Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಿಸಿಸಿಐ ಕೇಳಿದ್ರೂ ಆ ಪತ್ರಕರ್ತನ ಹೆಸರು ಬಹಿರಂಗಪಡಿಸಲ್ಲ: ವೃದ್ಧಿಮಾನ್ ಸಾಹ

I will not reveal journalists name if BCCI asks: Wriddhiman Saha reaction

ಸಂದರ್ಶನಕ್ಕಾಗಿ ಬೆದರಿಕೆ ಹಾಕಿದ್ದ ಪತ್ರಕರ್ತನ ಸಂದೇಶವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳುವ ಮೂಲಕ ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ವೃದ್ಧಿಮಾನ್ ಸಾಹಾ ಸುದ್ದಿಯಾಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಮಾಜಿ ಕೋಚ್ ರವಿ ಶಾಸ್ತ್ರಿ ಸಹಿತ ಅನೇಕ ಮಾಜಿ ಕ್ರಿಕೆಟಿಗರು ವೃದ್ಧಿಮಾನ್ ಸಾಹಾ ಬೆಂಬಲಕ್ಕೆ ನಿಂತಿದ್ದರು. ಬಿಸಿಸಿಐ ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಮುಂದಾಗಿದೆ ಎನ್ನಲಾಗಿದೆ.

ಆದರೆ ಈ ಘಟನೆಗೆ ಸಂಬಂಧಿಸಿದಂತೆ ಸ್ವತಃ ವೃದ್ಧಿಮಾನ್ ಸಾಹ ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವುದನ್ನು ವರದಿ ಮಾಡಿದೆ. ಈ ಸಮದರ್ಭದಲ್ಲಿ ವೃದ್ಧಿಮಾನ್ ಸಾಹಾ ತನ್ನಲ್ಲಿ ಬಿಸಿಸಿಐ ಆ ಪತ್ರಕರ್ತ ಯಾರು ಎಂದು ಹೇಳುವಂತೆ ಕೇಳಿಕೊಂಡರು ನಾನು ಆ ಪತ್ರಕರ್ತನ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದಿದ್ದಾರೆ. ತಾನು ಯಾರಿಗೂ ಕೆಡುಕುಂಟಾಗಲು ಬಯಸುವುದಿಲ್ಲ ಎಂದು ಈ ವಿಚಾರವಾಗಿ ಹೇಳಿಕೊಂಡಿದ್ದಾರೆ.

ಬಿಸಿಸಿಐ ಜೊತೆಗೆ ಯಾವುದೇ ಸಂವಹನವಾಗಿಲ್ಲ: ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಈವರೆಗೂ ನನ್ನ ಬಳಿ ಯಾವುದೇ ಮಾಹಿತಿಯನ್ನು ಪಡೆದುಕೊಂಡಿಲ್ಲ ಎಂಬ ಅಂಶವನ್ನು ಸಾಹಾ ತಿಳಿಸಿದ್ದಾರೆ. ಅವರೇನಾದರೂ ನನ್ನ ಬಳಿ ಆ ಪತ್ರರ್ತನ ಗುರುತನ್ನು ಬಹಿರಂಗಪಡಿಸುವಂತೆ ಕೇಳಿಕೊಂಡರೂ ನನ್ನ ಉದ್ದೇಶ ಯಾರ ವೃತ್ತಿಬದುಕಿಗೂ ಹಾನಿಯುಂಟು ಮಾಡುವುದು ಅಥವಾ ಅವರನ್ನು ಕೆಳಗಿಳಿಯುವಂತೆ ಮಾಡುವುದು ನನ್ನ ಉದ್ದೇಶವಲ್ಲ ಎಂದು ಸ್ಪಷ್ಟವಾಗಿ ಹೇಳುತ್ತೇನೆ. ಅದೇ ಕಾರಣದಿಂದಾಗಿ ನನ್ನ ಟ್ವೀಟ್‌ನಲ್ಲಿ ಗುರುತನ್ನು ಕೂಡ ನೀಡಲು ಬಯಸಿಲ್ಲ" ಎಂದಿದ್ದಾರೆ.

"ನನ್ನ ಹೆತ್ತವರು ನನಗೆ ಅದನ್ನು ಹೇಳಿಕೊಟ್ಟಿಲ್ಲ. ಮಾಧ್ಯಮದಲ್ಲಿ ಕುಳಿತು ಈ ರೀತಿ ಮಾಡುವುದನ್ನು, ಆಟಗಾರರ ಆದ್ಯತೆಯನ್ನು ಗೌರವಿಸದೇ ಇರುವಂತಾ ಸತ್ಯವನ್ನು ಬಹಿರಂಗಪಡಿಸುವುದು ಮಾತ್ರವೇ ನನ್ನ ಟ್ವೀಟ್‌ನ ಉದ್ದೇಶವಾಗಿತ್ತು" ಎಂದು ವೃದ್ಧಿಮಾನ್ ಸಾಹಾ ನಿಡಿರುವ ಹೇಳಿಕೆಯನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ಬರದಿ ಮಾಡಿದೆ.

"ನಾನು ನನ್ನ ಟ್ವೀಟ್‌ನಲ್ಲಿ ಹೇಳಲು ಬಯಸಿದ್ದು ಇಷ್ಟು ಅಂಶಗಳನ್ನು ಮಾತ್ರ. ಅದನ್ನು ಮಾಡಿದಾತನಿಗೆ ಈ ಬಗ್ಗೆ ಚೆನ್ನಾಗಿ ತಿಳಿದಿದೆ. ನಾನು ಈ ಬಗ್ಗೆ ಪೊಸ್ಟ್ ಯಾಕೆ ಮಾಡಿದ್ದೆನೆಂದರೆ ಬೇರೆ ಯಾವ ಕ್ರಿಕೆಟಿಗರು ಕೂಡ ಇಂತಾ ಸ್ಥಿತಿಯನ್ನು ಎದುರಿಸಬಾರದು ಎಂಬುದಾಗಿತ್ತು. ಆತ ಮಾಡುತ್ತಿರುವುದು ಸರಿಯಲ್ಲ ಎಂಬುದು ಆತನಿಗೆ ತಿಳಿಸುವುದು ನನ್ನ ಉದ್ಧೇಶವಾಗಿತ್ತು. ಯಾರು ಕೂಡ ಇಂತದ್ದನ್ನು ಮುಂದೆ ಮಾಡಬಾರದು" ಎಂದು ಸಾಹ ಪ್ರತಿಕ್ರಿಯಿಸಿದ್ದಾರೆ.

37ರ ಹರೆಯದ ವೃದ್ಧಿಮಾನ್ ಸಾಹ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಅದಾದ ನಂತರ ಟ್ವಿಟ್ಟರ್‌ನಲ್ಲಿ "ಗೌರವಯುತ" ಪತ್ರಕರ್ತನೋರ್ವ ಸಂದರ್ಶನದ ನಿಡದ ಕಾರಣಕ್ಕೆ ಬೆದರಿಕೆ ಹಾಕಿರುವ ಸಂದೇಶಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು. "ಭಾರತೀಯ ಕ್ರಿಕೆಟ್‌ಗೆ ನಾನು ಒಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ 'ಗೌರವಯುತ' ಪತ್ರಕರ್ತನೋರ್ವನಿಂದ ಎದುರಿಸುತ್ತಿರುವುದು ಇದನ್ನು. ಪತ್ರಿಕೋದ್ಯಮ ಎಂಬುದು ಈ ಮಟ್ಟಕ್ಕೆ ತಲುಪಿದೆ" ಎಂದು ಸಾಹ ಟ್ವಿಟ್ ಮಾಡಿದ್ದರು.

ವೂದ್ಧಿಮಾನ್ ಸಾಹ ಮಾಡಿದ ಈ ಟ್ವೀಟ್‌ಗೆ ಮಾಜಿ ಕೋಚ್ ರವಿ ಶಾಸ್ತ್ರಿ, ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಹಾಗೂ ಹರ್ಭಜನ್ ಸಿಂಗ್ ಸಹಿತ ಹಲವಾರು ಮಂದಿ ಮುಂದೆ ಬಂದು ಬೆಂಬಲಕ್ಕೆ ನಿಂತಿದ್ದರು. ಅಲಲ್ದೆ ಆ ಪತ್ರಕರ್ತ ಯಾರು ಎಂಬುದನ್ನು ಬಹಿರಂಗಪಡಿಸಿ ಎಂಬ ಒತ್ತಾಯವನ್ನು ಕೂಡ ಮಾಡಿದ್ದಾರೆ.

Story first published: Wednesday, February 23, 2022, 9:52 [IST]
Other articles published on Feb 23, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+