ವಿಶ್ವಕಪ್ ಗೆಲ್ಲಲೇಬೇಕು ಅದು ವಿಶ್ವ ಕ್ರಿಕೆಟ್‌ನ ಕಲಶ: ರೋಹಿತ್ ಶರ್ಮಾ

ಟೀಮ್ ಇಂಡಿಯಾ ಪರವಾಗಿ ವಿಶ್ವಕಪ್ ಗೆಲ್ಲಲೇ ಬೇಕು ಎಂಬ ಬಯಕೆಯನ್ನು ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ವ್ಯಕ್ತಪಡಿಸಿದ್ದಾರೆ. ಮುಂಬರುವ ವಿಶ್ವಕಪ್‌ನಲ್ಲಿ ಈ ಸಾಧನೆಯನ್ನು ಭಾರತ ಮಾಡಲಿದೆ ಎಂಬ ವಿಶ್ವಾಸವನ್ನು ಹೊಂದಿದ್ದಾರೆ ರೋಹಿತ್ ಶರ್ಮಾ.
ಕಳೆದ ಏಕದಿನ ವಿಶ್ವಕಪ್‌ನಲ್ಲಿ ಭಾರತ ಸೆಮಿಫೈನಲ್‌ನಲ್ಲಿ ಆಘಾತಕಾರಿಯಾಗಿ ನ್ಯೂಜಿಲೆಂಡ್‌ಗೆ ಶರಣಾಗಿತ್ತು. ಇದು ಸಾಕಷ್ಟು ಭರವಸೆಯನ್ನು ಹೊಂದಿದ್ದ ಟೀಮ್ ಇಂಡಿಯಾ ಅಭಿಮಾನಿಗಳಿಗೂ ದೊಡ್ಡ ನಿರಾಸೆಯನ್ನು ನೀಡಿತ್ತು. ಈ ನಿರಾಸೆಯನ್ನು ರೋಹಿತ್ ಶರ್ಮಾ ಕೂಡ ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್‌ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನವನ್ನು ನೀಡಿದ್ದರು. ದಾಖಲೆಯ ಐದು ಶತಕವನ್ನು ಸಿಡಿಸಿದ್ದರು ರೋಹಿತ್ ಶರ್ಮಾ. ಆದರೆ ಸೆಮಿ ಫೈನಲ್‌ನಲ್ಲಿ ಎಡವಿದರು. ಆದರೆ ಮುಂಬರುವ ವಿಶ್ವಕಪ್‌ಅನ್ನು ಮುಡಿಗೇರಿಸಿಕೊಳ್ಳಲಿದ್ದೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ ರೋಹಿತ್ ಶರ್ಮಾ.
ವಿಶ್ವಕಪ್‌ಗೆಲ್ಲುವುದು ನಮ್ಮೆಲ್ಲರ ಒಟ್ಟು ಕನಸಾಗಿದೆ. ನಾನು ಕೂಡ ವಿಶ್ವಕಪ್ ಗೆಲ್ಲಲೇಬೇಕೆಂದು ಬಯಸುತ್ತಿದ್ದೇನೆ. ಸಹಜವಾಗಿಯೇ ಪ್ರತೀ ಪಂದ್ಯಕ್ಕಿಳಿದಾಗಲೂ ಆ ಪಂದ್ಯವನ್ನು ಗೆಲ್ಲಲೇ ಬೇಕೆಂಬ ಮನಸ್ಥಿತಿಯೊಂದಿಗೆ ಮೈದಾನಕ್ಕಿಳಿದಿರುತ್ತೇವೆ. ಆದರೆ ವಿಶ್ವಕಪ್ ಗೆಲ್ಲುವುದು ಎಲ್ಲದಕ್ಕಿಂತಲೂ ಸರ್ವಶ್ರೇಷ್ಠ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಸದ್ಯ ಟಿ20 ವಿಶ್ವಕಪ್ ನಡೆಯುವ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆಯಿಲ್ಲ. ಅಂದುಕೊಂಡಂತೆ ನಡೆಯುವುದಾದರೆ ಮುಂಬರುವ ಅಕ್ಟೋಬರ್- ನವೆಂಬರ್ ತಿಂಗಳಲ್ಲಿ ನಿಗದಿಯಾಗಿತ್ತು. ಆದರೆ ವಿಶ್ವಾದ್ಯಂತ ಕೊರೊನಾ ವೈರಸ್‌ನ ದಾಳಿ ತೀವ್ರವಾಗಿರುವ ಸಂದರ್ಭದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಸ್ಥಿತಿ ಸದ್ಯಕ್ಕಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications