Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಈ ವರ್ಷವನ್ನು ಯಾವತ್ತಿಗೂ ಮರೆಯಲಾರೆ: ಹುಟ್ಟುಹಬ್ಬದ ಸಂಭ್ರಮದಲ್ಲಿ ಕೊಹ್ಲಿ ಹೇಳಿಕೆ

I would definitely not rule out this year out of my life: Virat Kohli

ಈ ವರ್ಷ ವಿಶ್ವಾದ್ಯಂತ ಕೋಟ್ಯಂತರ ಜನರು ಸಂಕಷ್ಟಕ್ಕೆ ಸಿಕುಕಿದ ವರ್ಷ. ಕೊರೊನಾ ವೈರಸ್‌ನ ಕಾರಣದಿಂದಾಗಿ ನಿತ್ಯವೂ ಅದೆಷ್ಟೋ ಜನರು ಪ್ರಾಣವನ್ನು ಕಳೆದುಕೊಳ್ಳುತ್ತಿದ್ದರೆ ಆರ್ಥಿಕವಾಗಿಯೂ ಅಷ್ಟೇ ಸಂಖ್ಯೆಯಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಮಧ್ಯೆ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಈ ವರ್ಷ ಹೆಚ್ಚು ಸಂಭ್ರಮಿಸುವಂತಾಗಿದೆ. ಅದಕ್ಕೆ ಕಾರಣ ಕೊಹ್ಲಿ ಅನುಷ್ಕಾ ದಂಪತಿ ಮೊದಲನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹುಟ್ಟುಹಬ್ಬದ ಸಂತಸದಲ್ಲಿರುವ ಕೊಹ್ಲಿ ಈ ವರ್ಷವನ್ನು ತಾನು ಯಾವತ್ತಿಗೂ ಮರೆಯಲಾರೆ ಎಂದಿದ್ದಾರೆ.

"ಈ ವರ್ಷವನ್ನು ನನ್ನ ಬದುಕಿನಲ್ಲಿ ಯಾವತ್ತಿಗೂ ಮರೆಯಲಾರೆ. ಹೌದು ಇದು ಪ್ರತಿಯೊಬ್ರಿಗೂ ಕಠಿಣವಾದ ವರ್ಷವಾಗಿದೆ. ಆದರೆ ಇದರ ಜೊತೆಗೆ ನಮಗೆ ಈ ವರ್ಷ ಸಾಕಷ್ಟು ಆಶಿರ್ವಾದವನ್ನು ತಂದಿದೆ. ನಾನು ಮತ್ತು ಪತ್ನಿ ಅನುಷ್ಕಾ ಬದುಕಿನ ಇನ್ನೊಂದು ಹಂತಕ್ಕೆ ಪ್ರವೇಶಿಸುತ್ತಿದ್ದೇವೆ" ಎಂದು ವಿರಾಟ್ ಕೊಹ್ಲಿ ಸ್ಟಾರ್‌ಸ್ಪೋರ್ಟ್ಸ್‌ಗೆ ನಿಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಈ ಬಾರಿಯ ಐಪಿಎಲ್ ಟೂರ್ನಿಯ ಬಗ್ಗೆಯೂ ಕೊಹ್ಲಿ ಮಾತನಾಡಿದ್ದಾರೆ. "ಇದೊಂದು ಅದ್ಭುತವಾದ ಪಂದ್ಯಾವಳಿಯಾಗಿದೆ. ಇದು ಅತ್ಯಂತ ಆಪ್ತವಾದ ಟೂರ್ನಮೆಂಟ್ ಎಂಬುದಲ್ಲಿ ಯಾವುದೇ ಆಶ್ಚರ್ಯವಿಲ್ಲ. ಬಹುಶಃ ದೇವರು ಕೂಡ ಇದನ್ನೇ ಬಯಸಿದ್ದಾನೆ. ಜನರು ತಮ್ಮ ಎಲ್ಲಾ ದುಃಖಗಳನ್ನು ಮರೆಯಲು ದೇವರು ಕೂಡ ಬಯಸುತ್ತಾನೆ" ಎಂದು ಕೊಹ್ಲಿ ಹೇಳಿಕೆ ನೀಡಿದ್ದಾರೆ.

"ನಾನು ಬಯಸುವುದು ಹುಟ್ಟುಹಬ್ಬದ ಶುಭಾಶಯಗಳನ್ನು ಮೀರಿ ಮುನ್ನಡೆಯುವುದನ್ನು. ವೈಯಕ್ತಿಕವಾಗಿ ನಾನು ಹುಟ್ಟುಹಬ್ಬವನ್ನು ಸಂಭ್ರಮಿಸಲು ಇಷ್ಟಪಡುವುದಿಲ್ಲ. ನಾನು ಪತ್ನಿ ಅನುಷ್ಕಾ ಹಾಗೂ ನನ್ನ ಕುಟುಂಬದೊಂದಿಗೆ ಸಮಯಕಳೆಯುವುದನ್ನು ಬಯಸುತ್ತೇನೆ. " ಎಂದು ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಯಶಸ್ಸು ಸಾಧಿಸುವ ಬಗ್ಗೆಯೂ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಆರ್‌ಸಿಬಿ ತಂಡವನ್ನು ಪ್ರತೀತಿಸುವ ಹಾಗೂ ಬಯಸುವ ಕ್ರಿಕೆಟ್‌ನ ಬ್ರ್ಯಾಂಡ್‌ಅನ್ನು ಆಡಲು ಬಯಸುತ್ತೇವೆ. ಎಬಿ ಡಿವಿಲಿಯರ್ಸ್ ಹೇಳಿದಂತೆ ಮುಂದಿನದ್ದು ದೊಡ್ಡ ವಾರ. ಈ ಸಂದರ್ಭದಲ್ಲಿ ನಾವು ಯಾವುದೇ ಕಾರಣಕ್ಕೂ ಇಟ್ಟ ಹೆಜ್ಜೆಯನ್ನು ಹಿಂದಿಡಲಾರೆವು" ಎಂದು ವಿರಾಟ್ ಕೊಹ್ಲಿ ವಿಶ್ವಾಸದಿಂದ ಹೇಳಿದ್ದಾರೆ.

Story first published: Thursday, November 5, 2020, 20:49 [IST]
Other articles published on Nov 5, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+