ಕೊಹ್ಲಿ ಅಲ್ಲ, ರೋಹಿತ್ ಅಲ್ಲ, ಈ ಕನ್ನಡಿಗನಿಗೆ ಬೌಲಿಂಗ್ ಮಾಡುವ ಆಸೆ ಹೊರಹಾಕಿದ ಕಪಿಲ್ ದೇವ್

ಸದ್ಯ ಭಾರತ ಕ್ರಿಕೆಟ್ ತಂಡದಲ್ಲಿ ಇರುವ ಆಟಗಾರರ ಪೈಕಿ ಅತಿ ಹೆಚ್ಚು ಚರ್ಚೆಗೆ ಒಳಗಾಗಿರುವ ಆಟಗಾರರೆಂದರೆ ಅದು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ. ಯಾವುದೇ ಹಿರಿಯ ಕ್ರಿಕೆಟಿಗರಾದರೂ ಸಂದರ್ಶನಗಳಲ್ಲಿ ಮಾತನಾಡುವ ವೇಳೆ ಪತ್ರಕರ್ತರು ಈಗಿನ ತಲೆಮಾರಿನ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕುರಿತಾಗಿ ಪ್ರಶ್ನೆಗಳನ್ನು ಹಾಕುವುದು ಸಾಮಾನ್ಯ. ಹಾಗೂ ಹಿರಿಯ ಕ್ರಿಕೆಟಿಗರು ಕೂಡ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಬಗ್ಗೆ ಹೆಚ್ಚು ಮಾತನಾಡುವುದು ರೂಢಿಯಾಗಿಬಿಟ್ಟಿದೆ.
ಹೀಗಿರುವಾಗ ಟೀಮ್ ಇಂಡಿಯಾಗೆ ಚೊಚ್ಚಲ ಐಸಿಸಿ ಏಕದಿನ ವಿಶ್ವಕಪ್ ಟ್ರೋಫಿಯನ್ನು ಗೆಲ್ಲಿಸಿಕೊಟ್ಟಂತಹ ಪ್ರತಿಭಾವಂತ ನಾಯಕ ಕಪಿಲ್ ದೇವ್ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿ ತಾವು ಈಗಿನ ಟೀಮ್ ಇಂಡಿಯಾದಲ್ಲಿರುವ ಆಟಗಾರರ ಪೈಕಿ ಯಾವ ಆಟಗಾರನಿಗೆ ಬೌಲಿಂಗ್ ಮಾಡಲು ಹಾಗೂ ಯಾವ ಬೌಲರ್‌ನ ಎಸೆತಗಳನ್ನು ಎದುರಿಸಲು ಇಚ್ಛಿಸುತ್ತೇನೆ ಎಂಬುದನ್ನು ತಿಳಿಸಿದ್ದಾರೆ.
ಹೌದು, ಈಗಿನ ತಲೆಮಾರಿನ ಆಟಗಾರರು ಮತ್ತು ಹಿರಿಯ ಕ್ರಿಕೆಟಿಗರ ನಡುವಿನ ಮುಖಾಮುಖಿಯಲ್ಲಿ ಪಂದ್ಯ ನಡೆದರೆ ಹೇಗಿರುತ್ತದೆ ಎಂಬ ಊಹೆ ಪ್ರಸ್ತುತ ಕ್ರಿಕೆಟ್ ಅಭಿಮಾನಿಗಳಲ್ಲಿ ಯಥೇಚ್ಚವಾಗಿದ್ದು, ಈ ಕುರಿತಾಗಿ ಪ್ರಶ್ನೆ ಎದುರಾದಾಗ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಈ ಕೆಳಕಂಡಂತೆ ಹೇಳಿಕೆ ನೀಡಿದ್ದಾರೆ.

ಈ ಆಟಗಾರನಿಗೆ ಬೌಲಿಂಗ್ ಮಾಡುವ ಆಸೆ ಬಿಚ್ಚಿಟ್ಟ ಕಪಿಲ್ ದೇವ್
ಹೀಗೆ ಈಗಿನ ತಲೆಮಾರಿನ ಯಾವ ಬ್ಯಾಟ್ಸ್‌ಮನ್‌ಗೆ ಬೌಲಿಂಗ್ ಮಾಡಲು ಇಚ್ಛಿಸುತ್ತೀರಾ ಎಂಬ ಪ್ರಶ್ನೆ ಎದುರಾದಾಗ ವಿರಾಟ್ ಕೊಹ್ಲಿ ಅಥವಾ ರೋಹಿತ್ ಶರ್ಮಾ ಅವರ ಹೆಸರನ್ನು ತೆಗೆದುಕೊಳ್ಳದ ಕಪಿಲ್ ದೇವ್ ಪ್ರಸ್ತುತ ಸ್ಥಿರ ಪ್ರದರ್ಶನ ನೀಡುತ್ತಿರುವ ಕೆಎಲ್ ರಾಹುಲ್ ಅವರಿಗೆ ಬೌಲಿಂಗ್ ಮಾಡಲು ಇಚ್ಛಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಹೌದು, ಕೆಎಲ್ ರಾಹುಲ್ ಅಂತರರಾಷ್ಟ್ರೀಯ ಹಾಗೂ ಐಪಿಎಲ್ ಪಂದ್ಯಗಳಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಾ ಸ್ಥಿರತೆ ಕಾಯ್ದುಕೊಂಡಿರುವುದು, ಕಪಿಲ್ ದೇವ್ ಅವರು ಕೆ ಎಲ್ ರಾಹುಲ್ ಅವರನ್ನು ಆಯ್ಕೆ ಮಾಡಿಕೊಳ್ಳಲು ಪ್ರಮುಖವಾದ ಕಾರಣ ಎನ್ನಬಹುದು.

ಈ ಬೌಲರ್ ಎದುರು ಬ್ಯಾಟ್ ಬೀಸಲು ಇಷ್ಟ
ಯಾವ ಆಟಗಾರನಿಗೆ ಬೌಲಿಂಗ್ ಮಾಡಲು ಇಷ್ಟ ಪಡುತ್ತೀರಾ ಎಂದಾಗ ಕೆಎಲ್ ರಾಹುಲ್ ಎಂದು ಉತ್ತರಿಸಿದ ಕಪಿಲ್ ದೇವ್, ಯಾವ ಆಟಗಾರನ ಬೌಲಿಂಗ್ ಎದುರಿಸಲು ಇಚ್ಛಿಸುತ್ತೀರಾ ಎಂಬ ಪ್ರಶ್ನೆ ಎದುರಾದಾಗ ಜಸ್ ಪ್ರೀತ್ ಬೂಮ್ರಾ ಎಂದು ಉತ್ತರಿಸಿದ್ದಾರೆ.

ಕಪಿಲ್ ದೇವ್ ಅಂಕಿ ಅಂಶ
1983ರಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿ ಏಕದಿನ ವಿಶ್ವಕಪ್ ಟ್ರೋಫಿಯನ್ನು ಮೊದಲ ಬಾರಿಗೆ ಭಾರತಕ್ಕೆ ಗೆಲ್ಲಿಸಿಕೊಟ್ಟ ಹಿರಿಮೆಯನ್ನು ಹೊಂದಿರುವ ಕಪಿಲ್ ದೇವ್ 131 ಏಕದಿನ ಪಂದ್ಯ ಹಾಗೂ 115 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಪೈಕಿ 5248 ಟೆಸ್ಟ್ ರನ್ ಕಲೆಹಾಕಿರುವ ಕಪಿಲ್ ದೇವ್ 3783 ಏಕದಿನ ರನ್‌ಗಳನ್ನು ಕಲೆ ಹಾಕಿದ್ದಾರೆ. ಆಲ್ ರೌಂಡರ್ ಆಟಗಾರರಾಗಿದ್ದ ಕಪಿಲ್ ದೇವ್ 431 ಟೆಸ್ಟ್ ವಿಕೆಟ್ ಹಾಗೂ 253 ಏಕದಿನ ವಿಕೆಟ್‍ಗಳನ್ನು ಪಡೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications