ದಾಖಲೆಯ 5 ವಿಕೆಟ್ ಗಳಿಸಿ, ಟೀಕಾಕಾರಿಗೆ ಟಾಂಗ್ ಕೊಟ್ಟ ಪಾಂಡ್ಯ

ನ್ಯಾಟಿಂಗ್ ಹ್ಯಾಮ್, ಆಗಸ್ಟ್ 20: ಹಾರ್ದಿಕ್ ಪಾಂಡ್ಯ ಅವರು ಆಲ್ ರೌಂಡರ್ ಆಗಲು ನಾಲಾಯಕ್, ತಂಡಕ್ಕೆ ಆಯ್ಕೆ ಮಾಡಿದ್ದು ಯಾಕೋ? ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಅವರಿಗೆ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಮೈಕಲ್ ಹೋಲ್ಡಿಂಗ್, ಹರ್ಭಜನ್ ಸಿಂಗ್ ಸೇರಿದಂತೆ ಹಲವಾರು ಮಂದಿ ಮಾಡಿದ್ದ ಟೀಕೆಗೆ ಹಾರ್ದಿಕ್ ಪಾಂಡ್ಯ ಅವರು ತಮ್ಮ ಉತ್ತಮ ಬೌಲಿಂಗ್ ಮೂಲಕವೇ ಉತ್ತರಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ಇಂಗ್ಲೆಂಡಿನ ಬ್ಯಾಟಿಂಗೆ ಬೆನ್ನೆಲುಬು ಮುರಿದ ಪಾಂಡ್ಯ ಅವರು 28ರನ್ನಿತ್ತು 5 ವಿಕೆಟ್ ಗಳಿಸುವ ಮೂಲಕ, ಇಂಗ್ಲೆಂಡ್ ತಂಡವು 161ಸ್ಕೋರಿಗೆ ಆಲೌಟ್ ಆಗುವಂತೆ ಮಾಡಿದರು. ದಿನದ ಅಂತ್ಯಕ್ಕೆ ಭಾರತ 124/2 ಸ್ಕೋರ್ ಮಾಡಿದೆ. 292ರನ್ ಮುನ್ನಡೆಯೊಂದಿಗೆ ಗೆಲುವಿನ ಕನಸು ಚಿಗುರೊಡೆದಿದೆ.
ಕೇವಲ ತಮ್ಮ 10ನೇ ಟೆಸ್ಟ್ ಪಂದ್ಯವಾಡುತ್ತಿರುವ ಪಾಂಡ್ಯ ಅವರನ್ನು ಯಾವುದೇ ಆಟಗಾರರ ಜತೆ ಹೋಲಿಸುವುದು ಸರಿಯಲ್ಲ ಎಂಬುದು ಅಭಿಮಾನಿಗಳ ವಾದ.
24 ವರ್ಷ ವಯಸ್ಸಿನ ಪಾಂಡ್ಯ ಕೂಡಾ ಈ ಬಗ್ಗೆ ಪ್ರತಿಕ್ರಿಯಿಸಿ, ನಾನು ಎಂದಿಗೂ ಕಪಿಲ್ ದೇವ್ ಆಗಬೇಕು ಎಂದು ಬಯಸಿರಲಿಲ್ಲ. ನಾನು ಹಾರ್ದಿಕ್ ಪಾಂಡ್ಯ ಆಗಿಯೇ ಇರುತ್ತೇನೆ. ನಾನು ಹಾರ್ದಿಕ್ ಪಾಂಡ್ಯ ಆಗಿಯೇ ಈ ಹಂತದವರೆಗೆ ಬೆಳೆದಿದ್ದೇನೆ. ಕಪಿಲ್ ದೇವ್ ಓರ್ವ ಶ್ರೇಷ್ಠ ಕ್ರಿಕೆಟಿಗ. ಅವರೊಂದಿಗೆ ನನ್ನನ್ನು ಹೋಲಿಸಬೇಡಿ. ನೀವು ನನ್ನನ್ನು ಕಪಿಲ್ ದೇವ್ ಅವರೊಂದಿಗೆ ಹೋಲಿಸದಿದ್ದರೆ ನನಗೆ ಸಂತೋಷವಾಗುತ್ತದೆ ಎಂದಿದ್ದಾರೆ.
ನಾನು ಟೀಕಾಕಾರರಿಗಾಗಿ ಆಡುವುದಿಲ್ಲ, ನಾನು ದೇಶಕ್ಕಾಗಿ ಮಾತ್ರ ಆಡುತ್ತೇನೆ. ನನ್ನ ಪ್ರದರ್ಶನಕ್ಕೆ ತಂಡ ಸಂತೃಪ್ತಿ ವ್ಯಕ್ತ ಪಡಿಸಿದೆ. ನನಗೆ ಅಷ್ಟೇ ಸಾಕು ಎಂದು ಟೀಕಾಕಾರಿಗೆ ತಿರುಗೇಟು ನೀಡಿದ್ದಾರೆ
59 ವರ್ಷ ವಯಸ್ಸಿನ ಕಪಿಲ್ ದೇವ್ ಅವರು 131 ಟೆಸ್ಟ್ ಪಂದ್ಯಗಳಿಂದ 31.05 ರನ್ ಸರಾಸರಿಯಂತೆ 5,248ರನ್ ಗಳಿಸಿದ್ದು, 8 ಶತಕ ಬಾರಿಸಿದ್ದಾರೆ. 29.64 ಸರಾಸರಿಯಂತೆ 434 ವಿಕೆಟ್ ಗಳನ್ನು ಗಳಿಸಿದ್ದಾರೆ.(ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications