For Quick Alerts
ALLOW NOTIFICATIONS  
For Daily Alerts
 

ಕೋವಿಡ್-19 ಪಾಸಿಟಿವ್ ಬಗ್ಗೆ ಮೌನ ಮುರಿದ ವೃದ್ಧಿಮಾನ್ ಸಾಹ

I Was Certainly Scared’: Wriddhiman Saha Breaks Silence on Being Covid-19 Positive

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ವೇಳೆ ಕೋವಿಡ್-19ಗೆ ತುತ್ತಾಗಿರುವ ಸನ್ ರೈಸರ್ಸ್ ಹೈದರಾಬಾದ್ ಬ್ಯಾಟ್ಸ್‌ಮನ್‌ ವೃದ್ಧಿಮಾನ್ ಸಾಹ ಕೊನೆಗೂ ಮೌನ ಮುರಿದಿದ್ದಾರೆ. ಜಗತ್ತನ್ನು ಕಾಡುತ್ತಿರುವ ವೈರಸ್ ಸೋಂಕು ತಾಗಿದ್ದು ಗೊತ್ತಾದಾಗ ಭಯವಾಗಿತ್ತು ಎಂದು ಸಾಹ ಹೇಳಿದ್ದಾರೆ.

2021ನೇ ಐಪಿಎಲ್ ವೇಳೆ ಕೋಲ್ಕತ್ತಾ ನೈಟ್ ರೈಡರ್ಸ್‌ನ ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್, ಹೈದರಾಬಾದ್‌ನ ವೃದ್ಧಿಮಾನ್ ಸಾಹ, ಚೆನ್ನೈ ಸೂಪರ್ ಕಿಂಗ್ಸ್‌ನ ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ನ ಅಮಿತ್ ಮಿಶ್ರಾಗೆ ಕೋವಿಡ್ ಪಾಸಿಟಿವ್ ಇರುವುದು ಕಂಡುಬಂದಿತ್ತು. ಹೀಗಾಗಿ ಐಪಿಎಲ್ ಅನ್ನು ಅಮಾನತುಗೊಳಿಸಲಾಯ್ತು.

'ನನಗೆ ಕೋವಿಡ್-19 ಪಾಸಿಟಿವ್ ಎಂದು ಗೊತ್ತಾದಾಗ ನಿಜಕ್ಕೂ ಹೆದರಿದ್ದೆ. ಜಗತ್ತನ್ನು ಕಾಡುತ್ತಿರುವ ಸೋಂಕು ನನಗೂ ತಾಗಿದೆ ಎಂದು ಭೀತಿಯಾಗಿತ್ತು. ನನ್ನ ಕುಟುಂಬಸ್ಥರೂ ತುಂಬಾ ಹೆದರಿದ್ದರು. ಆದರೆ ನಾನು ವಿಡಿಯೋ ಕಾಲ್ ಮೂಲಕ ಅವರಿಗೆ ಧೈರ್ಯ ತುಂಬುತ್ತಿದ್ದೆ. ಹೆದರುವಂತದ್ದು ಇಲ್ಲಿ ಏನೂ ಇಲ್ಲ ಎಂದು ಸಮಾಧಾನ ಹೇಳುತ್ತಿದ್ದೆ,' ಎಂದು ಸಾಹ ಹೇಳಿದ್ದಾರೆ.

2021ರಲ್ಲಿ ಸಾಹ ಕೇವಲ 2 ಪಂದ್ಯಗಳನ್ನಷ್ಟೇ ಆಡಿದ್ದರು. ಮೇ 1ರ ಅಭ್ಯಾಸದ ಬಳಿಕ ಸಾಹಾಗೆ ಸಣ್ಣಗೆ ಶೀತ ಮತ್ತು ಕಫ ಇದ್ದಂತೆ ಭಾಸವಾಗಿತ್ತು. ಆಗ ಸಾಹ ತಂಡದ ವೈದ್ಯರಿಗೆ ತಿಳಿಸಿದ್ದರಂತೆ. ಅಲ್ಲದೆ ಕೋವಿಡ್ ಪರೀಕ್ಷೆ ನಡೆಸಿದ ಮರುಕ್ಷಣವೇ ಸಾಹ ಐಸೊಲೇಶನ್ ಪಾಲಿಸಿದ್ದಾಗಿ ಅವರೇ ಹೇಳಿಕೊಂಡಿದ್ದಾರೆ.

Story first published: Wednesday, May 12, 2021, 15:40 [IST]
Other articles published on May 12, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+