ವಿಶ್ವಕಪ್ ಬ್ಯಾಟಿಂಗ್ ಕ್ರಮಾಂಕದ ಚರ್ಚೆ: ಬಾಯ್ಬಿಚ್ಚಿದ ಕೆಎಲ್ ರಾಹುಲ್

ನವದೆಹಲಿ, ಮೇ 17: ಮೇ 30ರಿಂದ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಆರಂಭಗೊಳ್ಳುತ್ತಿರುವ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ ನಾಲ್ಕನೇ ಬ್ಯಾಟಿಂಗ್ ಕ್ರಮಾಂಕಕ್ಕೆ ಯಾರು ಸೂಕ್ತ ಎಂಬ ವಿಚಾರ ಕ್ರಿಕೆಟ್ ವಲಯದಲ್ಲಿ ಚರ್ಚಿಸಲ್ಪಡುತ್ತಲೇಯಿದೆ. ಈ ವಿಚಾರವಾಗಿ ಕನ್ನಡಿಗ, ಸ್ಟೈಲಿಶ್ ಬ್ಯಾಟ್ಸ್ಮನ್ ಕೆಎಲ್ ರಾಹುಲ್ ಬಾಯ್ಬಿಟ್ಟಿದ್ದಾರೆ.
ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ರಾಹುಲ್, ತಂಡ ಯಾವ ಕ್ರಮಾಂಕದಲ್ಲಿ ನನ್ನನ್ನು ಬಯಸುತ್ತದೆಯೋ ಆ ಬ್ಯಾಟಿಂಗ್ ಕ್ರಮಾಂಕದಲ್ಲಿ ಇಳಿಯಲು ನಾನು ಬದ್ಧ ಎಂದಿದ್ದಾರೆ. ಕೆಎಲ್ ರಾಹುಲ್ ನಾಲ್ಕನೇ ಕ್ರಮಾಂಕಕ್ಕೆ ಹೆಚ್ಚು ಸೂಕ್ತ ಎಂಬ ದಿಲೀಪ್ ವೆಂಗ್‌ಸರ್ಕಾರ್ ಹೇಳಿಕೆಯ ಬೆನ್ನಲ್ಲೇ ರಾಹುಲ್ ಹೀಗಂದಿದ್ದಾರೆ.
ಟೀಮ್ ಇಂಡಿಯಾದ ನಾಲ್ಕನೇ ಕ್ರಮಾಂಕಕ್ಕೆ ಪಕ್ಕಾ ಆಟಗಾರ ಇಂಥವರೇ ಎಂದು ಇನ್ನೂ ನಿರ್ಧಾರವಾಗಿಲ್ಲ. ಆಯ್ಕೆ ಸಮಿತಿ ಆಲ್ ರೌಂಡರ್ ವಿಜಯ್ ಶಂಕರ್ ಅವರನ್ನು ಸೂಕ್ತ ಆಟಗಾರನೆಂದು ಬಿಂಬಿಸಿದ್ದರೆ, ಕ್ರಿಕೆಟ್ ಅಭಿಮಾನಿಗಳ ಬಳಗ/ಪಂಡಿತರ ಬಣ 4ನೇ ಕ್ರಮಾಂಕಕ್ಕೆ ಎಂಎಸ್ ಧೋನಿಯನ್ನು, ರಾಹುಲ್ ಅವರನ್ನು ಸೂಚಿಸಿತ್ತು.
ಈ ವಿಚಾರವಾಗಿ ಮಾತನಾಡಿದ ರಾಹುಲ್, 'ನಾನು ತಂಡದ ಭಾಗವಾಗಿರೋದನ್ನು ಆಯ್ಕೆ ಸಮಿತಿ ಸ್ಪಷ್ಟವಾಗಿ ಹೇಳಿದೆ; ಹೀಗಾಗಿ ಅಲ್ಲಿಗೆ ಹೋದ ಮೇಲೆ ತಂಡ ಬಯಸಿದ ಕ್ರಮಾಂಕದಲ್ಲಿ ಆಡುತ್ತೇನೆ' ಎಂದು ಪ್ರತಿಕ್ರಿಯಿಸಿದ್ದಾರೆ. ಹಿಂದೆ ಪ್ರವಾಸ ಸರಣಿಗಳಲ್ಲಿ ಆರಂಭಿಕಾಗಿ ಬ್ಯಾಟಿಂಗ್‌ಗೆ ಇಳಿಯುತ್ತಿದ್ದ ರಾಹುಲ್ ಚೊಚ್ಚಲ ವಿಶ್ವಕಪ್‌ನಲ್ಲಿ 4ನೇ ಕ್ರಮಾಂಕದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications