For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಪ್ರತಿ ಆಟಗಾರನಿಗೂ ಧನ್ಯವಾದ ಎಂದ ಸೌರವ್ ಗಂಗೂಲಿ

I Thank Every Player For Making IPL 2020 Possible, Says Bcci president Ganguly

ಐಪಿಎಲ್ 13ನೇ ಆವೃತ್ತಿ ಭರ್ಜರಿ ಯಶಸ್ಸನ್ನು ಸಾಧಿಸಿದೆ. ಕೊರೊನಾ ವೈಸರ್‌ನ ಆತಂಕದ ಮಧ್ಯೆ ಸಾಕಷ್ಟು ಸವಾಲುಗಳ ಮಧ್ಯೆ ಯುಎಇನಲ್ಲಿ ಈ ಬಾರಿಯ ಟೂರ್ನಿಯನ್ನು ಆಯೋಜಿಸಲಾಗಿತ್ತು. ಪ್ರೇಕ್ಷಕರ ಅನುಪಸ್ಥಿತಿಯಲ್ಲೂ ಈ ಟೂರ್ನಿಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಯಶಸ್ಸಿನ ಸಂತಸವನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವ್ಯಕ್ತಪಡಿಸಿದ್ದಾರೆ.

ಬುಧವಾರ ಟೂರ್ನಿಯ ಯಶಸ್ಸಿನ ಬಗ್ಗೆ ಸೌರವ್ ಗಂಗೂಲಿ ಪ್ರತಿಕ್ರಿಯಿಸಿದರು. ಈ ಬಾರಿಯ ಐಪಿಎಲ್ ಟೂರ್ನಿ ನಡೆಯಲು ಸಾಧ್ಯವಾಗಿಸಿದ ಎಲ್ಲಾ ಫ್ರಾಂಚೈಸಿಗಳ ಪ್ರತಿಯೊಬ್ಬ ಆಟಗಾರನಿಗೂ ಧನ್ಯವಾದಗಳು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

"ಬಿಸಿಸಿಐನ ಪದಾಧಿಕಾರಿಗಳ ಪರವಾಗಿ ಹಾಗೂ ವೈಯಕ್ತಿಕವಾಗಿ ಪ್ರತೀ ತಂಡದ ಎಲ್ಲಾ ಆಟಗಾರರಿಗೂ ಧನ್ಯವಾದಗಳು. ಕಠಿಣ ಬಯೋಬಬಲ್ ಮಧ್ಯೆಯೂ ಈ ಟೂರ್ನಿ ಯಶಸ್ವಿಯಾಗಿ ನಡೆಯುವುದನ್ನು ಸಾಧ್ಯವಾಗಿಸಿದ್ದೀರಿ. ಮಾನಸಿಕವಾಗಿ ಇದು ಕಠಿಣ. ಆದರೆ ನಿಮ್ಮ ಬದ್ಧತೆ ಭಾರತೀಯ ಕ್ರಿಕೆಟ್ ಏನು ಎಂಬುದನ್ನು ತೋರಿಸಿಕೊಟ್ಟಿದೆ" ಎಂದಿದ್ದಾರೆ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಮಂಗಳವಾರ ಈ ಬಾರಿಯ ಐಪಿಎಲ್ ಆವರತ್ತಿಯ ಫೈನಲ್ ಪಂದ್ಯ ನಡೆಯಿತು. ಈ ಅಂತಿಮ ಕಾದಾಟದಲ್ಲಿ ಮುಂಬೈ ಡೆಲ್ಲಿ ವಿರುದ್ದ ಯದು ವಿಕೆಟ್‌ಗಳ ಜಯ ದಾಖಲಿಸಿ ಐದನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ. ಇದಕ್ಕೂ ಮುನ್ನ ಮುಂಬೈ 2013, 2015, 2017 ಹಾಗೂ 2019ರಲ್ಲಿ ಚಾಂಪಿಯನ್ ಎನಿಸಿಕೊಂಡಿತ್ತು.

8 ತಂಡಗಳ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಪ್ಲೇಆಫ್ ಹಂತಕ್ಕೆ ಪ್ರವೇಶ ಪಡೆದುಕೊಂಡಿತ್ತು. ಇದರಲ್ಲಿ ಮುಂಬೈ ಹಾಗೂ ಡೆಲ್ಲಿ ಅಂತಿಮ ಹಂತಕ್ಕೆ ತಲುಪಿ ಪ್ರಶಸ್ತಿಗಾಗಿ ಹೋರಾಟ ನಡೆಸಿತ್ತು.

Story first published: Wednesday, November 11, 2020, 13:17 [IST]
Other articles published on Nov 11, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+