ವಿರಾಟ್ ಕೊಹ್ಲಿಯಂತ ಆಟಗಾರನನ್ನು ನಾನು ನೋಡಿಲ್ಲ: ಆಸೀಸ್ ಕೋಚ್


ನವದೆಹಲಿ, ಮಾರ್ಚ್ 14: ನವದೆಹಲಿಯಲ್ಲಿ ಬುಧವಾರ (ಮಾರ್ಚ್ 13) ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ಟೀಮ್ ಇಂಡಿಯಾ ಸೋತಿದೆ. ಆದರೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಈಗಲೂ ಹೊಗಳಲ್ಪಡುತ್ತಿದ್ದಾರೆ. ಆಸ್ಟ್ರೇಲಿಯಾ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಅವರು ಕೊಹ್ಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಕೂಡ ಆಗಿರುವ ಲ್ಯಾಂಗರ್, 'ನಾನು ಕೊಹ್ಲಿಯಂತ ಆಟಗಾರನನ್ನು ಯಾವತ್ತಿಗೂ ನೋಡಿಲ್ಲ. ಸ್ಫೂರ್ತಿಯ ಹೋರಾಟದ ಮೂಲಕ ಅವರ ಪಾತ್ರವನ್ನು ತೋರಿಸಿಕೊಟ್ಟಿದ್ದಾರೆ. ಆಸ್ಟ್ರೇಲಿಯಾದಲ್ಲಿ ಭಾರತ ಪಾರಮ್ಯ ಮೆರೆದಿತ್ತು. ನಾವು ಇಲ್ಲಿ ಮೇಲುಗೈ ಸಾಧಿಸಿದ್ದೇವೆ' ಎಂದರು.
'ಏಕದಿನ ಸರಣಿ ಮತ್ತು ಟಿ20ಯಲ್ಲಿ ಭಾರತವನ್ನು ಕ್ಲೀನ್ ಸ್ವೀಪ್‌ಗೊಳಿಸಿದ ಆಸ್ಟ್ರೇಲಿಯಾ ತಂಡದ ಬಗ್ಗೆ ಅತೀ ಹೆಮ್ಮೆ ಎನಿಸುತ್ತಿದೆ. ವಿಶ್ವಕಪ್‌ಗೆ ತಂಡ ಆರಿಸೋದೇ ಈಗ ಸವಾಲಾಗಿದೆ. ಆಸ್ಟ್ರೇಲಿಯಾಕ್ಕೆ ಭಾರತ ಪ್ರವಾಸ ಕೈಗೊಂಡಾಗಿನಿಂದಲೂ ಆಸ್ಟ್ರೇಲಿಯಾ ತಂಡ ನಂಬಲಾಗದ ಬದಲಾವಣೆ ಕಾಣುತ್ತಿದೆ' ಎಂದು ಲ್ಯಾಂಗರ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಲ್ಯಾಂಗರ್ ಹೇಳಿದಂತೆ ಆಸೀಸ್ ತಂಡದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುತ್ತಿವೆ. ಯಾರನ್ನು ಆರಿಸೋದು ಎಂಬ ರೀತಿಯಲ್ಲಿ ಆಟಗಾರರು ಪ್ರದರ್ಶನ ನೀಡುತ್ತಿದ್ದಾರೆ. ಇನ್ನು ವಿಶ್ವಕಪ್ ವೇಳೆ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ತಂಡ ಸೇರಿಕೊಂಡರೆ ಇನ್ನು ಕೇಳಬೇಕೆ ಎಂಬಂತಾಗಿದೆ (ಮೇಲಿನ ಚಿತ್ರದಲ್ಲಿ ಲ್ಯಾಂಗರ್)
ದುರದೃಷ್ಟಕರ ಸಂಗತಿಯೆಂದರೆ ಭಾರತ ತಂಡದ ಕತೆ ಆಸೀಸ್‌ಗೆ ವಿರುದ್ಧವಾಗಿದೆ. ಇಲ್ಲಿ ಯಾರನ್ನು ನಂಬಿ ವಿಶ್ವಕಪ್‌ಗೆ ತಂಡ ಆರಿಸೋದು ಎಂಬಂತ ಪ್ರದರ್ಶನವನ್ನು ಆಟಗಾರರು ನೀಡಲಾರಂಭಿಸಿದ್ದಾರೆ. ವಿಶ್ವಕಪ್ ಸಮೀಪಿಸುತ್ತಿರುವ ಈ ದಿನಗಳಲ್ಲಿ ಮನಸ್ಸಿನಲ್ಲಿ ಒಂದು ತಂಡ ನಿಲ್ಲುವಂತಿರಬೇಕಿತ್ತು. ಆದರೆ ಟೀಮ್ ಇಂಡಿಯಾದ ಪರಿಸ್ಥಿತಿ ಸದ್ಯಕ್ಕೆ ಚೆನ್ನಾಗಿಲ್ಲ ಅನ್ನೋದು ಖರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications