ಹಿಟ್‌ಮ್ಯಾನ್ ಬಿರುದು ಮೆಚ್ಚಿಕೊಂಡ ರೋಹಿತ್ ಶರ್ಮಾ
ಬೆಂಗಳೂರು, ಜುಲೈ 10: ಟಿ20ಯಲ್ಲಿ ಮೂರು ಶತಕ, ಏಕದಿನ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕ ಸಾಧನೆ ಮಾಡಿರುವ ರೋಹಿತ್ ಶರ್ಮಾ ತಮ್ಮ ಹೆಸರಿನ ಜತೆ ತಳಕು ಹಾಕಿಕೊಂಡಿರುವ 'ಹಿಟ್‌ಮ್ಯಾನ್' ಬಿರುದನ್ನು ಮೆಚ್ಚಿಕೊಂಡಿದ್ದಾರೆ.
ಅಲ್ಲದೆ, ತಾವು ಒಂದು ರೀತಿ ಹಿಟ್‌ಮ್ಯಾನ್‌ನಂತೆಯೇ ಎಂದು ಅವರು ಹೇಳಿಕೊಂಡಿದ್ದಾರೆ. ಆದರೆ, ಅದರ ಬಗ್ಗೆ ಹೆಚ್ಚು ವಿವರಣೆ ಕೊಟ್ಟಿಲ್ಲ.
ರೋಹಿತ್‌ಗೆ ಹಿಟ್‌ಮ್ಯಾನ್ ಪಟ್ಟದ ಜತೆಗೆ 'ನೋ-ಹಿಟ್' ಶರ್ಮಾ ಎಂಬ ಟೀಕಾತ್ಮಕ ಬಿರುದೂ ಇದೆ. ಸತತ ವೈಫಲ್ಯ ಅನುಭವಿಸಿದಾಗ 'ನೋ ಹಿಟ್' ಶರ್ಮಾ ಎಂಬ ಟೀಕೆ ಚಾಲ್ತಿಗೆ ಬರುತ್ತದೆ. ಸರಣಿಯಲ್ಲಿ ಒಮ್ಮೆ ಹೀಗೆ ಮಿಂಚಿದಾಗ 'ಹಿಟ್‌ಮ್ಯಾನ್' ಎಂಬ ಶ್ಲಾಘನೆ ಮುಂಚೂಣಿಗೆ ಬರುತ್ತದೆ.
ಟಿ20ಯ ಮಹತ್ವದ ಪಂದ್ಯದಲ್ಲಿ ಶತಕ ಸಾಧನೆ ಮಾಡಿದ ರೋಹಿತ್ ಶರ್ಮಾ, ಅವರು ಸಹ ಆಟಗಾರ ದಿನೇಶ್ ಕಾರ್ತಿಕ್ ಜತೆ ಬಿಸಿಸಿಐ ಟಿವಿಗಾಗಿ ಮಾತನಾಡಿದ್ದಾರೆ.

ನನಗೆ ಆಡುವಾಗ ತಂಡಕ್ಕೆ ಗೆಲುವು ತಂದುಕೊಡುವುದಷ್ಟೇ ಮನಸ್ಸಿನಲ್ಲಿತ್ತು. ನಾವು ತಂಡವಾಗಿ ಆಡಿದರೆ ಮಾತ್ರ ಈ ಗೆಲುವನ್ನು ಪಡೆದುಕೊಳ್ಳುವುದು ಸಾಧ್ಯ ಎಂಬುದರ ಕುರಿತಷ್ಟೇ ನಾನು ಯೋಚಿಸುತ್ತಿದ್ದೆ.
ಆಟದ ಜತೆಗೆ ವೈಯಕ್ತಿಕ ಸಾಧನೆಯ ಮೈಲುಗಳು ನಿರ್ಮಾಣವಾಗುತ್ತವೆ. ಆದರೆ ನಾನು ಎಂದಿಗೂ ಅವುಗಳ ಕುರಿತು ಯೋಚನೆ ಮಾಡುವುದಿಲ್ಲ.
ನನಗೆ ಒಳ್ಳೆಯ ಆರಂಭ ಸಿಕ್ಕರೆ ಅದನ್ನು ಪಂದ್ಯವನ್ನು ಗೆಲ್ಲುವವರೆಗೆ ಹೇಗೆ ಕೊಂಡೊಯ್ಯುವುದು ಎಂಬುದರ ಬಗ್ಗೆ ಮಾತ್ರ ಆಲೋಚಿಸುತ್ತೇನೆ.
ಮೊನ್ನೆ ಆಡುವಾಗಲೂ ನನ್ನ ತಲೆಯಲ್ಲಿ ಅದು ಮಾತ್ರ ಇತ್ತು. ಏಕೆಂದರೆ ಅದು ನಮಗೆ ಅತಿ ಮಹತ್ವದ ಪಂದ್ಯವಾಗಿತ್ತು ಎಂದು ಕಾಲಿನ್ ಮುನ್ರೊ ಅವರೊಂದಿಗೆ ಮೂರು ಶತಕದ ಸಾಧನೆಯನ್ನು ಹಂಚಿಕೊಂಡ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ನಿಮ್ಮ ಟಿ20 ಶತಕಗಳಲ್ಲಿ ಯಾವುದು ಹೆಚ್ಚು ವಿಶೇಷ ಎನಿಸಿದೆ ಎಂಬ ಪ್ರಶ್ನೆಗೆ, ಇದಕ್ಕೆ ಉತ್ತರಿಸುವುದು ಕಷ್ಟ ಎಂದಿದ್ದಾರೆ ರೋಹಿತ್.
ಏಕೆಂದರೆ ಈ ಎಲ್ಲ ಶತಕಗಳು ಎಷ್ಟು ಮಹತ್ವದ್ದಾಗಿದ್ದವು ನಿಮಗೂ ತಿಳಿದಿದೆ. ನಾನು ಹೊಡೆದಿರುವುದು ಮೂರು ಶತಕಗಳನ್ನಷ್ಟೇ. ಆಡಿದಾಗಲೆಲ್ಲಾ ಸಾಕಷ್ಟು ಶತಕ ಬಾರಿಸಿದ್ದೇನೆ ಎಂದಲ್ಲ.
ಈ ಹಿಂದೆ ಜನರು ಏಕದಿನದಲ್ಲಿ ಗಳಿಸಿದ ಮೂರು ದ್ವಿಶತಕಗಳ ಬಗ್ಗೆ ಕೇಳುತ್ತಿದ್ದರು. ನಾನು ಯಾವುದನ್ನೂ ಆಯ್ದುಕೊಳ್ಳುವುದಿಲ್ಲ. ಏಕೆಂದರೆ, ಪ್ರತಿ ಶತಕವೂ ವಿಭಿನ್ನ ಸಂದರ್ಭಗಳಲ್ಲಿ ಬಂದಿರುತ್ತದೆ.
ಗಳಿಸಿದ ಶತಕಗಳನ್ನು ಒಂದನ್ನು ಆಯ್ಕೆ ಮಾಡಿಕೊಳ್ಳುವುದು ಆಟಗಾರನಿಗೆ ಬಲು ಕಷ್ಟ. ಪ್ರತಿ ಶತಕವೂ ಮಹತ್ವದ್ದಾಗಿರುತ್ತದೆ ಎಂದಿದ್ದಾರೆ ರೋಹಿತ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications