ಮುಂದಿನ ವರ್ಷ ಕೆಎಲ್ ರಾಹುಲ್ ಆರ್‌ಸಿಬಿಗೆ ಬರಬೇಕು: ಡೇಲ್ ಸ್ಟೇನ್

ಕೇಪ್‌ಟೌನ್: ಪಂಜಾಬ್ ಕಿಂಗ್ಸ್ ನಾಯಕ ಕೆಎಲ್ ರಾಹುಲ್ ಅವರು ಮುಂದಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದಲ್ಲಿ ಆಡಬೇಕು ಎಂದು ದಕ್ಷಿಣ ಆಫ್ರಿಕಾದ ಮಾಜಿ ಮಾರಕ ವೇಗಿ ಡೇಲ್ ಸ್ಟೇನ್ ಹೇಳಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಐಪಿಎಲ್ ಮೆಗಾ ಆಕ್ಷನ್ ಉದ್ದೇಶಿಸಿ ಸ್ಟೇನ್ ಈ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಮ್ಮ ಕರ್ನಾಟಕದ ಫ್ರಾಂಚೈಸಿ ಆದರೂ ಕೂಡ ಈ ತಂಡದಲ್ಲಿ ಹೆಚ್ಚಿನ ಸಂಖ್ಯೆಯ ಕನ್ನಡದ ಆಟಗಾರರಿಲ್ಲ. ಪಂಜಾಬ್ ಕಿಂಗ್ಸ್ ತಂಡದಲ್ಲಿ ಹೆಚ್ಚಿನ ಸಂಖ್ಯೆಯ ಕನ್ನಡಿಗರಿದ್ದಾರೆ. ಪಂಜಾಬ್ ತಂಡದ ಕೋಚ್ ಅನಿಲ್ ಕುಂಬ್ಳೆ ಕೂಡ ಕನ್ನಡಿಗ. ಅಲ್ಲದೆ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಕೂಡ ಕನ್ನಡದವರೆ.
ಇಎಸ್‌ಪಿಎನ್ ಕ್ರಿಕ್ ಇನ್ಫೋ ಜೊತೆ ಮಾತನಾಡಿದ ಡೇಲ್ ಸ್ಟೇನ್, "ಮುಂದಿನ ವರ್ಷ ಐಪಿಎಲ್ ಹರಾಜು ನಡೆಯುವಾಗ ಕೆಎಲ್ ರಾಹುಲ್ ಅವರನ್ನು ಆರ್‌ಸಿಬಿ ಮತ್ತೆ ತಂಡಕ್ಕೆ ತಂದುಕೊಳ್ಳಬೇಕು ಎಂದು ನನಗನ್ನಿಸುತ್ತಿದೆ," ಎಂದು ಹೇಳಿದ್ದಾರೆ. ಅಸಲಿಗೆ ಆರಂಭದಲ್ಲಿ ಆರ್‌ಸಿಬಿ ತಂಡದಲ್ಲೇ ರಾಹುಲ್ ಇದ್ದು ಆ ಬಳಿಕ ಪಂಜಾಬ್ ಕಿಂಗ್ಸ್ ಪಾಲಾಗಿದ್ದರು.
ಆರ್‌ಸಿಬಿ ತಂಡದಲ್ಲಿದ್ದಾಗ ರಾಹುಲ್ ಅಂಥ ಪ್ರದರ್ಶನ ಕೂಡ ನೀಡುತ್ತಿರಲಿಲ್ಲ. ಆದರೆ ಪಂಜಾಬ್‌ಗೆ ಸೇರಿದ ಬಳಿಕ ರಾಹುಲ್‌ಗೆ ತಂಡದ ನಾಯಕ ನಾಯಕತ್ವ ಲಭಿಸಿತ್ತಲ್ಲದೆ, ಅವರ ಬ್ಯಾಟಿಂಗ್ ಕೂಡ ಸುಧಾರಿಸಿತ್ತು. ಆದರೆ 2022ರಲ್ಲಿ ನಡೆಯುವ ಮಹಾನ್ ಹರಾಜಿನಲ್ಲಿ ರಾಹುಲ್ ಅವರನ್ನು ಮತ್ತೆ ಆರ್‌ಸಿಬಿಗೆ ತಂದರೆ ಆರ್‌ಸಿಬಿ ತಂಡ ಹೆಚ್ಚು ಬಲಗೊಳ್ಳುತ್ತದೆ ಎಂದು ಸ್ಟೇನ್ ಈ ಹೇಳಿಕೆ ನೀಡಿದ್ದಾರೆ. ಅಂದ್ಹಾಗೆ ಸ್ಟೇನ್ ಕೂಡ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಮುನ್ನ ಆರ್‌ಸಿಬಿ ತಂಡದ ಪರವೇ ಆಡುತ್ತಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications