Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ನಾನು ಮತ್ತೆ ಕಣಕ್ಕಿಳಿಯಲಿದ್ದೇನೆ, ಆದರೆ ಐಪಿಎಲ್ ಆಡೋದು ಕಷ್ಟ'

I Might be back in action but playing IPL will be difficult: Ben Stokes

ಲಂಡನ್: ಇಂಗ್ಲೆಂಡ್ ಕ್ರಿಕೆಟ್ ತಂಡದ ಪ್ರಮುಖ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಮತ್ತೆ ಕ್ರಿಕೆಟ್ ಮೈದಾನಕ್ಕಿಳಿಯಲಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 2021ರ ಆವೃತ್ತಿಯ ವೇಳೆ ಗಾಯಗೊಂಡಿದ್ದ ಸ್ಟೋಕ್ಸ್ ಚೇತರಿಸಿಕೊಂಡಿರುವುದಾಗಿ ಸ್ವತಃ ಸುಳಿವು ನೀಡಿದ್ದಾರೆ.

ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುವ ಬೆನ್ ಸ್ಟೋಕ್ಸ್, ಪಂಜಾಬ್ ಕಿಂಗ್ಸ್‌ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಕೈ ಬೆರಳು ಮುರಿದುಕೊಂಡಿದ್ದರು. ಅನಂತರ ಸ್ಟೋಕ್ಸ್ ಟೂರ್ನಿಯಿಂದಲೇ ಹೊರ ಬಿದ್ದಿದ್ದರು. ಅತ್ತ ಐಪಿಎಲ್ ಕೂಡ ಕೊರೊನಾದಿಂದಾಗಿ ಅರ್ಧದಲ್ಲೇ ನಿಲುಗಡೆಯಾಯ್ತು.

ಐಪಿಎಲ್ ಬಯೋಬಬಲ್ ಒಳಗೇನೇ ಸೋಂಕಿನ ಪ್ರಕರಣಗಳು ಕಾಣಿಸಿಕೊಂಡಿದ್ದರಿಂದ 14ನೇ ಆವೃತ್ತಿಯ ಐಪಿಎಲ್ ಅನ್ನು ಅರ್ಧಕ್ಕೆ ನಿಲ್ಲಿಸುವ ನಿರ್ಧಾರಕ್ಕೆ ಬಿಸಿಸಿಐ ಬಂದಿತ್ತು. ಮತ್ತೆ ಐಪಿಎಲ್ ನಡೆಯುವ ಸಾಧ್ಯತೆ ಇದೆಯಾದರೂ ಬಹಳಷ್ಟು ವಿದೇಶಿ ಆಟಗಾರರು ಪಾಲ್ಗೊಳ್ಳುವ ನಿರೀಕ್ಷೆಯಿಲ್ಲ. ಅವರಲ್ಲಿ ಸ್ಟೋಕ್ಸ್ ಕೂಡ ಒಬ್ಬರಾಗಿದ್ದಾರೆ.

ಡೈಲಿ ಮಿರರ್‌ನಲ್ಲಿ ಕಾಲಂ ಬರೆದಿರುವ ಸ್ಟೋಕ್ಸ್ ಅಲ್ಲಿ, 'ಮತ್ತೆ ಐಪಿಎಲ್ ಮರು ಆಯೋಜನೆಗೊಳ್ಳುತ್ತದೋ, ಯಾವಾಗ ನಡೆಯುತ್ತದೋ ನಮಗೆ ಗೊತ್ತಿಲ್ಲ. ಆದರೆ ಈಗಾಗಲೇ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಹೇಳಿರುವಂತೆ ಇಂಗ್ಲೆಂಡ್ ಆಟಗಾರರಿಗೆ ಮಧ್ಯದಲ್ಲಿ ಬಿಡುವು ಮಾಡಿಕೊಂಡು ಐಪಿಎಲ್‌ನಲ್ಲಿ ಪಾಲ್ಗೊಳ್ಳೋದು ಕಷ್ಟವಾಗಲಿದೆ,' ಎಂದು ಬರೆದುಕೊಂಡಿರುವುದಾಗಿ ತಿಳಿದು ಬಂದಿದೆ.

Story first published: Wednesday, May 12, 2021, 21:03 [IST]
Other articles published on May 12, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+