ನಾನು ಆರ್ ಅಶ್ವಿನ್‌ಗೆ ಒತ್ತಡ ತರಲು ನೋಡುತ್ತಿದ್ದೇನೆ: ಸ್ಟೀವ್ ಸ್ಮಿತ್

ಸಿಡ್ನಿ: ನಾನು ಭಾರತದ ಸ್ಪಿನ್ನರ್ ಆರ್ ಅಶ್ವಿನ್‌ಗೆ ಒತ್ತಡ ತರಲು ನೋಡುತ್ತಿದ್ದೇನೆ ಎಂದು ಆಸ್ಟ್ರೇಲಿಯಾದ ಪ್ರಮುಖ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಹೇಳಿದ್ದಾರೆ. ಭಾರತ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಲ್ಲಿ ನೀರಸ ಪ್ರದರ್ಶನ ನೀಡಿದ್ದ ಸ್ಮಿತ್, ಮೂರನೇ ಪಂದ್ಯದಲ್ಲಿ ಕೊಂಚ ಎಚ್ಚರಿಕೆಯ ಬ್ಯಾಟಿಂಗ್ ತೋರಿಸಿದ್ದಾರೆ.
ಆರಂಭಿಕ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಸ್ಟೀವ್ ಸ್ಮಿತ್ ಕೇವಲ 1 ರನ್‌ಗೆ ವಿಕೆಟ್ ಒಪ್ಪಿಸಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ 1 ರನ್ ಬಾರಿಸಿದ್ದರು. ದ್ವಿತೀಯ ಟೆಸ್ಟ್‌ನಲ್ಲಿ 0, 8 ರನ್‌ಗೆ ವಿಕೆಟ್ ನೀಡಿದ್ದರು. ಹೀಗಾಗಿ ಸ್ಮಿತ್ ಬಗ್ಗೆ ಟೀಕೆಗಳು ಕೇಳಿಬಂದಿದ್ದವು. ಆದರೆ ತೃತೀಯ ಟೆಸ್ಟ್‌ನಲ್ಲಿ ಸ್ಮಿತ್ ಕೊಂಚ ವಿಶ್ವಾದ ಆಟ ಪ್ರದರ್ಶಿಸಿದ್ದಾರೆ.
ಆರಂಭಿಕ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಆರ್ ಅಶ್ವಿನ್ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದರು. ಹೀಗಾಗಿ ತೃತೀಯ ಟೆಸ್ಟ್‌ನಲ್ಲಿ ಅನುಭವಿ ಬೌಲರ್ ಅಶ್ವಿನ್‌ಗೆ ಒತ್ತಡ ಹಾಕಿದರೆ ಪಂದ್ಯ ಗೆಲ್ಲುವ ಸಾಧ್ಯತೆಯಿದೆ ಎಂದು ಮನಗಂಡಿರುವ ಸ್ಮಿತ್, ಅಶ್ವಿನ್ ಅವರನ್ನು ಮಾನಸಿಕವಾಗಿ ಕುಗ್ಗಿಸುವ ಯೋಚನೆಯಲ್ಲಿದ್ದಾರೆ.
'ನಾನು ಉತ್ತಮ ಸ್ಥಿತಿಯಲ್ಲಿದ್ದೇನೆ. ಕ್ರೀಸ್‌ನಲ್ಲಿ ಒಳ್ಳೆಯ ಸಮಯ ಕಳೆದೆ. ಮಾರ್ನಸ್ ಲ್ಯಬುಶೇನ್ ಜೊತೆ ಒಳ್ಳೆಯ ಪಾರ್ಟ್ನರ್‌ಶಿಪ್ ನೀಡಿದೆ. ನಾನು ಈ ಸರಣಿಯಲ್ಲಿ ಅಶ್ವಿನ್‌ಗೆ ಒತ್ತಡ ನೀಡಿಲ್ಲ. ಅಶ್ವಿನ್‌ಗೆ ಒತ್ತಡ ನೀಡಲು ಬಯಸಿದ್ದೇನೆ,' ಎಂದು ಗುರುವಾರ ಮೊದಲ ದಿನದಾಟದ ಕೊನೆಗೆ ಸ್ಮಿತ್ ಹೇಳಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications