Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಭಾರತ-ಇಂಗ್ಲೆಂಡ್ 4ನೇ ಟೆಸ್ಟ್‌ನಲ್ಲಿ ನಾನು ಇಂಗ್ಲೆಂಡ್‌ಗೆ ಚಿಯರ್ ಮಾಡ್ತೇನೆ'

I will Be Cheering For England In 4th Test Against India, says Steve Smith

ಸಿಡ್ನಿ: ಭಾರತ-ಇಂಗ್ಲೆಂಡ್ 4ನೇ ಟೆಸ್ಟ್‌ನಲ್ಲಿ ನೀವು ಯಾವ ತಂಡಕ್ಕೆ ಚಿಯರ್ ಮಾಡ್ತೀರಿ ಎನ್ನುವ ಪ್ರಶ್ನೆಗೆ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ ಸ್ಟೀವ್ ಸ್ಮಿತ್ ಮರು ಯೋಚನೆಯಿಲ್ಲದೆ ತಾನು ಇಂಗ್ಲೆಂಡ್‌ಗೆ ಬೆಂಬಲಿಸುವುದಾಗಿ ಹೇಳಿದ್ದಾರೆ. ಭಾರತ-ಇಂಗ್ಲೆಂಡ್ ನಾಲ್ಕನೇ ಟೆಸ್ಟ್‌ ಪಂದ್ಯ ಅಹ್ಮದಾಬಾದ್‌ನಲ್ಲಿ ಮಾರ್ಚ್ 4ರಿಂದ ಆರಂಭಗೊಳ್ಳಲಿದೆ.

ನಾಲ್ಕನೇ ಟೆಸ್ಟ್‌ನಲ್ಲಿ ನಾನು ವಿರಾಟ್ ಕೊಹ್ಲಿ ಪಡೆಗೆ ಬೆಂಬಲಿಸುವ ಬದಲಾಗಿ ಜೋ ರೂಟ್‌ ಬಳಗಕ್ಕೆ ಬೆಂಬಲಿಸುತ್ತೇನೆ ಎಂದು ಸ್ಟೀವ್ ಸ್ಮಿತ್ ಹೇಳಿಕೊಂಡಿದ್ದಾರೆ. ಸ್ಟೀವ್ ಸ್ಮಿತ್ ಹೀಗೆ ಹೇಳಲು ಕಾರಣವಿದೆ. ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದರೆ ಆಸ್ಟ್ರೇಲಿಯಾಕ್ಕೆ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಸ್ಪರ್ಧಿಸುವ ಅವಕಾಶ ಸಿಗುತ್ತದೆ.

ಸದ್ಯ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ 4 ಪಂದ್ಯಗಳ ಟೆಸ್ಟ್‌ ಸರಣಿ ನಡೆಯುತ್ತಿದೆ. 3 ಪಂದ್ಯಗಳು ಮುಗಿದಿದ್ದು, ಸರಣಿಯಲ್ಲಿ ಭಾರತ 2-1ರ ಮುನ್ನಡೆಯಲ್ಲಿದೆ. 4ನೇ ಟೆಸ್ಟ್‌ನಲ್ಲಿ ಭಾರತ ಗೆದ್ದರೆ ಭಾರತ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಸ್ಪರ್ಧಿಸಲಿದೆ. ಇಂಗ್ಲೆಂಡ್ ಗೆದ್ದರೆ ಆಸ್ಟ್ರೇಲಿಯಾ ಫೈನಲ್‌ನಲ್ಲಿ ಸ್ಪರ್ಧಿಸಲಿದೆ.

ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗಾಗಿ ನ್ಯೂಜಿಲೆಂಡ್‌ ತಂಡ ಆಯ್ಕೆಯಾಗಿದೆ. ಭಾರತ-ಇಂಗ್ಲೆಂಡ್ ಕೊನೇ ಟೆಸ್ಟ್‌ನಲ್ಲಿನ ಫಲಿತಾಂಶ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ವಿಜೇತರನ್ನು ನಿರ್ಧರಿಸಲಿದೆ. ಅಂದ್ಹಾಗೆ, ಕೊನೇ ಟೆಸ್ಟ್‌ ಪಂದ್ಯ ಮಾರ್ಚ್ 4ರ ಗುರುವಾರ 9.30 amಗೆ ಆರಂಭಗೊಳ್ಳಲಿದೆ.

Story first published: Wednesday, March 3, 2021, 20:52 [IST]
Other articles published on Mar 3, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+