ಅರ್ಧ ಶತಕ ಬಾರಿಸಿ ಹೃದಯಾಘಾತದಿಂದ ಮೃತಪಟ್ಟ ಕ್ರಿಕೆಟಿಗ

ಹೈದರಾಬಾದ್ ನವೆಂಬರ್ 18 : ಹೈದ್ರಾಬಾದ್‌ನಲ್ಲಿ ಕ್ರಿಕೆಟಗನೊಬ್ಬ ಹೃದಯಾಘಾತಕ್ಕೆ ಮೃತಪಟ್ಟಿರುವ ಘಟನೆ ನಡೆದಿದೆ. ಕ್ರಿಕೆಟಿಗ ವೀರೇಂದ್ರ ನಾಯ್ಕ್ ಎಂಬವರೆ ಈ ರೀತಿ ದುರಂತವಾಗಿ ಮೃತಪಟ್ಟಿದ್ದಾರೆ. ವೀರೇಂದ್ರ ನಾಯ್ಕ್ ಮಾರೆಡ್‌ಪಲ್ಲಿ ಸ್ಪೋರ್ಟಿಂಗ್ ಕ್ಲಬ್ ತಂಡದ ಆಟಗಾರನಾಗಿದ್ದು ಮಾರೆಡ್‌ಪಲ್ಲಿ ಬ್ಲ್ಯೂಸ್ ತಂಡದ ವಿರುದ್ಧ ಪಂದ್ಯ ನಡೆಯುತ್ತಿತ್ತು. ಹೈದ್ರಾಬಾದ್‌ನಲ್ಲಿ ಎ 3 ಡಿವಿಶನ್‌ನ ವನ್‌ಡೇ ಲೀಗ್ ನಡೆಯುತ್ತಿತ್ತು.
41ವರ್ಷದ ವಿರೇಂದ್ರ ನಾಯ್ಕ್ ಪತ್ನಿ ಹಾಗೂ 8ವರ್ಷದ ಪುತ್ರ ಹಾಗೂ ೫ ವರ್ಷದ ಪುತ್ರನನ್ನು ಕಳೆದುಕೊಂಡಿದ್ದಾರೆ. ವಿರೇಂದ್ರ ನಾಯ್ಕ್ ಕುಟುಂಬ ಮೆಹ್ದಿಪಟ್ನಮ್‌ನ ಗುಡಿಮಲ್ಕಾಪುರ್‌ನಲ್ಲಿ ವಾಸವಾಗಿದ್ದಾರೆ.
ಇವತ್ತು ಮೃತದೇಹದ ಪೋಸ್ಟ್ ಮಾರ್ಟಮ್‌ಅನ್ನು ಸ್ಥಳೀಯ ಗಾಂಧಿ ಆಸ್ಪತ್ರೆಯಲ್ಲಿ ನಡೆಸದ ಬಳಿಕ ಮರೆಡ್‌ಪಲ್ಲಿ ಪೊಲೀಸರು ಮೃತದೇಹವನ್ನು ಕುಟುಂಬಸ್ಥರ ವಶಕ್ಕೆ ಒಪ್ಪಿಸಿದ್ದಾರೆ. ಮೃತ ವಿರೇಂದ್ರ ನಾಯ್ಕ್ ಅವರ ಅಂತಿಮ ವಿಧಿವಿಧಾನಗಳು ಸಿಂಧುದುರ್ಗಾ ಜಿಲ್ಲೆಯ ಸವಂತ್ವಾಡಿಯಲ್ಲಿ ನಡೆಯಲಿದೆ.
ವಿರೇಂದ್ರ ನಾಯ್ಕ್ ತಮ್ಮ ಅಂತಿಮ ಇನ್ನಿಂಗ್ಸ್‌ನಲ್ಲಿ 66 ರನ್ ಬಾರಿಸಿದ್ದರು. ಕೀಪರ್‌ಗೆ ಕ್ಯಾಚಿತ್ತು ಔಟಾಗಿದ್ದರು. ಬಳಿಕ ಫೆವಿಲಿಯನ್‌ಗೆ ತೆರಳಿದ ವಿರೇಂದ್ರ ನಾಯ್ಕ್ ಅಲ್ಲಿ ಕುಸಿದು ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ವಿರೇಂದ್ರ ನಾಯ್ಕ್ ಅವರಿಗೆ ತಲೆಗೂ ಗಾಯವಾಗಿದೆ ಎಂದು ತಂಡದ ನಾಯಕ ತೃಪ್ತ್ ಸಿಂಗ್ ತಿಳಿಸಿದ್ದಾರೆ.
ವಿರೇಂದ್ರ ನಾಯ್ಕ್ ನಮ್ಮ ಕ್ಲಬ್ ಪರವಾಗಿ ಕಳೆದ 7ವರ್ಷಗಳಿಂದ ಆಡುತ್ತಿದ್ದಾರೆ. ಪಂದ್ಯದ ನಂತರದ ಪಾರ್ಟಿಗಳಿಂದಲೂ ವೀರೇಂದ್ರ ದೂರವಿರುತ್ತಿದ್ದರು. ಸೌಮ್ಯ ಸ್ವಭಾವದ ವ್ಯಕ್ತಿತಾಗಿದ್ದ ವೀರೇಂದ್ರ ಅವರನ್ನು ಕಳೆದುಕೊಂಡಿದ್ದು ಬೇಸರದ ಸಂಗತಿ. ತಂಡದ ನಾಯಕರಾಗಿಯೂ ವೀರೇಂದ್ರ ನಾಯ್ಕ್ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಎಚ್‌ಎಸ್‌ಬಿಸಿ ಕ್ಲಬ್‌ನ ಸ್ಪೋರ್ಟಿಂಗ್ ಸೆಕ್ರೇಟರಿ ಎಸ್ ವೆಂಕಟೇಶ್ವರ್ ಎಂಬವರು ಹೇಳಿದ್ದಾರೆ.
ಇನ್ನು ತಮ್ಮ ತಂಡದ ಆಟಗಾರನನ್ನು ಕಳೆದು ಕೊಂಡಿದ್ದಕ್ಕೆ ನಾಯಕ ತೃಪ್ತ್ ಸಿಂಗ್ ಬೇಸರವನ್ನು ವ್ಯಕ್ತ ಪಡಸಿದ್ದು, ವೀರೇಂದ್ರ ಯಾವಾಗಲೂ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದರು. ಆದರೆ ಇಂದು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ರು. ಅರ್ಧ ಶತಕ ಗಳಿಸಿ ಔಟಾದ ಬಳಿಕ ಶತಕವನ್ನು ಬಾರಿಸಬೇಕೆಂಬ ಬಯಕೆ ಹೊಂದಿದ್ದರ ಕುರಿತಾಗಿ ಮಾತನಾಡಿದ್ದರು ಎಂದು ಹೇಳಿದ್ದಾರೆ.
ಕದಲ್ಲಿ ಬ್ಯಾಟ್ ಬೀಸಿದ್ರು. ಅರ್ಧ ಶತಕ ಗಳಿಸಿ ಔಟಾದ ಬಳಿಕ ಶತಕವನ್ನು ಬಾರಿಸಬೇಕೆಂಬ ಬಯಕೆ ಹೊಂದಿದ್ದರ ಕುರಿತಾಗಿ ಮಾತನಾಡಿದ್ದರು ಎಂದು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications