ಆ ಕೆಟ್ಟ ಘಟನೆ ನನ್ನನ್ನು ಸಂಪೂರ್ಣ ಬದಲಾಯಿಸಿಬಿಟ್ಟಿತ್ತು: ಕೆಎಲ್ ರಾಹುಲ್

ಟೀಮ್ ಇಂಡಿಯಾ ಸೀಮಿತ ಓವರ್‌ಗಳ ತಂಡದಲ್ಲಿ ಕೆಎಲ್ ರಾಹುಲ್ ಭಾರತದ ಅವಿಭಾಜ್ಯ ಅಂಗವಾಗಿದ್ದಾರೆ. ಕಳೆದ ಒಂದು ವರ್ಷದಿಂದ ರಾಹುಲ್ ಪ್ರದರ್ಶನ ಅತ್ಯುನ್ನತ ಮಟ್ಟದಲ್ಲಿದೆ. ಹೀಗಾಗಿ ನಾಯಕ ವಿರಾಟ್ ಕೊಹ್ಲಿಯ ನೆಚ್ಚಿನ ಆಟಗಾರನಾಗಿಯೂ ರಾಹುಲ್ ಗುರುತಿಸಿಕೊಂಡಿದ್ದಾರೆ. ಆದರೆ ರಾಹುಲ್ ಆಟದಲ್ಲಿ ಬಹುದೊಡ್ಡ ಬದಲಾವಣೆಗೆ ಕಾರಣ ಒಂದು ಕೆಟ್ಟ ಘಟನೆ ಎಂಬುದನ್ನು ರಾಹುಲ್ ನೆನಪಿಸಿಕೊಂಡಿದ್ದಾರೆ.
ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯಾ ಖಾಸಗೀ ವಾಹಿನಿಯ ಕಾರ್ಯಕ್ರಮದಲ್ಲಿ ವಿವಾದಾತ್ಮಕವಾಗಿ ಮಾತುಗಳನ್ನಾಡಿ ವೀಕ್ಷಕರಿಂದ ಕೆಂಗಣ್ನಿಗೆ ಗುರಿಯಾಗಿದ್ದರು. ಮಾತ್ರವಲ್ಲ ಇದೇ ಕಾರಣಕ್ಕೆ ಅವರಿಗೆ ಅಮಾನತಿನ ಶಿಕ್ಷೆಯನ್ನೂ ನೀಡಲಾಗಿತ್ತು. ಈ ಘಟನೆ ವೃತ್ತಿ ಜೀವನದಲ್ಲಿ ಬಹುದೊಡ್ಡ ಬದಲಾವಣೆಗೆ ಕಾರಣವಾಯಿತು ಎಂದು ರಾಹುಲ್ ಹೇಳಿದ್ದಾರೆ.

ವೈಯಕ್ತಿಕ ಸಾಧನೆಯತ್ತ ಗಮನ ಮತ್ತು ವೈಫಲ್ಯ
2019ರ ಆರಂಭದಲ್ಲಿ ನಡೆದ ಆ ಘಟನೆಯಿಂದಾಗಿ ನಾನು ವಿಭಿನ್ನವಾಗಿ ಯೋಚಿಸಲು ಆರಂಭಿಸಿದೆ ಎಂದಿದ್ದಾರೆ ರಾಹುಲ್. ನಾನು ನನ್ನ ವೈಯಕ್ತಿಕ ಆಟದತ್ತ ಮತ್ತು ವೈಯಕ್ತಿಕವಾಗಿ ರನ್‌ಗಳಿಸುವತ್ತ ಗಮನವನ್ನು ನೀಡಿದ್ದೆ. ಆದರೆ ಅದರಲ್ಲಿ ವೈಫಲ್ಯತೆಯನ್ನು ಅನುಭವಿಸಿದೆ ಎಂದು ರಾಹುಲ್ ಹೇಳಿಕೊಂಡಿದ್ದಾರೆ.

ತಂಡದ ಅವಶ್ಯಕತೆಗೆ ಒತ್ತು
ಇದಾದ ಬಳಿಕ ಮತ್ತಷ್ಟು ಅರ್ಥ ಮಾಡಿಕೊಂಡೆ. ತಂಡಕ್ಕಾಗಿ ಆಡಲು ತಂಡದ ಅವಶ್ಯಕತೆಯನ್ನು ಅರಿತುಕೊಂಡು ಬ್ಯಾಟಿಂಗ್ ಮಾಡಲು ತಿರ್ಮಾನವನ್ನು ತೆಗೆದುಕೊಂಡೆ ಇದು ಯಶಸ್ಸು ತಂದುಕೊಟ್ಟಿತು ಎಂದು ಕೆಎಲ್ ರಾಹುಲ್ ಇಂಡಿಯಾ ಟುಡೇ ಜೊತೆಗೆ ಮಾತನಾಡುತ್ತಾ ಹೇಳಿದ್ದಾರೆ.

ಬದಲಾದ ಮನಸ್ಥಿತಿಯಿಂದ ಉತ್ತಮ ಪ್ರದರ್ಶನ
ತನ್ನ ಮನಸ್ಥಿತಿಯನ್ನು ನಾನು ಬದಲಾಯಿಸಿಕೊಂಡೆ. ಇದು ನನ್ನ ಆಟದ ಮೇಲೆ ಪರಿಣಾಮವನ್ನು ಬೀರಿತು. ಅದು ಸ್ಥಿರ ಪ್ರದರ್ಶನವನ್ನು ನೀಡಲು ಸಹಕಾರಿಯಾಯಿತು ಎಂದು ಕೆಎಲ್ ರಾಹುಲ್ ತನ್ನ ಆಟದಲ್ಲಿ ಬದಲಾವಣೆ ಆಗಲು ಕಾರಣವಾದ ಅಂಶವನ್ನು ಬಹಿರಂಗಪಡಿಸಿದ್ದಾರೆ.

ಆಪತ್ಬಾಂಧವ ರಾಹುಲ್
ಕೆಎಲ್ ರಾಹುಲ್ ಟೀಮ್ ಇಂಡಿಯಾದ ಆಪತ್ಭಾಂಧವ ಎನಿಸಿಕೊಂಡಿದ್ದಾರೆ. ಯಾವುದೇ ಕ್ರಮಾಂಕದಲ್ಲೂ ಬ್ಯಾಟಿಂಗ್ ಮಾಡಲು ಸೈ ಎನಿಸಿಕೊಂಡಿದ್ದಾರೆ. ಜೊತೆಗೆ ಸೀಮಿತ ಓವರ್‌ಗಳಲ್ಲಿ ವಿಕೆಟ್ ಕೀಪರ್ ಗಿಯೂ ಕೆಎಲ್ ತಂಡಕ್ಕೆ ನೆರವಾಗಿದ್ದಾರೆ. ಅದರಲ್ಲೂ ವಿಕೆಟ್ ಕೀಪರ್ ಆಗಿ ಭಡ್ತಿ ಪಡೆದ ನಂತರ ಕೆಎಲ್ ಐದು ಏಕದಿನ ಪಂದ್ಯಗಳಲ್ಲಿ 75.75ರ ಸರಾಸರಿಯಲ್ಲಿ 303 ರನ್ ಗಳಿಸಿ ಮಿಂಚಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications