ವಿಕ್ರಮ್ ರಾಥೋರ್‌ಗೆ ಕ್ರೆಡಿಟ್ ನೀಡಲು ಬಯಸುತ್ತೇನೆ: ಆರ್ ಅಶ್ವಿನ್

ಚೆನ್ನೈ: ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿನ ಅದ್ಭುತ ಬ್ಯಾಟಿಂಗ್‌ಗೆ ಆ ಅಶ್ವಿನ್ ಹೆಚ್ಚು ಸುದ್ದಿಯಾಗಿದ್ದಾರೆ. ಬೌಲಿಂಗ್ ಆಲ್ ರೌಂಡರ್ ಆಗಿರುವ ಅಶ್ವಿನ್ ದ್ವಿತೀಯ ಟೆಸ್ಟ್‌ನಲ್ಲಿ ಶತಕ ಬಾರಿಸಿ ತಂಡ ಉತ್ತಮ ರನ್ ಪೇರಿಸುವಲ್ಲಿ ಪ್ರಮುಖ ಕಾರಣರಾಗಿದ್ದಾರೆ.
ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ದ್ವಿತೀಯ ಟೆಸ್ಟ್‌ನ ಮೂರನೇ ದಿನದಾಟದ ಮುಕ್ತಾಯದ ಬಳಿಕ ಮಾತನಾಡಿದ ಆರ್ ಅಶ್ವಿನ್, ತನ್ನ ಬ್ಯಾಟಿಂಗ್ ಸಾಧನೆಯ ಕ್ರೆಡಿಟ್ ಅನ್ನು ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್‌ಗೆ ನೀಡಲು ಬಯಸುತ್ತೇನೆ ಎಂದಿದ್ದಾರೆ.
ಅಶ್ವಿನ್, ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದಿದ್ದರು. ಅಲ್ಲದೆ ಭಾರತದ ದ್ವಿತೀಯ ಇನ್ನಿಂಗ್ಸ್‌ನಲ್ಲಿ 148 ಎಸೆತಗಳಲ್ಲಿ 106 ರನ್ ಬಾರಿಸಿ ಮಿಂಚಿದ್ದರು. ಅಶ್ವಿನ್ ಶತಕದ ನೆರವಿನಿಂದ ಭಾರತ ದ್ವಿತೀಯ ಇನ್ನಿಂಗ್ಸ್‌ನಲ್ಲಿ 286 ರನ್ ಬಾರಿಸಲು ಸಾಧ್ಯವಾಗಿತ್ತು. ಇದರಿಂದ ಭಾರತ ತಂಡ ಇಂಗ್ಲೆಂಡ್‌ಗೆ ಸವಾಲಿನ ರನ್ ಗುರಿ ನೀಡಿತ್ತು.
ಮೂರನೇ ದಿನದಾಟದ ಮುಕ್ತಾಯದ ಬಳಿಕ ಮಾತನಾಡಿದ ಅಶ್ವಿನ್, 'ಈ ಸಾಧನೆ ಮಾಡಲು ಬರೀ ಮೂರು ದಿನದಲ್ಲಿ ಸಾಧ್ಯವಾಯ್ತು ಅಂತ ನಾನು ಹೇಳಲಾರೆ. ನಾನು ವಿಕ್ರಮ್ ರಾಥೋರ್ ಅವರೊಂದಿಗೆ ಅಭ್ಯಾಸ ಮಾಡುತ್ತಿದ್ದೇನೆ. ಕಳೆದ ನಾಲ್ಕು ಐದು ಪಂದ್ಯಗಳಲ್ಲಿನ ನನ್ನ ಬ್ಯಾಟಿಂಗ್‌ನ ಕ್ರೆಡಿಟ್ ಅನ್ನು ನಾನು ಬ್ಯಾಟಿಂಗ್ ಕೋಚ್ ರಾಥೋರ್‌ಗೆ ನೀಡಲು ಬಯಸುತ್ತೇನೆ,' ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications