ನೋಡಿ, ಆತನೇ ಬೇರೆ ನಾನೇ ಬೇರೆ; ಕೊಹ್ಲಿ ಜೊತೆ ಹೋಲಿಕೆ ಮಾಡುವವರಿಗೆ ಬಾಬರ್ ಅಜಮ್ ಹೇಳಿದ್ದಿಷ್ಟು

ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನದ ನಾಯಕ ಬಾಬರ್ ಅಜಮ್ ನಡುವೆ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಅತಿಹೆಚ್ಚಾಗಿ ಹೋಲಿಕೆಗಳನ್ನು ಮಾಡುತ್ತಿರುತ್ತಾರೆ. ಈ ಇಬ್ಬರಲ್ಲಿ ಯಾರು ಉತ್ತಮ, ಯಾರು ಆಕ್ರಮಣಕಾರಿ ಆಟಗಾರ ಹಾಗೂ ಯಾರು ಹೆಚ್ಚಿನ ದಾಖಲೆಗಳನ್ನು ನಿರ್ಮಿಸಿದ್ದಾರೆ ಎಂಬ ವಿಷಯಗಳ ಕುರಿತು ನೆಟ್ಟಿಗರು ಚರ್ಚೆ ಮಾಡುತ್ತಿರುತ್ತಾರೆ.
ಇತ್ತೀಚೆಗಷ್ಟೆ ಬಾಬರ್ ಅಜಮ್ ಅಂತಾರಾಷ್ಟ್ರೀಯ ಏಕದಿನ ಬ್ಯಾಟ್ಸ್‌ಮನ್ ಶ್ರೇಯಾಂಕ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಅಗ್ರಸ್ಥಾನವನ್ನು ಪಡೆದುಕೊಂಡಿದ್ದರು. ಸುದೀರ್ಘ ಕಾಲದವರೆಗೆ ಏಕದಿನ ಬ್ಯಾಟ್ಸ್‌ಮನ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿಯನ್ನು ಬಾಬರ್ ಅಜಮ್ ಹಿಂದಿಕ್ಕಿದ ಮೇಲೆ ಈ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆದವು. ಕೊಹ್ಲಿಗಿಂತ ಬಾಬರ್ ಅಜಮ್ ಅತ್ಯುತ್ತಮ ಆಟಗಾರ ಎಂಬ ವಾದಗಳು ಕೇಳಿಬಂದವು. ಇನ್ನೂ ಕೆಲವರು ವಿರಾಟ್ ಕೊಹ್ಲಿ ಕೆಲ ದಿನಗಳಿಂದ ಏಕದಿನ ಪಂದ್ಯಗಳಲ್ಲಿ ಆಡಿಲ್ಲ ಹೀಗಾಗಿ ಬಾಬರ್ ಅಜಮ್ ಏಕದಿನ ಬ್ಯಾಟ್ಸ್‌ಮನ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ ಅಷ್ಟೇ ಎಂದು ಪ್ರತಿವಾದವನ್ನು ಮಾಡಿದ್ದರು.
ಆದರೆ ಇದೀಗ ಸ್ವತಃ ಬಾಬರ್ ಅಜಮ್ ಸಾಮಾಜಿಕ ಜಾಲತಾಣದಲ್ಲಿ ನಡೆಯುವ ವಿರಾಟ್ ಕೊಹ್ಲಿ ಮತ್ತು ತಮ್ಮ ನಡುವಿನ ಹೋಲಿಕೆಯ ಕುರಿತು ಮಾತನಾಡಿದ್ದು ಈ ಕೆಳಕಂಡ ಅಂಶಗಳನ್ನು ಹೇಳಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಶ್ರೇಷ್ಠ ಆಟಗಾರ
'ವಿರಾಟ್ ಕೊಹ್ಲಿ ಜಗತ್ತು ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರು, ಅಂತಹ ಪ್ರತಿಭಾನ್ವಿತ ಆಟಗಾರನ ಜತೆ ನನ್ನನ್ನು ಹೋಲಿಕೆ ಮಾಡಿದಾಗ ನನಗೆ ತುಂಬಾ ಖುಷಿಯಾಗುತ್ತದೆ. ನನ್ನ ಮತ್ತು ಕೊಹ್ಲಿಯ ನಡುವೆ ಹೋಲಿಕೆ ಮಾಡಿದಾಗ ಭಯ ಆಗುವುದಿಲ್ಲ ಬದಲಾಗಿ ಹೆಮ್ಮೆ ಎನಿಸುತ್ತದೆ' ಎಂದು ಬಾಬರ್ ಅಜಮ್ ಹೇಳಿದ್ದಾರೆ.

ವೈಯಕ್ತಿಕವಾಗಿ ಹೋಲಿಕೆಗಳೇ ಇರಬಾರದು
ಇನ್ನೂ ಮುಂದುವರೆದು ಮಾತನಾಡಿರುವ ಬಾಬರ್ ಅಜಾಮ್ ತನಗೆ ಹೋಲಿಕೆಗಳು ಇಷ್ಟವಿಲ್ಲ ಎಂಬುದನ್ನು ಹೇಳಿಕೊಂಡಿದ್ದಾರೆ. 'ನಾನು ನನ್ನದೇ ಶೈಲಿಯಲ್ಲಿ ಆಟವನ್ನು ಆಡುತ್ತೇನೆ, ಕೊಹ್ಲಿ ಆತನದ್ದೇ ಶೈಲಿಯಲ್ಲಿ ಆಟವನ್ನು ಆಡುತ್ತಾರೆ. ಇಬ್ಬರ ಬ್ಯಾಟಿಂಗ್ ಶೈಲಿಯು ತುಂಬ ವಿಭಿನ್ನವಾಗಿದ್ದು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ನಾನು ಉತ್ತಮ ಪ್ರದರ್ಶನವನ್ನು ನೀಡಲು ಪ್ರಯತ್ನಿಸುತ್ತೇನೆ' ಎಂದು ಬಾಬರ್ ಅಜಮ್ ತಿಳಿಸಿದ್ದಾರೆ.

ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಕೊಹ್ಲಿ - ಬಾಬರ್ ಅಜಮ್ ಪಾರುಪತ್ಯ
ಎಲ್ಲಾ ಮಾದರಿಗಳ ಶ್ರೇಯಾಂಕ ಪಟ್ಟಿಗಳಲ್ಲಿ ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಮ್ ಟಾಪ್ 10ರಲ್ಲಿ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಈ ಇಬ್ಬರನ್ನು ಹೊರತುಪಡಿಸಿ ಬೇರೆ ಯಾವ ಆಟಗಾರನೂ ಸಹ ಎಲ್ಲಾ ಮಾದರಿಯ ಕ್ರಿಕೆಟ್‍ನಲ್ಲಿ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿಲ್ಲ. ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಈ ಇಬ್ಬರೂ ಆಟಗಾರರು ಸಹ ದೊಡ್ಡ ಮಟ್ಟದಲ್ಲಿ ಮಿಂಚುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications