Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನನಗೇ ಗೊತ್ತಿಲ್ಲದೆ ನನಗೆ ಕೊರೊನಾ ತಗುಲಿತ್ತು: ಮಾರ್ಕ್ ಬೌಚರ್

I had virus without knowing it: South Africa coach Mark Boucher

ಕೇಪ್‌ಟೌನ್: ನನಗೇ ಗೊತ್ತಿಲ್ಲದಂತೆ ನಾನು ಕೊರೊನಾವೈರಸ್‌ಗೆ ತುತ್ತಾಗಿದ್ದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಕೋಚ್ ಮಾರ್ಕ್ ಬೌಚರ್ ಗುರುವಾರ (ನವೆಂಬರ್ 19) ಹೇಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ನಿಯಮಿತ ಓವರ್‌ಗಳ ಸರಣಿಗೂ ಮುನ್ನ ಮಾತನಾಡಿದ ಬೌಚರ್ ಇದನ್ನು ಹೇಳಿಕೊಂಡಿದ್ದಾರೆ.

ನವೆಂಬರ್ 27ರಿಂದ ಇಂಗ್ಲೆಂಡ್-ದಕ್ಷಿಣ ಆಫ್ರಿಕಾ ಪ್ರವಾಸ ಸರಣಿ ಆರಂಭವಾಗಲಿದೆ. ಕೇಪ್‌ಟೌನ್‌ನಲ್ಲಿ ಟಿ20ಐ ಪಂದ್ಯದ ಮೂಲಕ ಸರಣಿ ಶುರುವಾಗಲಿದೆ. ಇತ್ತಂಡಗಳ ಸರಣಿ ಆರಂಭದ ಹೊತ್ತಿನಲ್ಲಿ ದಕ್ಷಿಣ ಆಫ್ರಿಕಾದ ಒಬ್ಬ ಆಟಗಾರರಿಗೆ ಕೊರೊನಾ ಸೋಂಕು ತಗುಲಿತ್ತು. ಸರಣಿ ಸಂಬಂಧ ದಕ್ಷಿಣ ಆಫ್ರಿಕಾ ಆಟಗಾರರು ಒಂದೆಡೆ ಸೇರಿಕೊಂಡಾಗ ಸೋಂಕು ತಗುಲಿದ್ದು ಪತ್ತೆಯಾಗಿತ್ತು.

ಮಾರ್ಕ್ ಬೌಚರ್ ಮತ್ತು ಬೌಚರ್ ಸಂಪರ್ಕಕ್ಕೆ ಬಂದಿದ್ದ ಇನ್ನಿಬ್ಬರು ಆಟಗಾರರನ್ನು ತಂಡದಿಂದ ಸದ್ಯ ದೂರ ಇಡಲಾಗಿದೆ. ಮೂವರೂ ಈಗ ಐಸೊಲೇಶನ್‌ನಲ್ಲಿದ್ದು, ತಂಡದ ವೈದ್ಯಕೀಯ ಸಿಬ್ಬಂದಿ ಮೂವರ ಮೇಲೆ ನಿಗಾ ಇಟ್ಟಿದ್ದಾರೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಹೇಳಿದೆ. ಮೂವರಿಗೂ ರೋಗದ ಲಕ್ಷಣಗಳಿರಲಿಲ್ಲ ಎಂದು ಕ್ರಿಕೆಟ್ ಬೋರ್ಡ್ ತಿಳಿಸಿದೆ.

'ಆರು-ಏಳು ದಿನಗಳ ಕಾಲ ಒಬ್ಬಂಟಿಯಾಗಿ ರೂಮಲ್ಲಿ ಕಳೆಯೋದು ಕಠಿಣ ಕೆಲಸ,' ಎಂದು ಬೌಚರ್ ಹೇಳಿದ್ದಾರೆ. ತನಗೆ ರೋಗದ ತೀವ್ರತೆ ಕಡಿಮೆಯಿದ್ದಿದ್ದು ಅದೃಷ್ಟ ಎಂದು ಬೌಚರ್ ಹೇಳಿಕೊಂಡಿದ್ದಾರೆ. ಇಂಗ್ಲೆಂಡ್-ದಕ್ಷಿಣ ಆಫ್ರಿಕಾ ಸರಣಿ 3 ಏಕದಿನ, 3 ಟಿ20ಐ ಪಂದ್ಯಗಳನ್ನು ಒಳಗೊಂಡಿರಲಿದೆ.

Story first published: Friday, November 20, 2020, 9:36 [IST]
Other articles published on Nov 20, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+