ಡೆಲ್ಲಿ ಕ್ಯಾಪಿಟಲ್ಸ್ ಕೈಬಿಟ್ಟಿದ್ದಕ್ಕೆ ಕಾರಣ ಹೇಳಿದ ಸಂದೀಪ್ ಲಮಿಚಾನೆ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಆಡುವ ಅಸೋಸಿಯೇಟ್ ದೇಶಗಳ ಆಟಗಾರರಲ್ಲಿ ಪ್ರಮುಖ ಲೆಗ್ ಸ್ಪಿನ್ನರ್ ಆಗಿರುವ ನೇಪಾಳದ ಸಂದೀಪ್ ಲಮಿಚಾನೆಗೆ ಐಪಿಎಲ್‌ನಲ್ಲಿ ಮತ್ತೆ ಆಡುವ ಆಸೆಯಿದೆ. ಇದನ್ನು ಲಮಿಚಾನೆ ಹೇಳಿಕೊಂಡಿದ್ದಾರೆ.
20ರ ಹರೆಯದ ಲೆಗ್ ಸ್ಪಿನ್ನರ್ ಸಂದೀಪ್ ಲಮಿಚಾನೆ ಡೆಲ್ಲಿ ಡೇರ್ ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್) ಪರ ಆಡಿದ್ದರು. ಐಪಿಎಲ್ 9 ಪಂದ್ಯಗಳಲ್ಲಿ 8.34ರ ಎಕಾನಮಿಯಲ್ಲಿ 13 ವಿಕೆಟ್ ಪಡೆದಿದ್ದಾರೆ. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಸಂದೀಪ್ ಆಡುತ್ತಿಲ್ಲ.
2018ರ ಸೀಸನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ 20 ಲಕ್ಷ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದರು. ಆದರೆ 2020ಕ್ಕೆ ಡೆಲ್ಲಿ ಜೊತೆಗಿನ ಸಂದೀಪ್ ಲಮಿಚಾನೆ ಒಪ್ಪಂದ ಕೊನೆಗೊಂಡಿತ್ತು. ಹೀಗಾಗಿ ಈ ಬಾರಿ ಐಪಿಎಲ್ ಆಟಗಾರರ ಹರಾಜಿನ ವೇಳೆ ಡೆಲ್ಲಿ ಫ್ರಾಂಚೈಸಿ ಸಂದೀಪ್ ಅವರನ್ನು ಉಳಿಸಿಕೊಂಡಿರಲಿಲ್ಲ. ಹರಾಜಿನಲ್ಲಿ ಸಂದೀಪ್ ಯಾವ ತಂಡಕ್ಕೂ ಆಯ್ಕೆಯಾಗಿರಲಿಲ್ಲ.
'ಇಲ್ಲಿ ಯಾವುದೇ ವೈಯಕ್ತಿಕ ವಿಚಾರಗಳಿಲ್ಲ. ಅವರಿಗೆ ಯಾವುದೇ ಸ್ಪಿನ್ನರ್ ಬೇಕಿದೆ ಎಂದು ನನಗನ್ನಿಸುತ್ತಿಲ್ಲ. ಯಾಕೆಂದರೆ ಡೆಲ್ಲಿ ಕ್ಯಾಪಿಟಲ್ಸ್ ಈ ವರ್ಷ ಸ್ಪಿನ್ನರ್‌ಗಳಿಂದ ತುಂಬಿ ಹೋಗಿದೆ. ಅವರು ಬ್ಯಾಟ್ಸ್‌ಮನ್‌ಗಾಗಿ ಮೊರೆ ಹೋದರು. ಪರವಾಗಿಲ್ಲ. ಇದು ಆಗುತ್ತದೆ ಒಮ್ಮೊಮ್ಮೆ. ಆದರೆ ನನಗೆ ಮತ್ತೆ ಐಪಿಎಲ್‌ನಲ್ಲಿ ಆಡಲು ಆಸೆಯಿದೆ,' ಎಂದು ಸಂದೀಪ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications