Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿರಾಟ್ ಕೊಹ್ಲಿಯ ತಂಡದ ಜೊತೆಗಿರಲು ಇಷ್ಟಪಡುತ್ತೇನೆ: ಬಾರ್ಡರ್

I would love to be in a team with Virat Kohli says Allan Border

ಸಿಡ್ನಿ: ಭಾರತದ ಕ್ರಿಕೆಟ್ ಬೆಳವಣಿಗೆಯ ಶ್ರೇಯಸ್ಸನ್ನು ಆಸ್ಟ್ರೇಲಿಯಾದ ಮಾಜಿ ನಾಯಕ ಅಲನ್ ಬಾರ್ಡರ್ ಅವರು ಭಾರತದ ಈಗಿನ ನಾಯಕ ವಿರಾಟ್ ಕೊಹ್ಲಿಗೆ ನೀಡಿದ್ದಾರೆ. ಕೊಹ್ಲಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವ ಬಾರ್ಡರ್, ವಿರಾಟ್ ಕೊಹ್ಲಿಯಿರುವ ತಂಡದಲ್ಲಿ ನಾನೂ ಇರಲು ಇಷ್ಟಪಡುತ್ತೇನೆ ಎಂದಿದ್ದಾರೆ.

ಕ್ವೀನ್ಸ್‌ಲ್ಯಾಂಡ್‌ನಲ್ಲಿ ಗುರುವಾರ (ನವೆಂಬರ್ 19) ನಡೆದ ವರ್ಚುಯಲ್ ಸಂವಾದದಲ್ಲಿ ಪಾಲ್ಗೊಂಡ ಆಸ್ಟ್ರೇಲಿಯಾ ದಂತಕತೆ ಅಲನ್ ಬಾರ್ಡರ್, 'ನಾನು ನಾಯಕನಾಗಿದ್ದು ಹೇಳುತ್ತೇನೆ. ವಿರಾಟ್ ಕೊಹ್ಲಿ ಜೊತೆ ತಂಡದಲ್ಲಿರಲು ನಾನು ಇಷ್ಟಪಡುತ್ತೇನೆ' ಎಂದಿದ್ದಾರೆ.

ಭಾರತದ ನಾಯಕ ಕೊಹ್ಲಿಗೆ ಆಸ್ಟ್ರೇಲಿಯಾ ಪರ ಆಡುವ ಆಹ್ವಾನವನ್ನೂ ಬಾರ್ಡರ್ ನೀಡಿದ್ದಾರೆ. 'ಕೊಹ್ಲಿಯ ನವಜಾತ ಶಿಶು ಇಲ್ಲೇ ಜನಿಸಿದ್ದರೆ ಒಳ್ಳೆಯದಿತ್ತು ಅಂತ ನಾವು ಅಂದುಕೊಳ್ಳುತ್ತೇವೆ. ಯಾಕೆಂದರೆ ನಾವು ಕೊಹ್ಲಿಯ ಸಂತತಿಯನ್ನು ಆಸ್ಟ್ರೇಲಿಯಾದವರು ಎಂದು ಹೇಳಿಕೊಳ್ಳಬಹುದಿತ್ತು,' ಎಂದು ಬಾರ್ಡರ್ ತಮಾಷೆಯಾಗಿ ನುಡಿದಿದ್ದಾರೆ.

ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿರುವ ಭಾರತ ಅಲ್ಲಿ 3 ಏಕದಿನ ಪಂದ್ಯಗಳು, 3 ಟಿ20ಐ ಪಂದ್ಯಗಳು ಮತ್ತು 4 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಇದರಲ್ಲಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಪ್ರಮುಖಾಕರ್ಷಣೆಯಾಗಿರಲಿದೆ. ಕಳೆದ ವರ್ಷ ಕೊಹ್ಲಿ ಈ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿತ್ತು.

Story first published: Friday, November 20, 2020, 13:10 [IST]
Other articles published on Nov 20, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+