ಹೈದರಾಬಾದ್ ಟೀಮ್ ಇಂಡಿಯಾ ಗೆಲುವಿನ ಭದ್ರ ಕೋಟೆ: ಇಲ್ಲಿ ಭಾರತದ ಅಂಕಿ ಅಂಶ ಬೆಸ್ಟ್
ಭಾರತ ಹಾಗೂ ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯತ್ತ ಎಲ್ಲರ ಚಿತ್ತ ನೆಟ್ಟಿದೆ. ಈ ಟೆಸ್ಟ್ ಪಂದ್ಯಕ್ಕಾಗಿ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣ ಈಗ ಸಂಪೂರ್ಣವಾಗಿ ಸಿದ್ಧವಾಗಿದೆ. ಈ ಅಂಗಳ ಟೀಮ್ ಇಂಡಿಯಾದ ಭದ್ರ ಕೋಟೆ. ಈ ಕೋಟೆಯಲ್ಲಿ ಇಂಗ್ಲೆಂಡ್ ಗೆಲುವಿನ ಬಾವುಟ ಹಾರಿಸಲು ಪ್ಲ್ಯಾನ್ ಮಾಡಿಕೊಂಡಿದೆ.
2010ರಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾದಾಗ ಇಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆದಿತ್ತು. ಎಂಎಸ್ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಮೈದಾನಕ್ಕೆ ಎಂಟ್ರೀ ನೀಡಿದಾಗ, ಪಂದ್ಯ ಡ್ರಾದಲ್ಲಿ ಕೊನೆಗೊಂಡಿತ್ತು. 2012ರಲ್ಲಿ ಇಲ್ಲಿ ಎರಡನೇ ಬಾರಿಗೆ ಟೆಸ್ಟ್ ಪಂದ್ಯ ನಡೆದಿತ್ತು. ಆ ಸಮಯದಲ್ಲೂ ನ್ಯೂಜಿಲೆಂಡ್ ಭಾರತ ಇನ್ನಿಂಗ್ಸ್ ಮತ್ತು 115 ರನ್‌ಗಳಿಂದ ಗೆದ್ದಿತು.

2013ರಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡವನ್ನು ಎದುರಿಸಿತ್ತು. ಈ ವೇಳೆಯೂ ಭಾರತ ಇನ್ನಿಂಗ್ಸ್ ಮತ್ತು 135 ರನ್‌ಗಳ ಬೃಹತ್ ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿತು. 2017ರಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಪಂದ್ಯ ಇದೇ ಮೈದಾನದಲ್ಲಿ ನಡೆದಿತ್ತು. ಇದರಲ್ಲಿ ಭಾರತ 208 ರನ್‌ಗಳ ಜಯ ಸಾಧಿಸಿತ್ತು. ಇದಾದ ನಂತರ 2018ರಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ಹಣಾಹಣಿ ಏರ್ಪಟ್ಟಿತ್ತು. ಆ ಪಂದ್ಯವನ್ನು ಟೀಂ ಇಂಡಿಯಾ 10 ವಿಕೆಟ್‌ಗಳಿಂದ ಗೆದ್ದಿತ್ತು.
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇದುವರೆಗೆ 5 ಪಂದ್ಯಗಳು ನಡೆದಿವೆ. ಆ ಪೈಕಿ ಭಾರತ ನಾಲ್ಕರಲ್ಲಿ ಗೆದ್ದು ಒಂದು ಡ್ರಾದಲ್ಲಿ ಸಾಧಿಸಿದೆ. ಭಾರತ ತಂಡ ಇಲ್ಲಿ ಒಮ್ಮೆಯೂ ಸೋತಿಲ್ಲ. ಇಲ್ಲಿ ಗೆಲುವಷ್ಟೇ ಅಲ್ಲ, ದೊಡ್ಡ ಗೆಲುವೂ ದಾಖಲಿಸಿದೆ. ಇದು ಭಾರತ ತಂಡದ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲಿದೆ. ಸುಮಾರು ಐದು ವರ್ಷಗಳ ನಂತರ ಇಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿರುವುದು ಬೇರೆ ವಿಚಾರ.

ಟೀಂ ಇಂಡಿಯಾದ ಬಹುತೇಕ ಆಟಗಾರರು ಇದೇ ಮೈದಾನದಲ್ಲಿ ಆಡಿದ್ದಾರೆ. ಇದರಲ್ಲಿ ಆಂಗ್ಲ ತಂಡದ ಆಟಗಾರರು ಪ್ರಥಮ ಬಾರಿಗೆ ಆಡಲಿದ್ದಾರೆ. ಈ ಮೈದಾನದಲ್ಲಿ ಆಡುವುದು ಇಂಗ್ಲೆಂಡ್‌ಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ಪಿಚ್ ಸಿದ್ಧವಾಗಿದ್ದರೂ, ಅದು ಹೇಗೆ ವರ್ತಿಸುತ್ತದೆ ಎಂದು ಹೇಳುವುದು ಕಷ್ಟ. ಆದರೆ ಇಲ್ಲಿ ಸ್ಪಿನ್ನರ್‌ಗಳಿಗೆ ನೆರವು ದೊರೆಯುವ ನಿರೀಕ್ಷೆಯಿದೆ. ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಇಂಗ್ಲೆಂಡ್ ಬ್ಯಾಟರ್‌ಗಳಿಗೆ ಸವಾಲು ಕಟ್ಟಿಟ್ಟ ಬುತ್ತಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications