ಆರ್‌ಸಿಬಿ ಬಿಟ್ಟು ಆ ತಂಡ ಸೇರಲು ಯತ್ನಿಸಿದ್ದೆ, ಆದರೆ ಅವರು ಅವಕಾಶ ನೀಡಲಿಲ್ಲ ಎಂದ ಕೊಹ್ಲಿ!

ವಿರಾಟ್ ಕೊಹ್ಲಿ 2008ರ ಮೊದಲ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾದಾಗಿನಿಂದ ಇಲ್ಲಿಯವರೆಗೆ ನಡೆದಿರುವ ಎಲ್ಲಾ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದಾರೆ. ಈ ಮೂಲಕ ಎಲ್ಲಾ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಗಳಲ್ಲಿಯೂ ಒಂದೇ ತಂಡದ ಪರ ಕಣಕ್ಕಿಳಿದಿರುವ ಏಕೈಕ ಆಟಗಾರ ಎಂಬ ದಾಖಲೆಯನ್ನೂ ಸಹ ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ.
ಇನ್ನು ಈ ಕುರಿತು ಅನೇಕ ಬಾರಿ ಮಾತನಾಡಿರುವ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊರತುಪಡಿಸಿ ಬೇರೆ ಫ್ರಾಂಚೈಸಿ ಪರ ಆಡುವುದನ್ನು ಊಹಿಸಿಕೊಳ್ಳುವುದಕ್ಕೂ ಸಹ ಆಗುವುದಿಲ್ಲ, ನನ್ನ ಕೊನೆಯ ಐಪಿಎಲ್ ಆವೃತ್ತಿಯವರೆಗೂ ನಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವೇ ಆಡಲಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸಹ ವಿರಾಟ್ ಕೊಹ್ಲಿಯನ್ನು ಬಿಟ್ಟುಕೊಡದೇ ಸತತವಾಗಿ ತಮ್ಮ ತಂಡದಲ್ಲಿಯೇ ರಿಟೈನ್ ಮಾಡಿಕೊಂಡು ಬಂದಿದೆ. ಹೀಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ವಿರಾಟ್ ಕೊಹ್ಲಿ ಒಳ್ಳೆಯ ಸಂಬಂಧವನ್ನು ಉಳಿಸಿಕೊಂಡು ಬಂದಿದ್ದು, ಇದೀಗ ವಿರಾಟ್ ಕೊಹ್ಲಿ ತಾವು ಹಿಂದೊಮ್ಮೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬಿಟ್ಟು ಬೇರೆ ಫ್ರಾಂಚೈಸಿ ಪರ ಆಡಲು ಮುಂದಾಗಿದ್ದನ್ನು ಬಿಚ್ಚಿಟ್ಟಿದ್ದಾರೆ.
ಹೌದು, ಜಿಯೊ ಸಿನಿಮಾದಲ್ಲಿ ರಾಬಿನ್ ಉತ್ತಪ್ಪ ಜತೆ ಮಾತನಾಡಿದ ವಿರಾಟ್ ಕೊಹ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. "ರಾಯಲ್ ಚಾಲೆಂಜರ್ಸ್ ಬೆಂಗಳೂರು ಅದ್ಭುತ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಜತೆಗಿನ ಪಾರ್ಟ್ನರ್‌ಶಿಪ್ ಹಾಗೂ ಪಯಣವನ್ನು ನಾನು ಯಾಕೆ ಗೌರವಿಸುತ್ತೇನೆ ಏಕೆಂದರೆ ಆ ಫ್ರಾಂಚೈಸಿ ಆರಂಭದ ಮೂರು ವರ್ಷಗಳಲ್ಲಿ ನನ್ನನ್ನು ಅತಿಯಾಗಿ ಬೆಂಬಲಿಸಿದ ಕಾರಣಕ್ಕಾಗಿ. ರಿಟೆನ್ಷನ್ ಶುರುವಾದಾಗಲೂ ಸಹ ಆರ್‌ಸಿಬಿ ಮ್ಯಾನೇಜ್‌ಮೆಂಟ್ ನಿಮ್ಮನ್ನು ರಿಟೇನ್ ಮಾಡಿಕೊಳ್ಳುತ್ತೇವೆ ಎಂದಿತ್ತು. ಈ ಸಂದರ್ಭದಲ್ಲಿ ರೇಯ್ ಜೆನ್ನಿಂಗ್ಸ್ ಅವರಿಗೆ ನಾನು ಮೂರನೇ ಕ್ರಮಾಂಕದಲ್ಲಿ ಆಡಬೇಕು, ಟೀಮ್ ಇಂಡಿಯಾ ಪರ ಮೂರನೇ ಕ್ರಮಾಂಕದಲ್ಲಿ ನಾನು ಆಡುತ್ತೇನೆ. ಇಲ್ಲಿಯೂ ಸಹ ಅದೇ ಕ್ರಮಾಂಕದಲ್ಲಿ ಆಡಬೇಕು ಎಂದೆ. ಅದಕ್ಕೆ ಅವರು ನೀವು ಮೂರನೇ ಕ್ರಮಾಂಕದಲ್ಲಿಯೇ ಆಡುತ್ತೀರ ಎಂದರು. ನನಗೆ ಅಗತ್ಯವಿದ್ದ ಸಂದರ್ಭದಲ್ಲಿ ಅವರು ನನ್ನ ಮೇಲೆ ನಂಬಿಕೆ ಇಟ್ಟರು. ಅದೇ ಸಂದರ್ಭದಲ್ಲಿ ನಾನು ನನ್ನ ಅಂತರರಾಷ್ಟ್ರೀಯ ಕೆರಿಯರ್ ಅನ್ನೂ ಸಹ ವೃದ್ಧಿಸಿಕೊಳ್ಳುತ್ತಿದ್ದೆ" ಎಂದು ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.

ಈ ಮೂಲಕ ಆರ್‌ಸಿಬಿಯಲ್ಲಿ ಆರಂಭದ ದಿನಗಳಲ್ಲಿ ಐದು ಹಾಗೂ ಆರನೇ ಕ್ರಮಾಂಕದಲ್ಲಿ ಆಡುತ್ತಿದ್ದ ತಾನು ಮೂರನೇ ಕ್ರಮಾಂಕದಲ್ಲಿ ಆಡಬೇಕು ಎಂದಾಗ ಆರ್‌ಸಿಬಿ ಒಪ್ಪಿಕೊಂಡಿತು ಎಂದು ವಿರಾಟ್ ಕೊಹ್ಲಿ ಆರ್‌ಸಿಬಿ ತನ್ನ ಬೆನ್ನಿಗೆ ನಿಂತಿದ್ದನ್ನು ನೆನಪಿಸಿಕೊಂಡಿದ್ದಾರೆ. ಇನ್ನೂ ಮುಂದುವರಿದು ಮಾತನಾಡಿದ ಕೊಹ್ಲಿ "ಆರ್‌ಸಿಬಿಯ ಈ ನಡೆ ನನಗೆ ಅಮೂಲ್ಯವಾದದ್ದಾಗಿದೆ. ನನಗೆ ಹೆಸರನ್ನು ತೆಗೆದುಕೊಳ್ಳಲು ಇಷ್ಟವಿಲ್ಲ. ಆದರೆ ಆ ಸಂದರ್ಭದಲ್ಲಿ ನಾನು ಬೇರೆ ಫ್ರಾಂಚೈಸಿಯೊಂದಿಗೆ ಮಾತನಾಲು ಯತ್ನಿಸಿದ್ದೆ. ಆದರೆ ಅವರು ನನ್ನ ಮಾತನ್ನು ಆಲಿಸಲೂ ಸಹ ಸಿದ್ಧರಿರಲಿಲ್ಲ. ಐದು ಹಾಗೂ ಆರನೇ ಕ್ರಮಾಂಕದಲ್ಲಿ ಆಡುತ್ತಿದ್ದ ನನಗೆ ಮೂರನೇ ಕ್ರಮಾಂಕದಲ್ಲಿ ಆಡುವ ಅವಕಾಶವಾದರೂ ಬೇರೆ ಎಲ್ಲಾದರೂ ಸಿಕ್ಕರೆ ಸಾಕು ಎನ್ನುವ ಮನೋಭಾವ ನನ್ನದಾಗಿತ್ತು. ನಾನು ಟೀಮ್ಇಂಡಿಯಾ ಪರ ಆಡಿದ್ದೆ ಹಾಗೂ 2011ರ ವಿಶ್ವಕಪ್‌ನಲ್ಲಿ ಪ್ರದರ್ಶನ ನೀಡಿದ್ದೆ ಎಂಬ ಕಾರಣಕ್ಕಾಗಿ ನನ್ನ ಮಾತುಗಳನ್ನು ಆಲಿಸಲೂ ಸಹ ಇಚ್ಛಿಸದಿದ್ದ ಫ್ರಾಂಚೈಸಿ ನನ್ನ ಬಳಿ ಬಂದು ಹರಾಜಿಗೆ ಬರಲಾಗುತ್ತಾ, ನಾವು ನಿಮ್ಮನ್ನು ಖರೀದಿಸುತ್ತೇವೆ ಎಂದಿತ್ತು. ಚಾನ್ಸೇ ಇಲ್ಲ, ನನ್ನ ಬೆಂಬಲಕ್ಕೆ ಬಂದ ಫ್ರಾಂಚೈಸಿ ಪರ ನಾನು ಯಾವಾಗಲೂ ಆಡುತ್ತೇನೆ ಎಂದು ಅವರಿಗೆ ಉತ್ತರಿಸಿದ್ದೆ" ಎಂದು ಹೇಳಿಕೆ ನೀಡಿದರು.
ಈ ಮೂಲಕ ಬೇರೆ ಫ್ರಾಂಚೈಸಿಯೊಂದು ತನ್ನನ್ನು ಮೊದಲು ತಿರಸ್ಕರಿಸಿ ಒಳ್ಳೆಯ ಪ್ರದರ್ಶನ ನೀಡಿದ ಬಳಿಕ ನನ್ನನ್ನು ಖರೀದಿಸಲು ಯತ್ನಿಸಿತ್ತು ಎಂಬುದನ್ನು ವಿರಾಟ್ ಕೊಹ್ಲಿ ಆ ಫ್ರಾಂಚೈಸಿಯ ಹೆಸರನ್ನು ಹೇಳದೇ ಬಹಿರಂಗಪಡಿಸಿದ್ದಾರೆ. ಈ ಹೇಳಿಕೆಯನ್ನು ಕೇಳಿದ ರಾಬಿನ್ ಉತ್ತಪ್ಪ ವಿರಾಟ್ ಕೊಹ್ಲಿಯನ್ನು ಸೇರಿಸಿಕೊಳ್ಳದ್ದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications