ಹಾರ್ದಿಕ್‌ಗೆ ಬೌಲಿಂಗ್ ಮಾಡಲು ಭಯ: ಲಸಿತ್ ಮಾಲಿಂಗ

ಮುಂಬೈ, ಏಪ್ರಿಲ್ 17: ಟೀಮ್ ಇಂಡಿಯಾ ಮತ್ತು ಮುಂಬಯಿ ಇಂಡಿಯನ್ಸ್‌ನ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಎದುರು ಬೌಲಿಂಗ್ ಮಾಡಲು ಭಯವಾಗುತ್ತದೆ ಎಂದು ಐಪಿಎಲ್‌ನ ಸಾರ್ವಕಾಲಿಕ ಅತಿ ಹೆಚ್ಚು ವಿಕೆಟ್ ಗಳಿಕೆಯ ಬೌಲರ್ ಸ್ಲಿಂಗಾ ಖ್ಯಾತಿಯ ಲಸಿತ್ ಮಾಲಿಂಗ ಹೇಳಿದ್ದಾರೆ.
ಮುಂಬಯಿ ಇಂಡಿಯನ್ಸ್ ತಂಡದ ಸ್ಟ್ರೈಕ್ ಬೌಲರ್ ಆಗಿರುವ 35 ವರ್ಷದ ಅನುಭವಿ ವೇಗಿ ಮಾಲಿಂಗ ಇಂಥದ್ದೊಂದು ಅಚ್ಚರಿಕೆಯ ಹೇಳಿಕೆ ನೀಡಿದ್ದಾರೆ.
ಐಪಿಎಲ್ 2019 ವಿಶೇಷ ಪುಟ | ಗ್ಯಾಲರಿ
ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುವ ಹಾರ್ದಿಕ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಪಂದ್ಯದ ದಿಕ್ಕನ್ನೇ ಬದಲಾಯಿಸಬಲ್ಲಆಟಗಾರ. ಇತ್ತೀಚೆಗೆ ಅಂದರೆ ಸೋಮವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದ 25 ವರ್ಷದ ಆಲ್‌ರೌಂಡರ್ 16 ಎಸೆತಗಳಲ್ಲಿ ಅಜೇಯ 37 ರನ್ ಸಿಡಿಸಿದ್ದರು.
ಅದರಲ್ಲೂ ಇನಿಂಗ್ಸ್‌ನ 19ನೇ ಓವರ್‌ನಲ್ಲಿ ಆರ್‌ಸಿಬಿ ಬೌಲರ್ ಪವನ್ ನೇಗಿ ಬೌಲಿಂಗ್‌ನಲ್ಲಿ 21 ರನ್‌ಗಳನ್ನು ಚಚ್ಚಿ ಇಂಡಿಯನ್ಸ್‌ಗೆ ವಿಜಯದ ಮಾಲೆ ತೊಡಿಸಿದ್ದರು.
ಈ ಪಂದ್ಯದ ಬಳಿಕ ಮುಂಬಯಿ ಇಂಡಿಯನ್ಸ್ ತಂಡದ ಎಮ್‌ಐ ಟಿವಿಯಲ್ಲಿ ಮಾತನಾಡಿದ ಮಾಲಿಂಗ, ""ಹಾರ್ದಿಕ್ ಅದ್ಭುತ ಲಯದಲ್ಲಿದ್ದಾರೆ. ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಪಾಂಡ್ಯ ವಿರುದ್ಧ ಬೌಲಿಂಗ್ ಮಾಡುವಂತಾದರೆ ನನಗೆ ನಿಜಕ್ಕೂ ಭಯವಾಗಲಿದೆ,'' ಎಂದು ಹೇಳಿದ್ದರು.
ಐಪಿಎಲ್‌ನಲ್ಲಿ ಒಟ್ಟಾರೆ 114 ಪಂದ್ಯಗಳನ್ನು ಆಡಿರುವ ಲಸಿತ್ ಮಾಲಿಂಗ 19.03ರ ಸರಾಸರಿಯಲ್ಲಿ 161 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಅಲ್ಲದೆ ಐಪಿಎಲ್‌ನಲ್ಲಿ 150ಕ್ಕೂ ಹೆಚ್ಚು ವಿಕೆಟ್ ಪಡೆದಿರುವ ಏಕಮಾತ್ರ ಬೌಲರ್ ಕೂಡ.
ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ ಮೇ 30ರಂದು ಆರಂಭವಾಗಲಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ತಂಡ ಭಾರತದ ವಿರುದ್ಧ ಜೂನ್ 6ರಂದು ಲೀಡ್ಸ್‌ನ ಹೆಡಿಂಗ್ಲೇ ಓವಲ್ ಕ್ರೀಡಾಂಗಣದಲ್ಲಿ ಪೈಪೋಟಿ ನಡೆಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications