ನಾನು ಬಹುತೇಕ ಎಲ್ಲವನ್ನೂ ದ್ರಾವಿಡ್ ಅವರಿಂದ ಕಲಿತಿದ್ದೇನೆ: ಸ್ಯಾಮ್ಸನ್

ಬೆಂಗಳೂರು, ಜೂನ್ 22: ಈಗ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರಾಗಿರುವ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಡಿಯಲ್ಲಿ ಬೆಳೆದಿರುವ ಅನೇಕ ಯುವ ಕ್ರಿಕೆಟಿಗರಲ್ಲಿ ಸಂಜು ಸ್ಯಾಮ್ಸನ್ ಕೂಡ ಒಬ್ಬರು. 13ನೇ ಐಪಿಎಲ್ ಆವೃತ್ತಿಗಾಗಿ ರಾಜಸ್ಥಾನ್ ರಾಯಲ್ಸ್‌ಗೆ ಆಯ್ಕೆಯಾಗಿದ್ದ 18ನೇ ಹರೆಯದ ಸಂಜು ಸ್ಯಾಮ್ಸನ್ ದ್ರಾವಿಡ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು.
ರಾಜಸ್ಥಾನ್ ರಾಯಲ್ಸ್ ಮತ್ತು ಲಿಸ್ಟ್ 'ಎ' ತಂಡದಲ್ಲಿದ್ದ ಸಂಜು ಸ್ಯಾಮ್ಸನ್, ಕ್ರಿಕೆಟ್‌ನ ಮೂಲ ವಿಚಾರಗಳ ಬಗ್ಗೆ ಮತ್ತು ಸೋಲು-ಗೆಲುವಿನ ಸಂದರ್ಭಗಳನ್ನು ನಿಭಾಯಿಸುವ ಬಗ್ಗೆ ಬಹುತೇಕ ಎಲ್ಲವನ್ನೂ ಕಲಿತಿದ್ದು ದ್ರಾವಿಡ್ ಅವರಿಂದಲೇ. ಈಗ 22ರ ಹರೆಯವರಾಗಿರುವ ಸ್ಯಾಮ್ಸನ್ ಅಂದು ದ್ರಾವಿಡ್ ಅವರಿಂದ ಕಲಿತಿದ್ದನ್ನೇ ಇಂದು ಕ್ರಿಕೆಟ್ ಬದುಕಿನಲ್ಲಿ ಅನ್ವಯಿಸುತ್ತಿದ್ದಾರೆ. ಹೀಗೆಂದು ಅವರೇ ಹೇಳಿಕೊಂಡಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಸ್ಯಾಮ್ಸನ್, '18ನೇ ವಯಸ್ಸಿನಲ್ಲಿ ರಾಹುಲ್ ಸರ್ ಅವರೊಂದಿಗೆ ಸಂವಹನ ನಡೆಸುವುದು ನನ್ನ ಪಾಲಿಗೆ ನಿಜವಾಗಿಯೂ ಆಶೀರ್ವಾದವಾಗಿತ್ತು. ದ್ರಾವಿಡ್ ಸರ್ ಅವರಂಥವರನ್ನು ಬದುಕಿನಲ್ಲಿ ಪಡೆಯುವುದಕ್ಕಾಗಿ ನಾನು ದೇವರ ಆಶೀರ್ವಾದ ಪಡೆದಿದ್ದೆ,' ಎಂದಿದ್ದಾರೆ.
'ಕ್ರಿಕೆಟ್‌ನ ಚಿನ್ನದ ಯುಗವನ್ನು ದಾಟಿ ಬಂದಿರುವ ದ್ರಾವಿಡ್ ಸರ್ ಒಬ್ಬ ಕ್ರಿಕೆಟರ್ ಮತ್ತು ಉತ್ತಮ ಕೋಚ್. ಹೀಗಾಗಿ ಅವರಿಗೆ ಒಬ್ಬ ಕ್ರಿಕೆಟರ್ ಜೊತೆ ಹೇಗೆ ಸಂವಹನ ನಡೆಸಬೇಕು, ಅವರಿಗೆ ಹೇಗೆ ವಿಚಾರವನ್ನು ಅರ್ಥ ಮಾಡಿಸಬೇಕು ಅನ್ನೋದು ಗೊತ್ತಿದೆ. ನಮ್ಮ ಮನಸ್ಥಿತಿ ಹೇಗಿದೆ? ನಾವು ಟೂರ್ನಿಗೆ ಸಿದ್ಧವಾಗೋದು ಹೇಗೆ? ನಾವು ನಮ್ಮ ಬದುಕಿನಲ್ಲಿ ಸೋಲು-ಗೆಲುವನ್ನು ಎದುರಿಸೋದು ಹೇಗೆ? ಎಂಬಿತ್ಯಾದಿಗಳನ್ನು ಅವರು ಕಲಿಸಿದ್ದಾರೆ,' ಎಂದು ಸ್ಯಾಮ್ಸನ್ ಹೇಳಿದ್ದಾರೆ.
'18ರಿಂದ 20ರ ಹರೆಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದು ಆ ಬಳಿಕ ಲಿಸ್ಟ್ ಎ ತಂಡದಲ್ಲಿದ್ದ ನಾನು ಬಹುತೇಕ ಎಲ್ಲವನ್ನೂ ರಾಹುಲ್ ದ್ರಾವಿಡ್ ಅವರಿಂದ ಕಲಿತಿದ್ದೇನೆ. ನಾನೊಬ್ಬನೇ ಅನ್ನುತಿಲ್ಲ, ದ್ರಾವಿಡ್ ಸರ್ ಅವರ ಅಡಿಯಲ್ಲಿ ಬೆಳೆದಿರುವ ಎಲ್ಲಾ ಯುವ ಆಟಗಾರರು ರಾಹುಲ್ ಅವರಿಂದ ಕ್ರಿಕೆಟ್‌ನ ಬಹಳಷ್ಟು ವಿಚಾರಗಳನ್ನು ಕಲಿತಿದ್ದಾರೆ,' ಎಂದು ಸಂಜು ವಿವರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications