For Quick Alerts
ALLOW NOTIFICATIONS  
For Daily Alerts
 

15 ಕೋಟಿಗೆ ಹರಾಜಾದ ಬಗ್ಗೆ ಅಚ್ಚರಿಯನ್ನು ವ್ಯಕ್ತಪಡಿಸಿದ ಕೈಲ್ ಜ್ಯಾಮಿಸನ್

I don’t know if this will ever happen again: Jamieson on 15 crore price tag

ನ್ಯೂಜಿಲೆಂಡ್‌ನ ನೀಳಕಾಯದ ಆಟಗಾರ ಕೈಲ್ ಜ್ಯಾಮಿಸನ್ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಕಮಾಲ್ ಮಾಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೈಲ್ ಜ್ಯಾಮಿಸನ್ ಅವರನ್ನು 15 ಕೋಟಿ ರೂಪಾಯಿಗೆ ಖರೀದಿಸಿದೆ. ಈ ಮೂಲಕ ದಾಖಲೆ ಮೊತ್ತದ ಡೀಲ್ ಪಡೆದುಕೊಂಡಿದ್ದಾರೆ ಕೀವಿಸ್ ವೇಗಿ.

ಈ ಬಗ್ಗೆ ತಮ್ಮ ಅನುಭವನ್ನು ಕೈಲ್ ಜ್ಯಾಮಿಸನ್ ಹಂಚಿಕೊಂಡಿದ್ದಾರೆ. "ರಾತ್ರಿ ಎದ್ದು ಫೋನ್ ನೋಡಿದಾಗ ನನಗೆ ನಿಜಕ್ಕೂ ನಂಬಲಾಗದ ಅನುಭವವಾಗಿತ್ತು. ಇದು ಮುಂದೆ ನಡೆಯಲಿದೆಯಾ ಎಂಬುದು ನನಗೆ ತಿಳಿದಿಲ್ಲ. ಹೀಗಾಗಿ ಆ ಕ್ಷಣವನ್ನು ಕುಳಿತು ನಾನು ಆನಂದಿಸಿದೆ. ಅದು ನನಗೆ ವಿಚಿತ್ರವಾದ ಸಮಯವಾಗಿತ್ತು ಎಂದಿದ್ದಾರೆ ಕೈಲ್ ಜ್ಯಾಮಿಸನ್.

"ನನಗೆ ಶೇನ್ ಬಾಂಡ್ ಸಂದೇಶವನ್ನು ಕಳುಹಿಸಿದ್ದರು. 'ಇದು ಎಷ್ಟು ಉತ್ತಮವಾಗಿದೆ' ಎಂದಿದ್ದರು ಅವರು. ನನಗೆ ಆಗ ಆ ಮೊತ್ತ ನ್ಯೂಜಿಲೆಂಡ್ ಕರೆನ್ಸಿಗೆ ಬದಲಾಯಿಸಿದರೆ ಎಷ್ಟಾಗಲಿದೆ ಎಂಬುದು ತಿಳಿದಿರಲಿಲ್ಲ. ಎರಡು ಮೂರು ನಿಮಿಷಗಳ ಕಾಲ ಅವರೊಂದಿಗೆ ಈ ಬಗ್ಗೆ ಚರ್ಚಿಸಿದ್ದು ನನಗೆ ಆಹ್ಲಾದಕರವಾಗಿತ್ತು" ಎಂದಿದ್ದಾರೆ ಕೈಲ್ ಜ್ಯಾಮಿಸನ್.

ಕೈಲ್ ಜ್ಯಾಮಿಸನ್ ಈಗ ನ್ಯೂಜಿಲೆಂಡ್ ಕ್ರಿಕೆಟ್ ತಂಡದಲ್ಲಿ ಮೂರು ಮಾದರಿಯಲ್ಲೂ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು "ದೊಡ್ಡ ಮೊತ್ತಕ್ಕೆ ನಾನು ಹರಾಜಾಗಿರುವ ಕಾರಣ ಆ ಪ್ರೈಸ್ ಟ್ಯಾಗ್ ನನ್ನ ಪ್ರದರ್ಶನದ ಮೇಲೆ ಯಾವುದೇ ರೀತಿಯಲ್ಲೂ ವ್ಯತಿರಿಕ್ತ ಪರಿಣಾಮ ಬೀರದು" ಎಂದಿದ್ದಾರೆ.

ಜೇಮಿಸನ್ ಸದ್ಯ ನ್ಯೂಜಿಎಲಮಡ್ ತಂಡದ ಜೊತೆಗೆ ಕ್ರೈಸ್ಟ್ ಚರ್ಚ್‌ನಲ್ಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಫೆಬ್ರವರಿ 22ರಂದು ಮೊದಲ ಟಿ20 ಹ್ಯಾಗ್ಲೇ ಓವಲ್‌ನಲ್ಲಿ ನಡೆಯಲಿದ್ದು ಈ ಪಂದ್ಯದಲ್ಲಿ ಕೈಲ್ ಜ್ಯಾಮಿಸನ್ ಕೀವಿಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.

Story first published: Friday, February 19, 2021, 15:11 [IST]
Other articles published on Feb 19, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+