ಸೆಹ್ವಾಗ್‌ರಲ್ಲೂ ಭಯ ಹುಟ್ಟಿಸಿದ್ದ ಆ ಬೌಲರ್ ಯಾರು?
ಬೆಂಗಳೂರು, ಅಕ್ಟೋಬರ್. 20: ಭಾರತ ಕಂಡ ಸ್ಫೋಟಕ ಆರಂಭಿಕ ವಿರೇಂದ್ರ ಸೆಹ್ವಾಗ್ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ. ಅದರೊಂದಿಗೆ ತಮ್ಮ ಕ್ರಿಕೆಟ್ ಬದುಕಿನ ಅನೇಕ ಸಂಗತಿಗಳನ್ನು ಮೆಲುಕು ಹಾಕಿದ್ದಾರೆ. ವಿಶ್ವದ ಶ್ರೇಷ್ಠ ಬೌಲರ್ ಒಬ್ಬರನ್ನು ಎದುರಿಸಲು ಸೆಹ್ವಾಗ್ ಹೆದರುತ್ತಿದ್ದರಂತೆ!
ಹೌದು.. ಶ್ರೀಲಂಕಾದ ಆಫ್ ಸ್ಪಿನ್ನರ್ ಮುತ್ತಯ್ಯ ಮುರಳಿಧರನ್ ಅವರನ್ನು ಎದುರಿಸಲು ಭಯಪಡುತ್ತಿದ್ದೆ ಎಂದು ಸೆಹ್ವಾಗ್ ಹೇಳಿದ್ದಾರೆ. ಭಾರತದ ಪರ ಟೆಸ್ಟ್ ನಲ್ಲಿ ತ್ರಿಶತಕ ಸಾಧನೆ ಮಾಡಿದ ಸೆಹ್ವಾಗ್ ತಮ್ಮ ಜನ್ಮದಿನದಂದೇ ವೃತ್ತಿಪರ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ.[ನಿವೃತ್ತಿಯ ನಿಜ ಕಾರಣ ಪತ್ರದಲ್ಲಿ ಬಿಚ್ಚಿಟ್ಟ ಸೆಹ್ವಾಗ್]

ನಿವೃತ್ತಿ ನಂತರ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ವೀರೂ, ನಾನು ಮುತ್ತಯ್ಯ ಚೆಂಡು ಎದುರಿಸಲು ಭಯಪಡುತ್ತಿದ್ದೆ ಎಂದು ಹೇಳಿದರು. ಮುರಳೀಧರನ್ ಟೆಸ್ಟ್ ನಲ್ಲಿ 800 ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ.[ಅಂಕಿ ಸಂಖ್ಯೆಗಳಲ್ಲಿ ಸೆಹ್ವಾಗ್ ಸೂಪರ್ ವೃತ್ತಿ ಬದುಕು]
ಕ್ರಿಕೆಟ್ ದಿಗ್ಗಜ ಸೌರವ್ ಗಂಗೂಲಿ ಅವರನ್ನು ಕೊಂಡಾಡಿದ ಸೆಹ್ವಾಗ್, ಕ್ರಿಕೆಟ್ ನಲ್ಲಿ ನಾನು ಸಾಧನೆ ಮಾಡಲು ದಾದಾ ಕಾರಣರು. ಅವರ ಆರಂಭಿಕ ಕ್ರಮಾಂಕವನ್ನೇ ನನಗೆ ಬಿಟ್ಟುಕೊಟ್ಟಿದ್ದರು ಎಂದು ನೆನಪು ಮಾಡಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications