ನನ್ನ ಬಣ್ಣದಿಂದಾಗಿ ನಾನು ಹಿಂಸೆಗೆ ಗುರಿಯಾಗಿದ್ದೆ: ಅಝೀಮ್ ರಫೀಕ್

ಲಂಡನ್: ಕೌಂಟಿ ಕ್ಲಬ್‌ನಲ್ಲಿ ಆಡುತ್ತಿದ್ದಾಗ ತಾನು ವರ್ಣಭೇದ ನೀತಿಗೆ ಒಳಗಾಗಿದ್ದಾಗಿ ಯಾರ್ಕ್‌ಶೈರ್ ಮಾಜಿ ಆಫ್ ಸ್ಪಿನ್ನರ್, ಇಂಗ್ಲೆಂಡ್‌ನ ಅಝೀಮ್ ರಫೀಕ್ ಆರೋಪಿಸಿದ್ದಾರೆ. ರಫೀಕ್ ಅವರ ಆರೋಪಕ್ಕೆ ಸಂಬಂಧಿಸಿ ಕಾನೂನು ಸಂಸ್ಥೆ ಸ್ಕ್ವೈರ್ ಪ್ಯಾಟನ್ ಬೊಗ್ಸ್ ತನಿಖೆ ಆರಂಭಿಸಿದೆ.
ಪಾಕಿಸ್ತಾನ ಮೂಲದ 29ರ ಹರೆಯದ ಅಝೀಮ್ ರಫೀಕ್ ಇಎಸ್‌ಪಿಎನ್ ಜೊತೆ ತಾನು ವರ್ಣಬೇಧ ನೀತಿ ಎದುರಿಸಿದ್ದಾಗಿ ಹೇಳಿದ್ದರು. ತನ್ನ ವರ್ಣದ ಕಾರಣಕ್ಕಾಗಿ ತನಗೆ ಕಿರುಕುಳ ನೀಡಲಾಗುತ್ತಿತ್ತು, ಗುರಿ ಮಾಡಲಾಗಿತ್ತು ಎಂದು ರಫೀಕ್ ದೂರಿದ್ದರು.
ಕ್ಲಬ್ ನಲ್ಲಿ ಆಡುತ್ತಿದ್ದ ವೇಳೆ ತನ್ನ ವಿರುದ್ಧ ವರ್ಣಬೇಧ ನೀತಿ ಮಾಡಲಾಗುತ್ತಿತ್ತು. ಕೆಲವು ಆಟಗಾರರು ನನ್ನನ್ನು 'ಪಾಕಿ' ಅಥವಾ 'ಆನೆ ತೊಳೆಯುವವ' ಅಂತ ಕರೆಯುತ್ತಿದ್ದರು. ಇನ್ನು ಕೆಲವರು 'ನೀನು ಎಲ್ಲಿಂದ ಬಂದೆಯೋ ಅಲ್ಲಿಗೇ ಹೋಗು' ಎಂದು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ.
'ನಮ್ಮ ಮಾಜಿ ಆಟಗಾರ ಅಝೀಮ್ ರಪೀಕ್ ನೀಡಿದ ಹೇಳಿಕೆಯನ್ನು ನಾವು ತನಿಖೆ ನಡೆಸುತ್ತೇವೆ. ಸ್ವತಂತ್ರ ಕಾನೂನು ಸಂಸ್ಥೆ ಸ್ಕ್ವೈರ್ ಪ್ಯಾಟನ್ ಬೊಗ್ಸ್ ಈ ಆರೋಪಕ್ಕೆ ಸಂಬಂಧಿಸಿ ಗಂಭೀರ ತನಿಖೆ ನಡೆಸಲಿದೆ,' ಎಂದು ಯಾರ್ಕ್‌ಶೈರ್ ಕೌಂಟಿ ಕ್ರಿಕೆಟ್ ಕ್ಲಬ್ ಶುಕ್ರವಾರ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications