Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನನ್ನ ಅನುಪಸ್ಥಿತಿಯಲ್ಲಿ ರಹಾನೆ ಅದ್ಭುತವಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ: ವಿರಾಟ್ ಕೊಹ್ಲಿ

I am confident Rahane will do a fantastic job in my absence, says Virat Kohli

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನಾದಿನ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಜಿಂಕ್ಯ ರಹಾನೆ ಬಗ್ಗೆ ವಿಶ್ವಾಸದ ಮಾತುಗಳನ್ನು ಆಡಿದ್ದಾರೆ. ಅಜಿಂಕ್ಯ ರಹಾನೆ ಎರಡನೇ ಟೆಸ್ಟ್ ಪಂದ್ಯದಿಂದ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದು ಅದಕ್ಕೆ ಪೂರಕವಾದ ಆತ್ಮವಿಶ್ವಾಸ ಅವರಲ್ಲಿ ಇದೆ ಎಂದಿದ್ದಾರೆ ವಿರಾಟ್ ಕೊಹ್ಲಿ.

ಅಜಿಂಕ್ಯ ರಹಾನೆ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾವನ್ನು ಈವರೆಗೆ ಎರಡು ಬಾರಿ ಮುನ್ನಡೆಸಿದ್ದಾರೆ. 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊಲ್ಕತ್ತಾದಲ್ಲಿ ನಡೆದ ಪಂದ್ಯ ಹಾಗೂ 2018ರಲ್ಲಿ ಆಪ್ಘಾನಿಸ್ತಾನದ ವಿರುದ್ಧ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದರು. ಈ ಎರಡು ಸಂದರ್ಭಗಳಲ್ಲೂ ಭಾರತ ಗೆಲುವನ್ನು ಕಂಡಿತ್ತು. ಇದೀಗ ರಹಾನೆ ವಿದೇಶಿ ನೆಲದಲ್ಲಿ ಮೊದಲ ಬಾರಿಗೆ ಭಾರತವನ್ನು ಮುನ್ನಡೆಸಲಿದ್ದಾರೆ.

ಆದರೆ ವಿರಾಟ್ ಕೊಹ್ಲಿ ರಹಾನೆಯ ಮೇಲೆ ಸಂಪೂರ್ಣವಾದ ವಿಶ್ವಾಸವನ್ನು ಹೊಂದಿದ್ದಾರೆ. "ರಹಾನೆ ಹಾಗೂ ನಾನು ಕಳೆದ ಹಲವು ವರ್ಷಗಳಿಂದ ಪರಸ್ಪರ ಹೊಂದಾಣಿಕೆಯನ್ನು ಕಂಡುಕೊಂಡಿದ್ದೇವೆ. ನಂಬಿಕೆಯ ಮೇಲೆಯೇ ನಾವು ಸಾಕಷ್ಟು ಉತ್ತಮ ಜೊತೆಯಾಟವನ್ನು ನೀಡಿದ್ದೇವೆ. ಎರಡು ಅಭ್ಯಾಸ ಪಂದ್ಯಗಳಲ್ಲಿ ರಹಾನೆ ಉತ್ತಮವಾಗಿ ಪ್ರದರ್ಶನ ನೀಡಿದ್ದಾರೆ. ಆತ ತುಂಬಾ ಸಂಯೋಜನೆ ಹೊಂದಿದಂತೆ ಕಾಣುತ್ತಾರೆ. ಜೊತೆಗೆ ತಂಡದ ಸಾಮರ್ಥ್ಯ ಅವರಿಗೆ ಅರಿವಿದ್ದು ಯಾವ ರೀತಿಯಲ್ಲಿ ಮುನ್ನಡೆದರೆ ಉತ್ತಮ ಎಂಬ ಅರಿವು ಅವರಿಗೆ ಇದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

"ನಾವು ಆಟದ ರೂಪುರೇಶೆಯನ್ನು ಈಗಾಗಲೇ ಹೊಂದಿದ್ದೇವೆ ಹಾಗೂ ಆಯಾಯ ವಿಚಾರಗಳಲ್ಲಿ ಹೀಗೆಯೇ ಮುನ್ನಡೆಯಬೇಕೆಂದು ಬಯಸುತ್ತೇವೆ. ನಾವಿಬ್ಬರೂ ಆಟದ ಒಂದೇ ಪುಟದಲ್ಲಿದ್ದು ನನ್ನ ಅನುಪಸ್ಥಿತಿಯಲ್ಲಿ ರಹಾನೆ ಅದ್ಭುತವಾಗಿ ಪ್ರದರ್ಶನ ನೀಡಲಿದ್ದಾರೆ" ಎಂದು ಕೊಹ್ಲಿ ಹೇಳಿಕೆಯನ್ನು ನೀಡಿದ್ದಾರೆ.

"ನಾನು ಇಲ್ಲಿ ಇರುವವರೆಗೆ ನಾಯಕನಾಗಿ ನಾಯಕತ್ವದಲ್ಲಿ ಹಾಗೂ ಆಟಗಾರನಾಗಿ ನನ್ನ ಸಾಮರ್ಥ್ಯ ಉತೃಷ್ಟ ಪ್ರದರ್ಶನವನ್ನು ನೀಡಲು ಬಯಸುತ್ತೇನೆ. ಅದಾದ ಬಳಿಕ ಅಜಿಂಕ್ಯ ರಹಾನೆ ಅತ್ಯುತ್ತಮವಾಗಿ ಪ್ರದರ್ಶನವನ್ನು ಮುಂದುವರಿಸಲಿದ್ದಾರೆ ಎಂದು ನನಗೆ ಸಂಪೂರ್ಣವಾಗಿ ನಂಬಿಕೆಯಿದೆ" ಎಂದು ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.

Story first published: Wednesday, December 16, 2020, 16:50 [IST]
Other articles published on Dec 16, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+