ನಿಧಾನವಾಗಿ ಆಡಿದ್ದೇ ತಪ್ಪಾಯಿತು ಎಂದ ಎಂಎಸ್ ಧೋನಿ
ಅಹಮದಾಬಾದ್, ಏ. 20: ರಾಜಸ್ಥಾನದ ವಿರುದ್ಧದ ಪಂದ್ಯದಲ್ಲಿ ಎಂಎಸ್ ಧೋನಿ ಆಟ ಎಂದಿನಂತೆ ಇರಲಿಲ್ಲ. ಧೋನಿ ಬ್ಯಾಟ್ ಮಂಕಾಗಿತ್ತು. 37 ಚೆಂಡು ಎದುರಿಸಿ ಅವರು ಗಳಿಸಿದ್ದು ಕೇವಲ 31 ರನ್.
ರಾಜಸ್ಥಾನ ರಾಯಲ್ಸ್ ವಿರುದ್ಧ 8 ವಿಕೆಟ್ ಸೋಲು ಕಂಡ ನಂತರ ಚೆನ್ನೈ ಸೂಪರ್ ಕಿಂಗ್ಸ್ ನಾಯಕ್ ಎಂಎಸ್ ಧೋನಿ ಪಂದ್ಯದ ಕುರಿತಾದ ತಮ್ಮ ನಿಧಾನಗತಿಯ ಬ್ಯಾಟಿಂಗ್ ಬಾಯಿ ಬಿಟ್ಟಿದ್ದಾರೆ.[ಪಂದ್ಯದ ಸ್ಕೋರ್ ಪಟ್ಟಿ]

ನಾನು ಹೆಚ್ಚು ಬಾಲ್ ಗಳನ್ನು ಎದುರಿಸಿದೆ. ಆದರೆ ತುಂಬಾ ನಿಧಾನವಾಗಿ ಆಡಿದೆ. ನಾವು ಆರಂಭವನ್ನು ಉತ್ತಮವಾಗಿಯೇ ಮಾಡಿದ್ದೆವು. ಆದರೆ ಹೆಚ್ಚು ಬಾಲ್ ಆಡಿದ್ದು ಮಾರಕವಾಯಿತು ಎಂದು ಪಂದ್ಯದ ನಂತರ ಹೇಳಿದ್ದಾರೆ.
ಅಹಮದಾಬಾದ್ ನಲ್ಲಿ ರಾಜಸ್ಥಾನ ಅರ್ಹ ಗೆಲುವನ್ನೇ ದಾಖಲಿಸಿದೆ. ನಮ್ಮ ಗೆಲುವಿನ ಓಟಕ್ಕೆ ತಡೆ ಬಿದ್ದಿದೆ ಎಂದು ಎಂಎಸ್ ಹೇಳಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ್ದ ಸಿಎಸ್ ಕೆ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 156 ರನ್ ಗಳಿಸಿತ್ತು. ನಾಯಕ ಎಂಎಸ್ ಧೋನಿ 37 ಬಾಲ್ ಗಳಲ್ಲಿ ಕೇವಲ 31 ರನ್ ಗಳಿಸಿದ್ದರು. ಅಲ್ಲದೇ ಕೇವಲ ನಾಲ್ಕು ಬೌಂಡರಿ ಗಳಿಸಿ ರಾಜಸ್ಥಾನ್ ದ ಬೌಲರ್ ಗಳ ಎದುರು ಪರದಾಡಿದ್ದರು. ಮತ್ತೊಂದೆಡೆ ಕ್ರೀಸ್ ಗೆ ಕಚ್ಚಿದ್ದ ಬ್ರಾವೋ ಸ್ಫೋಟಕ ಆಟವಾಡದಿದ್ದರೆ ಚೆನ್ನೈ ಈ ಮೊತ್ತವನ್ನು ಗಳಿಸಲು ಸಾಧ್ಯವಾಗುತ್ತಿರಲಿಲ್ಲ.[ವಿಶ್ವಕಪ್ 2015 ಹಿಂದಕ್ಕೆ ದೂಡಿದ ಐಪಿಎಲ್ ಹಬ್ಬ]
ಚೇಸಿಂಗ್ ಗೆ ಇಳಿದ ರಾಜಸ್ಥಾನದ ಆಟಗಾರರು ಆರಂಭದಿಂದಲೂ ಚೆನ್ನೈ ಬೌಲರ್ ಗಳನ್ನು ಬೆಂಡೆತ್ತಿದ್ದರು. ಶೆನ್ ವಾಟ್ಸನ್ ಮತ್ತು ಅಂಜಿಕ್ಯಾ ರಹಾನೆ ಅತ್ಯುತ್ತಮ ಆಟ ಸುಲಭವಾಗಿ ಜಯ ತಂದುಕೊಟ್ಟಿತು. 144 ರನ್ ಗಳ ಜತೆಯಾಟ ನೀಡಿದ ಆರಂಭಿಕ ಜೋಡಿ ರಾಜಸ್ಥಾನಕ್ಕೆ ಸತತ 5ನೇ ಜಯ ದಕ್ಕುವಂತೆ ಮಾಡಿತು.
Story first published: Wednesday, January 3, 2018, 10:02 [IST]
Other articles published on Jan 3, 2018
Read in English: I ate up a lot of deliveries, says Dhoni
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications