ಟೀಮ್ ಇಂಡಿಯಾ ಆಟಗಾರ ಕೆ ಎಲ್ ರಾಹುಲ್ "ಐ ಮಿಸ್ ಯೂ" ಎಂದಿದ್ದು ಯಾರಿಗೆ ?

ಟೀಮ್ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯ. ನಿತ್ಯವೂ ಒಂದಲ್ಲ ಒಂದು ಪೋಸ್ಟ್‌ಗಳನ್ನು ಹಾಕಿ ಅಭಿಮಾನಿಗಳೊಂದಿಗೆ ಕೆಎಲ್ ರಾಹುಲ್ ಸಂಪರ್ಕದಲ್ಲಿರುತ್ತಾರೆ. ಕೆಎಲ್ ರಾಹುಲ್ ಪೋಸ್ಟ್‌ಗಳಿಗೆ ಅಭಿಮಾನಿಗಳು ಸಾಕಷ್ಟು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಾರೆ.
ಆದರೆ ಕೆಎಲ್ ರಾಹುಲ್ ಇಂದು ಹಾಕಿದ ಪೋಸ್ಟ್ ಎಲ್ಲಾ ಭಾರತೀಯ ಕ್ರಿಕೆಟ್ ಪ್ರೇಮಿಗಳ ಸದ್ಯದ ಭಾವನೆಯಂತಿದೆ. ಅದೇ ಕಾರಣಕ್ಕೆ ಹಾಕಿದ ಕೆಲವೇ ಗಂಟೆಗಳಲ್ಲಿ ಲಕ್ಷ ಲಕ್ಷ ಜನರಿ ಇದಕ್ಕೆ ಪ್ರತಿಕ್ರಿಯಿಸುತ್ತಿದ್ದಾರೆ. ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಹಾಗಾದರೆ ಕೆಎಲ್ ರಾಹುಲ್ ಹಾಕಿದ ಆ ಪೋಸ್ಟ್ ಯಾವುದು. ಏನಿದೆ ಅದರಲ್ಲಿ ವಿಶೇಷತೆ ಎಲ್ಲದಕ್ಕೂ ಮುಂದಿದೆ ಉತ್ತರ.

ಇನ್ಸ್ಟಾಗ್ರಾಮ್‌ನಲ್ಲಿ ಕೆಎಲ್ ಪೋಸ್ಟ್
ಕೆಎಲ್ ರಾಹುಲ್ ಹೆಚ್ಚಾಗಿ ಬಳಸುವ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್. ಇನ್ನ ಖಾತೆಯಲ್ಲಿ ಒಂದು ಫೋಟೋವನ್ನು ಕೆಎಲ್ ರಾಹುಲ್ ಹಂಚಿಕೊಂಡಿದ್ದಾರೆ. ಈ ಫೋಟೋ ಜೊತೆಗೆ ಪುಟ್ಟ ಅಡಿ ಬರಹವನ್ನು ಬರೆದಿರುವುದು ಅಭಿಮಾನಿಗಳು ಸ್ಪಂದಿಸುವಂತೆ ಮಾಡಿದೆ. ಹಾಗಾಗಿ ಸಾಕಷ್ಟು ಸಂಖ್ಯೆಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ

ಕ್ರಿಕೆಟ್ ಕಿಟ್ ಜೊತೆಗೆ ಫೋಟೊ
ಕೆಎಲ್ ರಾಹುಲ್ ಇಂದು ಇನ್ಸ್ಟಾಗ್ರಾಮ್‌ನಲ್ಲಿ ಕ್ರಿಕೆಟ್ ಕಿಟ್ ಜೊತೆಗೆ ತೆಗೆದುಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಭಾವನಾತ್ಮಕವಾಗಿ ಅದನ್ನು ಕೈಯಲ್ಲಿ ಹಿಡಿದು ನಮ್ಮ ಮನದ ಭಾವನೆಯನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ತಮ್ಮ ಭಾವನೆಯನ್ನು ಕೆಎಲ್ ರಾಹುಲ್ ವ್ಯಕ್ತಪಡಿಸಿದ್ದಾರೆ.
ಐ ಮಿಸ್ ಯೂ ಎಂದಿದ್ದು ಕ್ರಿಕೆಟ್‌ಗೆ
ಕೊರೊನಾ ವೈರಸ್‌ನ ಕಾರಣದಿಂದಾಗಿ ಕ್ರಿಕೆಟ್ ಚಟುವಟಿಗೆಗಳು ಭಾರತದಲ್ಲಿ ಇನ್ನೂ ಆರಂಭವಾಗಿಲ್ಲ. ಹೀಗಾಗಿ ಕೆಎಲ್ ರಾಹುಲ್ ಕ್ರಿಕೆಟ್ ಆಟವನ್ನು ಕಳೆದುಕೊಳ್ಳುತ್ತಿರುವುದಕ್ಕೆ ಈ ರೀತಿಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಇದೇ ಫೋಟೋಗೆ "ಐ ಮಿಸ್ ಯೂ" ಎಂಬ ಅಡಿಬರಹವನ್ನು ಕೆಎಲ್ ರಾಹುಲ್ ಬರೆದುಕೊಂಡಿದ್ದಾರೆ.

ಕೆಲವೇ ನಿಮಿಷಗಳಲ್ಲಿ ಪೋಸ್ಟ್ ವೈರಲ್
ಕೆಎಲ್ ರಾಹುಲ್ ಈ ಪೋಸ್ಟ್ ಹಾಕಿದ ಕೆಲವೇ ಕ್ಷಣಗಳಲ್ಲಿ ಇದು ವೈರಲ್ ಆಗಿದೆ. ಕೇವಲ ನಾಲ್ಕು ಗಂಟೆಯಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಅಭಿಮಾನಿಗಳು ಪೋಸ್ಟ್‌ಗೆ ಸ್ಪಂದಿಸಿದ್ದಾರೆ. ಜೊತೆಗೆ ತಮ್ಮ ಭಾವನೆಯನ್ನು ಬರಹಗಳ ಮೂಲಕ ಕಮೆಂಟ್ ಮಾಡಿ ವ್ಯಕ್ತಪಡಿಸುತ್ತಿದ್ದಾರೆ.

ಭಾರತದಲ್ಲಿ ಕ್ರಿಕೆಟ್‌ಗೆ ಕೊರೊನಾ ಅಡ್ಡಗಾಲು
ಭಾರತದಲ್ಲಿ ಕ್ರಿಕೆಟ್ ಚಟುವಟಿಕೆಗಳು ಇನ್ನೂ ಆರಂಭವಾಗಿಲ್ಲ. ಕೊರೊನಾ ವೈರಸ್ ತನ್ನ ಉಗ್ರರೂಪವನ್ನು ಈಗ ತೋರಿಸುತ್ತಿದ್ದು ದಿನಕ್ಕೆ 30 ಸಾವಿರದ ಸಮೀಪ ಪ್ರಕರಣಗಳು ದೃಢಪಡುತ್ತಿದೆ. ಹೀಗಾಗಿ ಸದ್ಯದ ಸ್ಥಿತಿಯಲ್ಲಿ ಮತ್ತೆ ಯಾವಾಗ ಕ್ರಿಕೆಟ್ ಚಟುವಟಿಕೆ ಪುನಾರಂಭವಾಗಲಿದೆ ಎಂದು ನಿರ್ಧರಿಸಬೇಕಿರುವ ಬಿಸಿಸಿಐ ಕಾದು ನೋಡುವ ತಂತ್ರಕ್ಕೆ ಮುಂದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications