್ದಾರೆ. ಐಪಿಎಲ್‌ನಲ್ಲಿ ಮೈಕೆಲ್ ಬ್ರೇಸ್‌ವೆಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದರು.

ಇದೇ ವೇಳೆ, ಮೈಕೆಲ್ ಬ್ರೇಸ್‌ವೆಲ್ ಅವರು ಇಂಗ್ಲೆಂಡ್‌ನಲ್ಲಿ ಪುನರ್ವಸತಿಯಲ್ಲಿರುವ ಕಾರಣ, ಅವರು ಇನ್ನೂ ಕೆಲವು ವಾರಗಳವರೆಗೆ ತವರಿನಿಂದ ದೂರವಿರುವಂತೆ ಕಾಣುತ್ತಿದೆ.

ಐಪಿಎಲ್ 2023ರ ಮೊದಲ ಪಂದ್ಯದಲ್ಲಿ ಅನುಭವಿ ಬ್ಯಾಟರ್ ಕೇನ್ ವಿಲಿಯಮ್ಸನ್ ಅವರು ಗಾಯಗೊಂಡ ನಂತರ, ನ್ಯೂಜಿಲೆಂಡ್ ರಾಷ್ಟ್ರೀಯ ತಂಡಕ್ಕೆ ಇದು ಎರಡನೇ ಆಘಾತವಾಗಿದೆ. ಏಕದಿನ ವಿಶ್ವಕಪ್‌ಗೆ ಪ್ರಮುಖ ಆಟಗಾರರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.

ವಿಶ್ವಕಪ್‌ಗೆ ಮುನ್ನ ನ್ಯೂಜಿಲೆಂಡ್‌ಗೆ ಹಿನ್ನಡೆ: ಮುಖ್ಯ ಕೋಚ್ ಗ್ಯಾರಿ ಸ್ಟೇಡ್
ಐಸಿಸಿ ಏಕದಿನ ವಿಶ್ವಕಪ್‌ ಸಮೀಪಿಸುತ್ತಿರುವ ಮುನ್ನ ನ್ಯೂಜಿಲೆಂಡ್ ತಂಡಕ್ಕೆ ಭಾರೀ ಹೊಡೆತ ಬಿದ್ದಿದೆ. ಈ ಬಗ್ಗೆ ಮುಖ್ಯ ಕೋಚ್ ಗ್ಯಾರಿ ಸ್ಟೆಡ್ ಕಿವೀಸ್‌ಗೆ ಯಾವ ರೀತಿ ಹಿನ್ನಡೆಯಾಗಲಿದೆ ಎಂದು ಅಭಿಪ್ರಾಯಿಸಿದ್ದಾರೆ. ವಿಶ್ವಕಪ್‌ಗೆ ತಂಡವನ್ನು ರೂಪಿಸುತ್ತಿರುವಾಗ ಮುಂಬರುವ ತಿಂಗಳುಗಳಲ್ಲಿ ಗಾಯಗಳು ತಂಡಕ್ಕೆ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದಿದ್ದಾರೆ.

"ಮೊದಲನೆಯದಾಗಿ ಆಟಗಾರನಿಗೆ ಗಾಯವಾದಾಗ ತಂಡಕ್ಕೆ ಹಿನ್ನಡೆ ಎಂದು ನೀವು ಯಾವಾಗಲೂ ಭಾವಿಸುತ್ತೀರಿ. ಅದರಲ್ಲೂ ವಿಶೇಷವಾಗಿ ಅವರು ವಿಶ್ವಕಪ್ ಪಂದ್ಯಾವಳಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಮೈಕೆಲ್ ಬ್ರೇಸ್‌ವೆಲ್ ತಂಡದ ಉತ್ತಮ ಆಟಗಾರ ಮತ್ತು ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯದಿಂದ ನ್ಯೂಜಿಲೆಂಡ್ ತಂಡಕ್ಕಾಗಿ ಅದ್ಭುತ 15 ತಿಂಗಳುಗಳನ್ನು ಕಳೆದಿದ್ದಾರೆ," ಎಂದು ಕಿವೀಸ್ ಮುಖ್ಯ ಕೋಚ್ ಗ್ಯಾರಿ ಸ್ಟೇಡ್ ನ್ಯೂಜಿಲೆಂಡ್ ಕ್ರಿಕೆಟ್‌ಗೆ ತಿಳಿಸಿದ್ದಾರೆ.

"ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳಲ್ಲಿ ನಾವು ಮೈಕೆಲ್ ಬ್ರೇಸ್‌ವೆಲ್ ಅವರ ಅಸಾಧಾರಣ ಕೌಶಲ್ಯಗಳನ್ನು ನೋಡಿದ್ದೇವೆ. ಭಾರತದಲ್ಲಿ ನಡೆಯುವ ವಿಶ್ವಕಪ್‌ನಲ್ಲಿ ಕಿವೀಸ್ ತಂಡಕ್ಕೆ ಪ್ರಮುಖ ಆಟಗಾರರಾಗಿ ರೂಪುಗೊಳ್ಳುತ್ತಿದ್ದಾರೆ," ಎಂದರು.

"ಇದೀಗ ಗಾಯದಿಂದಾಗಿ ಮೈಕೆಲ್ ಬ್ರೇಸ್‌ವೆಲ್ ಸ್ವಾಭಾವಿಕವಾಗಿ ಸಾಕಷ್ಟು ನಿರಾಶೆಗೊಂಡಿರುತ್ತಾರೆ. ಆದರೆ, ಪ್ರಾಯೋಗಿಕವಾಗಿ ಗಾಯಗಳು ಕ್ರೀಡೆಯ ಒಂದು ಭಾಗವಾಗಿದೆ ಎಂದು ಒಪ್ಪಿಕೊಳ್ಳಬೇಕಿದೆ. ಸದ್ಯ ಬ್ರೇಸ್‌ವೆಲ್ ತನ್ನ ಪುನರ್ವಸತಿ ಕಡೆಗೆ ಗಮನವನ್ನು ತಿರುಗಿಸಬೇಕಿದೆ,'' ಎಂದು ನ್ಯೂಜಿಲೆಂಡ್ ಮುಖ್ಯ ಕೋಚ್ ಗ್ಯಾರಿ ಸ್ಟೇಡ್ ಹೇಳಿದರು.

Story first published: Wednesday, June 14, 2023, 10:49 [IST]
Other articles published on Jun 14, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+