For Quick Alerts
ALLOW NOTIFICATIONS  
For Daily Alerts
 

'ಭಾರತ ಕೊಹ್ಲಿಯ ತಂಡ ಅನ್ನೋದಕ್ಕಿಂತ ರವಿ ಶಾಸ್ತ್ರಿಯ ತಂಡದಂತಿದೆ'

I feel India is more of Ravi Shastris team than Virat Kohlis: Monty Panesar
ಇದು ಟೀಂ ಇಂಡಿಯಾ ತರ ಕಾಣ್ತಾ ಇಲ್ಲ ಎಂದ ಇಂಗ್ಲೆಂಡ್ ಕ್ರಿಕೆಟರ್ | Oneindia Kannada

ಲಂಡನ್: ಭಾರತ ಕ್ರಿಕೆಟ್ ತಂಡದ ಈಚಿನ ಯಶಸ್ಸುಗಳಿಗೆ ತಂಡದ ಮುಖ್ಯ ಕೋಚ್ ರವಿ ಶಾಸ್ತ್ರಿ ಮತ್ತು ನಾಯಕ ವಿರಾಟ್ ಕೊಹ್ಲಿ ಎಂದು ಎಲ್ಲರೂ ಶ್ಲಾಘಿಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿರುವ ಕೊಹ್ಲಿ-ಶಾಸ್ತ್ರಿ ಜೋಡಿ ತಂಡದಲ್ಲಿ ಗೆಲುವಿನ ಹಪಹಪಿ ಬೆಳೆಯುವಂತೆ ನೋಡಿಕೊಂಡಿದೆ.

ಆದರೆ ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್ ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿಗಿಂತ ರವಿ ಶಾಸ್ತ್ರಿಯ ಪ್ರಭಾವ ಹೆಚ್ಚಿದೆ ಎಂದು ಹೇಳಿದ್ದಾರೆ. ತಂಡದಲ್ಲಿ ಆತ್ಮವಿಶ್ವಾಸ ಹೆಚ್ಚಿಸಿರುವುದು ಶಾಸ್ತ್ರಿ ಎಂದಿರುವ ಪನೇಸರ್, ಆಸ್ಟ್ರೇಲಿಯಾ ವಿರುದ್ಧ ಭಾರತ ಸರಣಿ ಗೆದ್ದಿರುವುದನ್ನು ಪವಾಡ ಎಂಬಂತೆ ಬಣ್ಣಿಸಿದ್ದಾರೆ.

'ಕಳೆದ ಕೆಲವು ತಿಂಗಳುಗಳ ಹಿಂದಿನ ಭಾರತದ ಸಾಧನೆಯನ್ನು ಯಾರಾದರೂ ಒಬ್ಬರು ವಿಶ್ಲೇಷಿಸಿದರೆ, ಭಾರತ ತಂಡ ವಿರಾಟ್ ಕೊಹ್ಲಿಗಿಂತಲೂ ಹೆಚ್ಚು ರವಿಶಾಸ್ತ್ರಿಯ ತಂಡವಾಗಿದೆ ಎನ್ನುವುದನ್ನು ನೀವು ನೋಡಬಹುದು. ನನಗಂತೂ ಹಾಗೇ ಕಾಣಿಸುತ್ತಿದೆ,' ಎಂದು ಪನೇಸರ್ ಹೇಳಿದ್ದಾರೆ.

'ಭಾರತೀಯ ಕ್ರಿಕೆಟ್ ತಂಡದಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದಿದ್ದರೆ ಅದು ರವಿ ಶಾಸ್ತ್ರಿ. ಅಡಿಲೇಡ್‌ನಲ್ಲಿ '36' ರನ್‌ಗಳ ಮುಖಭಂಗದ ಬಳಿಕ ಅಲ್ಲಿ ಭಾರತ ಸರಣಿ ಗೆದ್ದಿದ್ದು ಒಂದು ರೀತಿಯಲ್ಲಿ ಪವಾಡವೇ ಸರಿ,' ಎಂದು ಪನೇಸರ್ ಬಣ್ಣಿಸಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದ ವೇಳೆ ಭಾರತ ತಂಡ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 36 ರನ್‌ಗೆ ಆಟ ಮುಗಿಸಿ ಮುಖಭಂಗಕ್ಕೀಡಾಗಿತ್ತು. ಆದರೆ ಬಳಿಕ ಸರಣಿಯನ್ನು 2-1ರಿಂದ ಗೆದ್ದಿತ್ತು.

Story first published: Friday, May 28, 2021, 21:21 [IST]
Other articles published on May 28, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+