ಮಿಥಾಲಿ ರಾಜ್ ಸಾಧನೆ ಕೊಂಡಾಡಿದ ನಾಯಕಿ ಹರ್ಮನ್‌ಪ್ರೀತ್ ಕೌರ್

ಟೀಮ್ ಇಂಡಿಯಾ ಮಹಿಳಾ ಕ್ರಿಕೆಟ್ ತಂಡದ ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ಭಾರತೀಯ ಕ್ರಿಕೆಟ್‌ನಲ್ಲಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸುದೀರ್ಘ ವೃತ್ತಿ ಬದುಕಿನಲ್ಲಿ ಮಿಥಾಲಿ ಭಾರತಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. ಮಿಥಾಲಿ ರಾಜ್ ಸಾಧನೆಯ ಬಗ್ಗೆ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಮಾತನಾಡಿದ್ದಾರೆ.
ಹರ್ಮನ್‌ಪ್ರೀತ್ ಕೌರ್ ಮಿಥಾಲಿ ರಾಜ್ ಭಾರತ ಕ್ರಿಕೆಟ್ ತಂಡಕ್ಕೆ ಅತ್ಯಂತ ಸ್ಮರಣೀಯ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ. ಮಿಥಾಲಿ ರಾಜ್ ಭಾರತೀಯ ಕ್ರಿಕೆಟ್‌ಗೆ ನೀಡಿದ ಕೊಡುಗೆಯಷ್ಟು ನನ್ನಿಂದ ಭಾರತ ತಂಡಕ್ಕೆ ನೀಡಲು ಸಾಧ್ಯವಾಗಲಾರದು ಎಂದು ಹರ್ಮನ್ ಪ್ರೀತ್‌ಕೌರ್ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಹರ್ಮನ್‌ಪ್ರೀತ್ ಕೌರ್ ಹಾಗೂ ಮಿಥಾಲಿ ರಾಜ್ ನಡುವಿನ ವಿವಾದದ ಬಗ್ಗೆಯೂ ಮಾತನಾಡಿದರು. 2018ರ ಟಿ20 ವಿಶ್ವಕಪ್‌ನ ಸೆಮಿ ಫೈನಲ್‌ನ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ಅವರನ್ನು ಹೊರಗಿಡಲಾಗಿತ್ತು. ಬಳಿಕ ಅದೇ ತಂಡ ಫೈನಲ್ ಪಂದಗಯದಲ್ಲಿ ಆಸ್ಟ್ರೇಲಿಯಾ ವಿರುದ್ಧವೂ ಕಣಕ್ಕಿಳಿದಿತ್ತು. ಇದರ ವಿರುದ್ಧ ಮಿಥಾಲಿ ರಾಜ್ ಸಾರ್ವಜನಿಕವಾಗಿ ಟೀಕಿಸಿದ್ದರು.
ತಂಡದಿಂದ ಹೊರಗಿಡಲು ಕೋಚ್ ರಮೇಶ್ ಪೊವಾರ್ ಅವರು ಕಾರಣ ಎಂದು ಆರೋಪವನ್ನು ಮಾಡಿದ್ದರು. ಈ ವಿಚಾರವಾಗಿ ಮಾತನಾಡಿದ ಹರ್ಮನ್‌ಪ್ರೀತ್ ಕೌರ್ 'ಇದರಲ್ಲಿ ತನ್ನನ್ನು ಕೆಲವರು ಬೇಕಂತಲೇ ಎಳೆದುತಂದರು. ಈ ಬಗ್ಗೆ ಮಿಥಾಲಿ ರಾಜ್ ಜೊತೆಗೆ ಯಾವುದೇ ಅಸಾಮಾದಾನವೂ ಇರಲಿಲ್ಲ ಎಂದು ಹರ್ಮನ್‌ಪ್ರೀತ್ ಕೌರ್ ಹೇಳಿದ್ದಾರೆ.
ತಂಡ ಎತ್ತರದ ಹಂತವನ್ನು ತಲುಪಿದಾಗ ಇಂತದ್ದು ನಡೆಯುತ್ತದೆ. ಅದಕ್ಕೆ ಯಾರು ಕಾರಣ ಎಂದು ಹೇಳಲು ಇದು ವೇದಿಕೆಯಲ್ಲ. ಮಿಥಾಲಿ ರಾಜ್ ನನಗಿಂತ ಸಾಕಷ್ಟು ಸೀನಿಯರ್. 20 ವರ್ಷಗಳ ಕಾಳ ಅವರು ಕ್ರಿಕೆಟ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಅರ್ಧದಷ್ಟು ಕ್ರಿಕೆಟ್ ಕೂಡ ನಾನು ಆಡಿಲ್ಲ. ಅವರೊಂದಿಗೆ ನನ್ನ ಹೋಲಿಕೆ ಸರಿಯಲ್ಲ ಎಂದು ಹರ್ಮನ್‌ಪ್ರೀತ್ ಕೌರ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications