ಕುಟುಂಬ ಸಾಕಲು ಹಣ ಬೇಕು, ಯಾರಾದರೂ ಕೆಲಸ ಕೊಡಿ; ಸಚಿನ್ ಗೆಳೆಯ, ಮಾಜಿ ಸ್ಟಾರ್ ಕ್ರಿಕೆಟಿಗನ ಅಳಲು!

ಒಂದು ಕಾಲದಲ್ಲಿ ಭಾರತ ಕ್ರಿಕೆಟ್ ತಂಡದ ಪರ ಕಣಕ್ಕಿಳಿದು ರಾಷ್ಟ್ರೀಯ ತಂಡಕ್ಕೆ ಸೇವೆ ಸಲ್ಲಿಸಿದ್ದ ಎಲ್ಲಾ ಕ್ರಿಕೆಟಿಗರ ಜೀವನವೂ ಸಹ ಸುಖಮಯವಾಗಿಲ್ಲ. ತಾವು ಕಣಕ್ಕಿಳಿದು ಅಬ್ಬರಿಸುತ್ತಿದ್ದ ಸಂದರ್ಭದಲ್ಲಿ ಉತ್ತಮ ಜೀವನವನ್ನು ಹೊಂದಿದ್ದ ಅದೆಷ್ಟೋ ಖ್ಯಾತ ಕ್ರಿಕೆಟಿಗರು ಇಂದು ಸಾಮಾನ್ಯರ ಹಾಗೇ ಜೀವನ ಸಾಗಿಸುತ್ತಿದ್ದರೆ, ಇನ್ನೂ ಕೆಲವರು ತೀರ ಕಷ್ಟಮಯವಾದ ಜೀವನವನ್ನು ಸಾಗಿಸುತ್ತಾ ಉದ್ಯೋಗದ ನೆರವಿಗಾಗಿ ಸಹಾಯ ಬಯಸುತ್ತಿದ್ದಾರೆ. ಈ ಸಾಲಿಗೆ ಇದೀಗ ಭಾರತದ ಮಾಜಿ ಕ್ರಿಕೆಟಿಗ, ಸಚಿನ್ ತೆಂಡೂಲ್ಕರ್ ಅವರ ಅಪ್ಪಟ ಹಾಗೂ ಆತ್ಮೀಯ ಗೆಳೆಯರೊಬ್ಬರು ಸೇರಿದ್ದಾರೆ.
ಹೌದು, ಮುಂಬೈ ಮೂಲದ ಕ್ರಿಕೆಟಿಗ ವಿನೋದ್ ಕಾಂಬ್ಳಿ ಸದ್ಯ ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿದ್ದು, ಜೀವನ ಸಾಗಿಸಲು ಕಷ್ಟವಾಗುತ್ತಿದೆ ಎಂಬ ಸಮಸ್ಯೆಯನ್ನು ಹಂಚಿಕೊಂಡಿದ್ದಾರೆ. ಈ ಹಿಂದೆ ತಾವು ಕಣಕ್ಕಿಳಿದು ಆಟವಾಡುತ್ತಿದ್ದಾಗ ತಮ್ಮ ಗೆಳೆಯ ಸಚಿನ್ ತೆಂಡೂಲ್ಕರ್ ರೀತಿಯೇ ಪ್ರತಿಭಾವಂತ ಆಟಗಾರ ಎಂದು ಗುರುತಿಸಿಕೊಂಡಿದ್ದ ವಿನೋದ್ ಕಾಂಬ್ಳಿ ಸದ್ಯ ತಮ್ಮ ಕುಟುಂಬದವರನ್ನು ನೋಡಿಕೊಳ್ಳಲು ಹಾಗೂ ತಮ್ಮ ಬಿಲ್‌ಗಳನ್ನು ಪಾವತಿಸಲು ಹಣದ ಅಗತ್ಯವಿದೆ, ಹೀಗಾಗಿ ಯಾರಾದರೂ ಕೆಲಸ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಬಿಸಿಸಿಐನಿಂದ ನಿವೃತ್ತಿ ವೇತನ ಬಿಟ್ಟು ಬೇರೆ ಯಾವುದೇ ಆದಾಯವಿಲ್ಲ
"ನಾನು ನಿವೃತ್ತ ಕ್ರಿಕೆಟಿಗ, ಬಿಸಿಸಿಐನಿಂದ ಬರುವ ಪಿಂಚಣಿಯನ್ನು ಸಂಪೂರ್ಣವಾಗಿ ಅವಲಂಬಿಸಿರುತ್ತೇನೆ. ಬಿಸಿಸಿಐ ನೀಡುತ್ತಿರುವ ಈ ಪಿಂಚಣಿ ನನ್ನ ಏಕೈಕ ಆದಾಯದ ಮೂಲವಾಗಿದೆ, ಇದಕ್ಕಾಗಿ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ, ಇದು ನನ್ನ ಕುಟುಂಬವನ್ನು ನೋಡಿಕೊಳ್ಳುತ್ತಿದೆ" ಎಂದು ಮಿಡ್‌ಡೇ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಇನ್ನು ಬಿಸಿಸಿಐನಿಂದ ವಿನೋದ್ ಕಾಂಬ್ಳಿಗೆ ತಿಂಗಳಿಗೆ ಮೂವತ್ತು ಸಾವಿರ ಹಣ ಪಿಂಚಣಿಯಾಗಿ ಲಭಿಸುತ್ತಿದೆ.

ಕೆಲಸಕ್ಕೆ ಮನವಿ ಇಟ್ಟ ಕಾಂಬ್ಳಿ
ಇನ್ನೂ ಮುಂದುವರೆದು ಮಾತನಾಡಿರುವ ವಿನೋದ್ ಕಾಂಬ್ಳಿ "ನನಗೆ ಕೆಲಸದ ಅಗತ್ಯವಿದ್ದು, ಯುವ ಕ್ರಿಕೆಟಿಗರಿಗೆ ಕೋಚ್ ಆಗಿ ಕೆಲಸ ಮಾಡಲು ಸಿದ್ಧನಿದ್ದೇನೆ. ಮುಂಬೈ ಕ್ರಿಕೆಟ್ ಬೋರ್ಡ್ ಅಮೊಲ್ ಮುಜುಂದಾರ್ ಅವರನ್ನು ಹೆಡ್ ಕೋಚ್ ಆಗಿ ಉಳಿಸಿಕೊಂಡಿರುವುದು ನನಗೆ ತಿಳಿದಿದೆ. ಆದರೆ ಬೇರೆ ಬೋರ್ಡ್‌ಗಳಿಗೆ ನನ್ನ ಅಗತ್ಯವಿದ್ದರೆ, ನಾನು ಕೆಲಸ ನಿರ್ವಹಿಸಲು ಸಿದ್ಧ" ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ವಿನೋದ್ ಕಾಂಬ್ಳಿ ಕೋಚ್ ಆಗಿ ಕೆಲಸ ನಿರ್ವಹಿಸಲು ತಾನು ಸಿದ್ಧನಿದ್ದು, ಈ ಕೆಲಸ ತಮ್ಮ ಜೀವನ ನಡೆಸಲು ಅತ್ಯಗತ್ಯ ಎಂಬುದನ್ನು ತಿಳಿಸಿದ್ದಾರೆ.

ವಿನೋದ್ ಕಾಂಬ್ಳಿ ಅಂಕಿಅಂಶ
ಸಚಿನ್ ತೆಂಡೂಲ್ಕರ್ ಜತೆ ಸನಿಹದ ಒಡನಾಟವನ್ನು ಹೊಂದಿರುವ ವಿನೋದ್ ಕಾಂಬ್ಳಿ ಮಾಸ್ಟರ್ ಬ್ಲಾಸ್ಟರ್‌ಗೆ ಬಾಲ್ಯದಿಂದಲೂ ಸ್ನೇಹಿತ. 1991ರಿಂದ 2000ರವರೆಗೆ ಭಾರತ ಅಂತರರಾಷ್ಟ್ರೀಯ ತಂಡದ ಪರ ಆಡಿದ್ದ ವಿನೋದ್ ಕಾಂಬ್ಳಿ 17 ಟೆಸ್ಟ್ ಪಂದ್ಯಗನ್ನಾಡಿರುವ ವಿನೋದ್ ಕಾಂಬ್ಳಿ 1084 ರನ್ ಗಳಿಸಿದ್ದಾರೆ ಹಾಗೂ 4 ಟೆಸ್ಟ್ ಶತಕಗಳನ್ನು ಬಾರಿಸಿದ್ದಾರೆ. ಇನ್ನು 104 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿರುವ ವಿನೋದ್ ಕಾಂಬ್ಳಿ 2477 ರನ್ ಬಾರಿಸಿದ್ದು, 2 ಶತಕ ಹಾಗೂ 14 ಅರ್ಧಶತಕಗಳನ್ನು ಕಲೆಹಾಕಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications