ಎಣಿಕೆಗಿಂತ ನಾಲ್ಕು ವರ್ಷ ಮೊದಲೇ ವಿಶ್ವಕಪ್‌ನಲ್ಲಿ ಆಡುತ್ತಿದ್ದೇನೆ: ಆರ್ಚರ್

ಲಂಡನ್, ಮೇ 30: ಈ ಸಾರಿಯ ಇಂಗ್ಲೆಂಡ್ ವಿಶ್ವಕಪ್ ತಂಡದಲ್ಲಿ ಜೋಫ್ರಾ ಆರ್ಚರ್ ಹೊಸ ಮುಖ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರಿಂದ ಆರ್ಚರ್ ಅವರನ್ನು ಇಂಗ್ಲೆಂಡ್, ವಿಶ್ವಕಪ್ ತಂಡದಲ್ಲಿ ಹೆಸರಿಸಿತ್ತು. ಈ ಬಗ್ಗೆ ಸ್ವತಃ ಆರ್ಚರ್ ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಜೋಫ್ರಾ ಆರ್ಚರ್, ವೇಗದ ಬೌಲಿಂಗ್‌ಗಾಗಿ ಗಮನ ಸೆಳೆದಿದ್ದರು. ಹೀಗಾಗಿ ಇಂಗ್ಲೆಂಡ್ ರಾಷ್ಟ್ರೀಯ ತಂಡದಲ್ಲಿ ಆರ್ಚರ್‌ಗೆ ಸ್ಥಾನ ಲಭಿಸಿತ್ತಲ್ಲದೆ, ಅದಾಗಿ ಕೆಲವೇ ದಿನಗಳಲ್ಲಿ ವಿಶ್ವಕಪ್ ತಂಡದಲ್ಲೂ ಆರ್ಚರ್ ಕಾಣಿಸಿಕೊಂಡಿದ್ದರು.
ಟೈಮ್ಸ್ ಆಫ್ ಇಂಡಿಯಾದ ಸಂದರ್ಶನದಲ್ಲಿ ಮಾತನಾಡುತ್ತ ಆರ್ಚರ್, 'ವಿಶ್ವಕಪ್ ಬಗ್ಗೆ ನಾನು ಮಾನಸಿಕವಾಗಿ ಯಾವುದೇ ರೀತಿಯ ಒತ್ತಡಕ್ಕೊಳಗಾಗಿಲ್ಲ. ಆದರೆ ಅಂದುಕೊಂಡಿದ್ದಕ್ಕಿಂತ ನಾಲ್ಕು ವರ್ಷ ಮುಂಚಿತವಾಗೇ ವಿಶ್ವಕಪ್ ನಲ್ಲಿ ಆಡುತ್ತಿದ್ದೇನೆ ಎಂದು ನನಗನ್ನಿಸುತ್ತಿದೆ' ಎಂದರು.
'ಒಬ್ಬ ಕ್ರಿಕೆಟರ್ ಆಗಿ ನನ್ನ ಬೆಳವಣಿಗೆಗೆ ಐಪಿಎಲ್ ಬಹಳ ನೆರವಾಯಿತು. ಅಲ್ಲಿ ನೀವು ವಿಶ್ವದ ಶ್ರೇಷ್ಠ ಕ್ರಿಕೆಟರ್ ಜೊತೆ ಆಡುತ್ತೀರಿ. ಹೀಗಾಗಿ ವಿಶ್ವಕಪ್ ಒತ್ತಡ ನಿಭಾಯಿಸುವ ನಿಟ್ಟಿನಲ್ಲಿ ಐಪಿಎಲ್ ತುಂಬಾ ಸಹಾಯಕವಾಗಿದೆ ಎಂದು ನನ್ನನಿಸಿಕೆ' ಎಂದು ಆರ್ಚರ್ ಹೇಳಿದ್ದಾರೆ.
ಇಂಗ್ಲೆಂಡ್ ನಲ್ಲಿ ಮೇ 30ರಂದು ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲೂ ಜೋಫ್ರಾ ಆರ್ಚರ್ ಇಂಗ್ಲೆಂಡ್ ಆಡುವ 11 ಆಟಗಾರರಲ್ಲಿ ಕಾಣಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications