ಕೊಹ್ಲಿ ಜೊತೆ ಹೋಲಿಕೆಗೆ ಪ್ರತಿಕ್ರಿಯಿಸಿದ ಪಾಕ್ ಬ್ಯಾಟ್ಸ್ಮನ್ ಬಾಬರ್ ಅಝಾಮ್

ಕರಾಚಿ, ಫೆಬ್ರವರಿ 14: ಪಾಕಿಸ್ತಾನದ ಉದಯೋನ್ಮುಖ ಆಟಗಾರ ಬಾಬರ್ ಅಝಾಮ್ ಅವರನ್ನು ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಹೋಲಿಸಲಾಗಿತ್ತು. ಇದಕ್ಕೆ ಬಾಬರ್ ಪ್ರತಿಕ್ರಿತಿಸಿದ್ದಾರೆ. ಸಾಧನೆಯಲ್ಲಿ ನಾನಿನ್ನೂ ಅವರ (ಕೊಹ್ಲಿ) ಸಮೀಪಕ್ಕೂ ಬಂದಿಲ್ಲ ಎಂದವರು ಹೇಳಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್, ಮಿಕಿ ಆರ್ಥರ್ ಅವರು ಬಾಬರ್ ಅಝಾಮ್ ಅವರನ್ನು ಸಿಕ್ಕಪಟ್ಟೆ ಹೊಗಳಿದ್ದರು. ಈತ (ಬಾಬರ್) ವಿರಾಟ್ ಕೊಹ್ಲಿಯಷ್ಟೇ ಉತ್ತಮ ಆಟಗಾರ ಎಂದಿದ್ದರು. ಇತ್ತೀಚಿನ ಪಂದ್ಯಗಳಲ್ಲಿ ಬಾಬರ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದು ನಿಜವೆ. ಮಿಕಿ ಹೊಗಳಿದ್ದು ಇದೇ ಕಾರಣಕ್ಕೆ.
ಆದರೆ ವಿಶ್ವಮಟ್ಟದ ಕ್ರಿಕೆಟ್‌ನಲ್ಲಿ ತನ್ನದೇ ಛಾಪು ಮೂಡಿಸಿರುವ ವಿರಾಟ್ ಕೊಹ್ಲಿಗೆ ತನ್ನನ್ನು ಹೋಲಿಸಿದ್ದು ಬಾಬರ್ ಅವರಿಗೂ ಸರಿ ಕಾಣಿಸಿಲ್ಲ. ಬ್ಯಾಟಿಂಗ್ ವಿಚಾರದಲ್ಲಿ ನಾನಿನ್ನು ಅವರ ಸಮೀಪಕ್ಕೂ ಬಂದಿಲ್ಲ. ಹೀಗೆ ಹೋಲಿಕೆ ಮಾಡುವುದನ್ನು ನಿಲ್ಲಿಸಿ ಎಂದು ಅಝಾಮ್ ಕೇಳಿಕೊಂಡಿದ್ದಾರೆ.
'ಜನರು ನನ್ನನ್ನು ವಿರಾಟ್ ಕೊಹ್ಲಿಗೆ ಹೋಲಿಸುತ್ತಿದ್ದಾರೆ. ಅವರೊಬ್ಬರು (ವಿರಾಟ್) ಖ್ಯಾತ ಆಟಗಾರರು. ನಾನು ಅವರ ಸಮೀಪಕ್ಕೂ ಬಂದಿಲ್ಲ. ನಾನು ಈಗಷ್ಟೇ ಕ್ರಿಕೆಟ್ ವೃತ್ತಿ ಜೀವನವನ್ನು ಆರಂಭಿಸುತ್ತಿದ್ದೇನೆ. ಕೊಹ್ಲಿ ಈಗಾಗಲೇ ಬಹಳಷ್ಟು ಸಾಧಿಸಿದ್ದಾರೆ. ಅವರ ಸಾಧನೆಯನ್ನು ನಾನು ಇನ್ನಷ್ಟೇ ತಲುಪಬೇಕಿದೆ' ಎಂದು ಪಾಕಿಸ್ತಾನ ಸೂಪರ್ ಲೀಗ್ ಪಂದ್ಯವೊಂದರ ವೇಳೆ ಬಾಬರ್ ಪ್ರತಿಕ್ರಿಯಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications