ಹರ್ಭಜನ್ ರಿಂದ ಸ್ಪೂರ್ತಿ ಪಡೆದ ಬಾಲಿವುಡ್ ನಟಿ
ಮುಂಬೈ, ಜೂ.17: ಟೀಂ ಇಂಡಿಯಾದ ಪ್ರಮುಖ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಸುಮಾರು ಎರಡು ವರ್ಷಗಳ ನಂತರ ಟೆಸ್ಟ್ ತಂಡಕ್ಕೆ ಮರಳಿದ್ದು ಈಗ ಬಾಲಿವುಡ್ ನಟಿಗೆ ಸ್ಪೂರ್ತಿ ತಂದಿದೆ. ಹರ್ಭಜನ್ ಸಿಂಗ್ ಅವರ ಗೆಳತಿ ನಟಿ ಗೀತಾ ಬಸ್ರಾ ಅವರು ಕೂಡಾ ಚಿತ್ರರಂಗದಲ್ಲಿ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
31 ವರ್ಷ ವಯಸ್ಸಿನ ನಟಿ, ಉತ್ತಮ ಡ್ಯಾನ್ಸರ್ ಗೀತಾ ಅವರನ್ನು ಪ್ರೇಕ್ಷಕರು 'ಸೆಕೆಂಡ್ ಹ್ಯಾಂಡ್ ಹಸ್ಬಂಡ್' ಚಿತ್ರದಲ್ಲಿ ಕೊನೆಯ ಬಾರಿ ನೋಡಿದ್ದರು. ನಂತರ ಚಿತ್ರರಂಗದಲ್ಲಿ ಅಂಥಾ ಏಳಿಗೆ ಕಾಣಲಿಲ್ಲ. ಆದರೆ, ಹತಾಶೆಗೊಂಡ ಗೀತಾಗೆ ಈಗ ಗೆಳೆಯ ಹರ್ಭಜನ್ ಸಿಂಗ್ ಅವರ ಇತ್ತೀಚಿನ ಫಾರ್ಮ್ ಖುಷಿ ಕೊಟ್ಟಿದೆಯಂತೆ.

ಹರ್ಭಜನ್ ಸಿಂಗ್ ಅವರು ತಮ್ಮ ಆಟವನ್ನು ತುಂಬಾ ಪ್ರೀತಿಸುತ್ತಾರೆ. ಅವರ ತಾಳ್ಮೆ, ಪರಿಶ್ರಮ ಕಂಡು ನನಗೂ ಈಗ ಮತ್ತೊಮ್ಮೆ ನನ್ನ ವೃತ್ತಿ ಬದುಕಿನಲ್ಲಿ ಮಿಂಚಬೇಕು ಎನಿಸಿದೆ. ಸತತ ಪರಿಶ್ರಮಕ್ಕೆ ಸೂಕ್ತ ಬೆಲೆ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಹರ್ಭಜನ್ ಅವರೇ ಉದಾಹರಣೆ.
ನನ್ನ ಹಾಗೂ ಹರ್ಭಜನ್ ಅವರ ನಡುವೆ ಮದುವೆ ಯಾವಾಗ ಆಗುವುದೋ ಗೊತ್ತಿಲ್ಲ. ಆದರೆ, ಗಾಸಿಪ್ ಹಬ್ಬುವುದು ಇಬ್ಬರಿಗೂ ಅಸಹನೆ ಉಂಟು ಮಾಡುತ್ತದೆ. ನಾವು ಎಲ್ಲರಿಗೂ ತಿಳಿಸಿ ಮದುವೆಯಾಗುತ್ತೇವೆ. ಮಾಧ್ಯಮಗಳಿಗೆ ತಿಳಿಸದೇ ಮದುವೆಯಾಗಲು ಸಾಧ್ಯವೇ ಎಂದು ಪ್ರಶ್ನಿಸಿದರು.
ನನ್ನ ಚಿತ್ರಗಳ ಬಗ್ಗೆ ಹರ್ಭಜನ್ ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ. ಅದರೆ, ನನ್ನ ಡ್ಯಾನ್ಸ್ ಅವರಿಗೆ ತುಂಬಾ ಇಷ್ಟ. ಒಟ್ಟಾರೆ ಹರ್ಭಜನ್ ಸ್ಪೂರ್ತಿದಾಯಕ ಎಂದಿದ್ದಾರೆ. (ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications